Fact check: ಹಿಟ್ಲರ್ ಆದ್ರಾ ಪುಟಿನ್? ನಕಲಿ ಟೈಮ್ ಕವರ್ ಹೀಗಿದೆ
ಉಕ್ರೇನ್ ಮೇಲೆ ನಿರಂತರ ದಾಳಿಯಿಂದಾಗಿ ರಷ್ಯಾ ವಿರುದ್ಧ ಬೇರೆ ದೇಶಗಳು ಕೋಪಗೊಂಡಿವೆ. ಈ ಮಧ್ಯೆ ರಷ್ಯಾ ಹಾಗೂ ಉಕ್ರೇನ್ ನಡುವಿನ ದಾಳಿಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಮತ್ತು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ಜೊತೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಾಣಿಸಿಕೊಂಡಿರುವ ಟೈಮ್ ನಿಯತಕಾಲಿಕದ ಮುಖಪುಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಆದರೆ ಈ ಎರಡು ವೈರಲ್ ಚಿತ್ರಗಳು ನಕಲಿ ಎಂದು ಕಂಡುಹಿಡಿಯಲಾಗಿದೆ. ಚಿತ್ರಗಳನ್ನು ಗ್ರಾಫಿಕ್ ಡಿಸೈನ್ ಮಾಡಲಾಗಿದೆ. ಆದರೆ BOOM ಹಲವಾರು ನಕಲಿ TIME ಕವರ್‌ಗಳನ್ನು ಹೊರಹಾಕಿದೆ.
How I made the cover. pic.twitter.com/LFZVOAhNMo
— Patrick Mulder 🏴🇺🇦 (@MrPatrickMulder) February 26, 2022
ಫೆಬ್ರವರಿ 24, 2022 ರಂದು ಪ್ರಾರಂಭವಾದ ಉಕ್ರೇನ್ ಮೇಲೆ ರಷ್ಯಾದ ಬೃಹತ್ ಆಕ್ರಮಣದ ಸಂದರ್ಭದಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಎರಡು ಚಿತ್ರಗಳು ಫೆಬ್ರವರಿ 28/ಮಾರ್ಚ್ 7, 2022 ರ ದಿನಾಂಕದಂದು ಹಂಚಿಕೊಳ್ಳಲಾಗಿದೆ. ಪೋಟೋ ಒಂದರಲ್ಲಿ ಪುಟಿನ್ ಅವರ ಕ್ಲೋಸ್-ಅಪ್ ಚಿತ್ರ ಇದೆ. ಇದರಲ್ಲಿ ಹಿಟ್ಲರನ ಸಾಂಪ್ರದಾಯಿಕ ಮೀಸೆಯನ್ನು ಪುಟಿನ್ ಮುಖಕ್ಕೆ ಡಿಸೈನ್ ಮಾಡುವ ಮೂಲಕ ಹಂಚಿಕೊಳ್ಳಲಾಗಿದೆ.
My rework of this month's TIME magazine cover. #Putin #Ukraine #Kyiv #Russia pic.twitter.com/IrwXbmYc6O
— Patrick Mulder 🏴🇺🇦 (@MrPatrickMulder) February 26, 2022
ಇನ್ನೊಂದು ನಕಲಿ ಕವರ್ ಹಿಟ್ಲರನ ಚುಚ್ಚುವ ನೋಟ ಮತ್ತು ಸ್ವಸ್ತಿಕ್ ಚಿಹ್ನೆಯನ್ನು ಪುಟಿನ್ ಫೋಟೋದೊಂದಿಗೆ ವಿಲೀನಗೊಳಿಸಲಾಗಿದೆ. ಎರಡೂ ಫೋಟೋ ಕವರ್‌ಗಳು 'ದಿ ರಿಟರ್ನ್ ಆಫ್ ಹಿಸ್ಟರಿ, ಪುಟಿನ್ ಯುರೋಪ್‌ನ ಕನಸನ್ನು ಹೇಗೆ ಛಿದ್ರಗೊಳಿಸಿದರು' ಎಂಬ ಶೀರ್ಷಿಕೆಯನ್ನು ಹೊಂದಿದೆ. ಜಗತ್ತಿನಾದ್ಯಂತ ನೆಟಿಜನ್‌ಗಳು ನಕಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಟರ್ಕಿಶ್‌ನಲ್ಲಿ ಟ್ವೀಟ್‌ಗಳಲ್ಲಿ ಇದು ಕಂಡುಬಂದಿದೆ.

ಫ್ಯಾಕ್ಟ್ ಚೆಕ್ ಬೂಮ್ ವೈರಲ್ ಚಿತ್ರಗಳು ಮಾರ್ಚ್ 14/ಮಾರ್ಚ್ 21, 2022 ರಲ್ಲಿ TIME ನಿಯತಕಾಲಿಕದ ಕವರ್‌ನ ಮೇಲೆ ಕಂಡು ಬಂದ ಆವೃತ್ತಿಗಳಾಗಿವೆ ಎಂದು ಕಂಡುಹಿಡಿದಿದೆ. ನಿಜವಾದ TIME ಕವರ್ ಅನ್ನು ಫೆಬ್ರವರಿ 25, 2022 ರಂದು TIME ನ ಪರಿಶೀಲಿಸಿದ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ. ಕವರ್‌ನ ವಿಷಯವು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಬದಲಾದ ಚಿತ್ರಗಳಂತೆಯೇ ಇರುತ್ತದೆ ಎಂದಿದೆ. ಆದರೆ ಇದರ ಮೇಲೆ ಪುಟಿನ್ ಚಿತ್ರವಿಲ್ಲ. ಇದರಲ್ಲಿ ಪುಟಿನ್ ಚಿತ್ರ ಹಾಕುವ ಮೂಲಕ ಡಿಸೈನ್ ಮಾಡಲಾಗಿದೆ.
ಈ ವೈರಲ್ ಕವರ್ ಅನ್ನು ಪ್ಯಾಟ್ರಿಕ್ ಮಲ್ಡರ್ ಟ್ವೀಟ್ ಮಾಡಿದ್ದಾರೆ ಎಂದು ಬೂಮ್ ಕಂಡುಹಿಡಿದಿದೆ. ಮಲ್ಡರ್ ಅವರು ಗ್ರಾಫಿಕ್ ಡಿಸೈನರ್. ಚಿತ್ರಗಳನ್ನು ಈ ತಿಂಗಳಲ್ಲಿ ಮಲ್ಡರ್ ತಮ್ಮ ಟ್ವೀಟ್‌ಗಳಿಂದ ಹಂಚಿಕೊಂಡಿರುವುದನ್ನು ಕಂಡುಹಿಡಿಯಲಾಗಿದೆ. ಎರಡು ಚಿತ್ರಗಳು ಮುಲ್ಡರ್ ಮಾಡಿದ ಚಿತ್ರಗಳಾಗಿವೆ.
Recommended Video
ಎರಡು ನಕಲಿ ಕವರ್‌ಗಳ ಚಿತ್ರದ ಕೆಳಗಿನ ಬಲ ಮೂಲೆಯಲ್ಲಿ ಮಲ್ಡರ್‌ನ ಹೆಸರಿದೆ. ಆದರೆ ಅದನ್ನು ವಾಟರ್‌ಮಾರ್ಕ್ ಮಾಡಲಾಗಿದೆ. ಬಳಿಕ ಅದನ್ನು ಶೇರ್ ಮಾಡಲಾಗಿದೆ. ಗ್ರಾಫಿಕ್ ಡಿಸೈನರ್ ನಕಲಿ ಕವರ್ ಅನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ತೋರಿಸುವ ವೀಡಿಯೊವನ್ನು ಸಹ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಇದಕ್ಕೂ ಟೈಮ್ ನಿಯತಕಾಲಿಕೆಗೂ ಸಂಬಂಧವಿಲ್ಲ ಎಂಬುದು.

Fact Check
ಕ್ಲೇಮು
ಟೈಮ್ ನಿಯತಕಾಲಿಕದ ಮುಖಪುಟದ ಮೇಲೆ ಹಿಟ್ಲರ್‌ಗೂ ರಷ್ಯಾ ಅಧ್ಯಕ್ಷ ಪುಟೀನ್‌ಗೂ ಹೋಲಿಸಿ ಚಿತ್ರ ವೈರಲ್
ಪರಿಸಮಾಪ್ತಿ
ಟೈಮ್ ನಿಯತಕಾಲಿಕದ ಮುಖಪುಟಕ್ಕೂ ಹಿಟ್ಲರ್‌ನನ್ನು ರಷ್ಯಾ ಅಧ್ಯಕ್ಷ ಪುಟೀನ್‌ಗೆ ಹೋಲಿಸಿದ ಚಿತ್ರಕ್ಕೂ ಸಂಬಂಧವಿಲ್ಲ.












Click it and Unblock the Notifications