• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಕೇದಾರನಾಥ ಹೆಲಿಕಾಪ್ಟರ್ ಪತನದ ವಿಡಿಯೋ-ಫೋಟೋ ವೈರಲ್: ಸತ್ಯ ಗೊತ್ತಾ?

|
Google Oneindia Kannada News

ಇತ್ತೀಚೆಗೆ ಕೇದಾರನಾಥ ಧಾಮದಿಂದ 2 ಕಿಮೀ ದೂರದಲ್ಲಿ ಪ್ರತಿಕೂಲ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಪತನಗೊಂಡು ಅಮರನಾಥ ಯಾತ್ರಿಕರ ಸಾವಿನಿಂದ ದೇಶದ ಜನತೆ ಕಂಬನಿ ಮಿಡಿದಿದೆ. ಈ ಅಪಘಾತದಲ್ಲಿ ಪೈಲಟ್ ಹಾಗೂ 6 ಪ್ರಯಾಣಿಕರು ಸೇರಿ ಒಟ್ಟು 7 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಅಪಘಾತದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವಿಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಇದು ಅಪಘಾತದ ನೈಜ ಚಿತ್ರಗಳು ಎಂದು ಹೇಳಿಕೊಂಡಿದೆ. ಈ ಚಿತ್ರಗಳ ನೈಜತೆಯನ್ನು ತಿಳಿಯಿರಿ.

ವಾಸ್ತವವಾಗಿ ಅಕ್ಟೋಬರ್ 18 ರಂದು ಕೇದಾರನಾಥದಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಕೇದಾರನಾಥದಿಂದ ಸುಮಾರು 2 ಕಿಮೀ ದೂರದಲ್ಲಿರುವ ಗರುಡಚಟ್ಟಿಯಲ್ಲಿ ಹೆಲಿಕಾಪ್ಟರ್ ಪತನಗೊಂಡಿತು. ಹೆಲಿಕಾಪ್ಟರ್ ಖಾಸಗಿ ಕಂಪನಿಗೆ ಸೇರಿದ್ದು. ಬೆಳಗ್ಗೆ 11.40ಕ್ಕೆ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ ಕೇದಾರನಾಥದಿಂದ ಗುಪ್ತಕಾಶಿಗೆ ಹೋಗುತ್ತಿತ್ತು. ಈ ಅಪಘಾತದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಭಿನ್ನ ವಿಡಿಯೊಗಳು ಮತ್ತು ಫೋಟೋಗಳು ಹರಿದಾಡಲು ಪ್ರಾರಂಭಿಸಿದವು.

ಹವಾಮಾನ ವೈಪರಿತ್ಯ: ಕರ್ನಾಟಕದಲ್ಲಿ ಭಾರಿ ಮಳೆ, 20ಕ್ಕೂ ಹೆಚ್ಚು ಜಿಲ್ಲೆಗೆ 3 ದಿನ 'ಯೆಲ್ಲೋ ಅಲರ್ಟ್'ಹವಾಮಾನ ವೈಪರಿತ್ಯ: ಕರ್ನಾಟಕದಲ್ಲಿ ಭಾರಿ ಮಳೆ, 20ಕ್ಕೂ ಹೆಚ್ಚು ಜಿಲ್ಲೆಗೆ 3 ದಿನ 'ಯೆಲ್ಲೋ ಅಲರ್ಟ್'

ಹೆಲಿಕಾಪ್ಟರ್ ಜ್ವಾಲೆಯಲ್ಲಿ ಮುಳುಗಿರುವ 17 ಸೆಕೆಂಡುಗಳ ವಿಡಿಯೊ ವೈರಲ್ ಆಗಿದೆ. ವಿಡಿಯೋದಲ್ಲಿ ನೆಲದ ಮೇಲೆ ಪುಟಿಯುವ ಹೆಲಿಕಾಪ್ಟರ್ ಜ್ವಾಲೆಯಿಂದ ಆವರಿಸುವುದು ಕಂಡುಬರುತ್ತದೆ. ಈ ವಿಡಿಯೊವನ್ನು ಹಂಚಿಕೊಳ್ಳುವಾಗ ಬಳಕೆದಾರರು ಈ ವಿಡಿಯೊ ಕೇದಾರನಾಥ ಅಪಘಾತದ ವಿಡಿಯೊ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೇ ಗಾಳಿಯ ಮಧ್ಯದಲ್ಲಿ ಹೆಲಿಕಾಪ್ಟರ್ ಸ್ಫೋಟಗೊಂಡ ಚಿತ್ರವನ್ನು ಸಹ ಹಲವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕೇದಾರನಾಥ ಹೆಲಿಕಾಪ್ಟರ್ ಪತನದ ಚಿತ್ರ ಎಂದು ಹೇಳಲಾಗುತ್ತಿದೆ. ಆದರೆ ವಿಡಿಯೋವನ್ನು ಪರಿಶೀಲಿಸಿದಾಗ ವೈರಲ್ ವಿಡಿಯೋಕ್ಕೂ ಘಟನೆಗೂ ಯಾವುದೇ ಸಂಬಂಧವಿಲ್ಲದಿರುವುದು ತಿಳಿದುಬಂದಿದೆ.

ಇದು ಕೇದಾರನಾಥ ಅಪಘಾತ ಎಂದು ಹೇಳಲಾಗುತ್ತಿರುವ ವಿಡಿಯೊ ವಾಸ್ತವವಾಗಿ 2014 ರಲ್ಲಿ ರಷ್ಯಾದಲ್ಲಿ ನಡೆದ ಏರ್ ಶೋನದು. ಯೂಟ್ಯೂಬ್‌ನಲ್ಲಿ ಈ ಹಿಂದೆ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ರಷ್ಯಾದ ಗೆಲೆಂಡ್‌ಝಿಕ್‌ನಲ್ಲಿ Mi-8 ಹೆಲಿಕಾಪ್ಟರ್ ಅಪಘಾತಕ್ಕೀಡಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದಲ್ಲದೇ ಗಾಳಿಯ ಮಧ್ಯದಲ್ಲಿ ಹೆಲಿಕಾಪ್ಟರ್ ಸ್ಫೋಟದ ಚಿತ್ರಣವೂ ಸಂಪೂರ್ಣ ಸುಳ್ಳು ಎಂದು ಹೇಳಲಾಗಿದೆ. ಆ ಫೋಟೋವನ್ನು ಇಮೇಜ್ ಸೈಟ್ iStock ನಿಂದ ತೆಗೆದುಕೊಳ್ಳಲಾಗಿದೆ. ಇದನ್ನು 24 ಮಾರ್ಚ್ 2015 ರಂದು ಅಪ್‌ಲೋಡ್ ಮಾಡಲಾಗಿದೆ.

ಹೀಗಿರುವಾಗ ಈ ಚಿತ್ರಗಳು ಕೇದಾರನಾಥ ಅಪಘಾತದ ನೈಜ ಚಿತ್ರವಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಿರುವಾಗ ಇವು ಯಾವುದೇ ರೀತಿಯಲ್ಲೂ ಕೇದಾರನಾಥದ ಘಟನೆಗೆ ಸಂಬಂಧಿಸಿದ ಚಿತ್ರಗಳಲ್ಲ ಎಂಬುದು ಸ್ಪಷ್ಟ.

Fact Check

ಕ್ಲೇಮು

ಕೇದಾರನಾಥ ಹೆಲಿಕಾಪ್ಟರ್ ಪತನದ ವಿಡಿಯೋ-ಫೋಟೋ ವೈರಲ್ ಆಗಿದೆ.

ಪರಿಸಮಾಪ್ತಿ

ಕೇದಾರನಾಥ ಹೆಲಿಕಾಪ್ಟರ್ ಪತನದ್ದು ಎಂದು ಹೇಳಿಕೊಂಡು ವೈರಲ್ ಮಾಡಲಾದ ವಿಡಿಯೋ-ಫೋಟೋಗಳು ರಷ್ಯಾದ್ದಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Kedarnath helicopter crash video-photo has gone viral, know the truth behind it
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X