Fact Check: ವಾಟ್ಸಾಪ್ ಮೆಸೇಜ್ ಮೇಲೆ ಕಣ್ಣಿಡಲು ಸರ್ಕಾರದ ಮಾರ್ಗಸೂಚಿ!?

ನವದೆಹಲಿ, ಆಗಸ್ಟ್ 22: ಭಾರತದಲ್ಲಿ ವಾಟ್ಸಾಪ್ ಸಂದೇಶ ಮೇಲ್ವಿಚಾರಣೆಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಗುಲ್ ಆಗುತ್ತಿದೆ.

ಹೊಸ ವಾಟ್ಸಾಪ್ ಸಂದೇಶಗಳನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಹಾಗೂ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿಯೇ ಹೊಸ ಮಾರ್ಗಸೂಚಿ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ವೈರಲ್ ಸಂದೇಶಗಳು ಹೇಳುತ್ತಿವೆ. ಆದರೆ ಇದರಲ್ಲಿ ಅಸಲಿ ಎಷ್ಟು ಮತ್ತು ನಕಲಿ ಎಷ್ಟು ಎಂಬುದನ್ನು ಪರಿಶೋಧನೆ ಮಾಡಬೇಕಾಗಿದೆ.

ಕೇಂದ್ರ ಸರ್ಕಾರವೇ ಹೊರಡಿಸಿದೆ ಎನ್ನಲಾದ ವಾಟ್ಸಾಪ್ ಮಾರ್ಗಸೂಚಿಗಳು ಹೇಳುವುದೇನು?, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಆ ಸುದ್ದಿಯಲ್ಲಿ ಏನೆಲ್ಲಾ ಇದೆ?, ವಾಟ್ಸಾಪ್ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವುದು ನಿಜವೇ ಅಥವಾ ಸುಳ್ಳೇ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

Fact Check: Is it Indian govt issued new WhatsApp guidelines to monitor chats?

ನಕಲಿ ಮಾರ್ಗಸೂಚಿಯಲ್ಲಿ ಇರುವುದೇನು?

ಕೇಂದ್ರ ಸರ್ಕಾರ ಹೊರಡಿಸಿದೆ ಎನ್ನಲಾಗಿರುವ ನಕಲಿ ಮಾರ್ಗಸೂಚಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಪೈಕಿ ಕಳುಹಿಸಿದ ಸಂದೇಶವು 'Tick' ವೈಶಿಷ್ಟ್ಯವನ್ನು ಹೊಂದಿರುತ್ತದೆ. ಒಂದು ಬಣ್ಣದ ಟಿಕ್ ಸಂದೇಶವು ರವಾನೆ ಆಗಿರುವುದನ್ನು ಸೂಚಿಸಿದರೆ, ಇನ್ನೊಂದು ಬಣ್ಣದ ಟಿಕ್ ಸಂದೇಶವು ಆಕಡೆಯ ವ್ಯಕ್ತಿಯು ಅದನ್ನು ನೋಡಿರುವುದನ್ನು ಸೂಚಿಸುತ್ತದೆ. ವೈರಲ್ ಆಗಿರುವ ಹೇಳಿಕೆಯ ಪ್ರಕಾರ, ಆ ಸಂದೇಶವನ್ನು ಸರ್ಕಾರವು ಗುರುತಿಸಿಕೊಂಡ ಸಂದರ್ಭದಲ್ಲಿ 3 ಬ್ಲೂ ಟಿಕ್ ಅನ್ನು ತೋರಿಸುತ್ತದೆ. ಈ ಸಂದೇಶಕ್ಕೆ ಸಂಬಂಧಿಸಿದಂತೆ ಸರ್ಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಮುಂದಾದರೆ ಆ ಸಂದೇಶದ ಟಿಕ್ ಮತ್ತಷ್ಟು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಸರ್ಕಾರವು ನಿಮ್ಮ ಡೇಟಾವನ್ನು ಪರೀಕ್ಷಿಸುತ್ತಿದ್ದರೆ 3 ಟಿಕ್ ಗಳಲ್ಲಿ 2 ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೇಂದ್ರ ಸರ್ಕಾರ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲು ಶುರು ಮಾಡಿದರೆ, ನೀವು ನ್ಯಾಯಾಲಯದಿಂದ ಸಮನ್ಸ್ ಸ್ವೀಕರಿಸಿದರೆ ಎಲ್ಲಾ 'ಮೂರು ಟಿಕ್'ಗಳು ಕೆಂಪಾಗುತ್ತವೆ ಎಂದು ಉಲ್ಲೇಖಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿರುವ ಸುದ್ದಿ ಸುಳ್ಳು:

ವಾಟ್ಸಾಪ್ ಹೊಸ ಮಾರ್ಗಸೂಚಿಗಳ ಕುರಿತು ಹರಡಿರುವ ಸುದ್ದಿಯು ನಕಲಿ ಆಗಿದೆ. ವಾಟ್ಸಾಪ್‌ನಲ್ಲಿ ಜನರ ಚಾಟ್‌ಗಳನ್ನು ಮೇಲ್ವಿಚಾರಣೆ ಮಾಡಲು ಸರ್ಕಾರವು ಯಾವುದೇ ಹೊಸ ಮಾರ್ಗಸೂಚಿಯನ್ನು ಹೊರಡಿಸಿಲ್ಲ. ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ ಅಧಿಕೃತ ವಾಸ್ತವ ಪರಿಶೀಲನಾ ಹ್ಯಾಂಡಲ್‌ನಿಂದ ಸಂದೇಶವನ್ನು ನಿರಾಕರಿಸಲಾಗಿದೆ.

"ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸಂದೇಶವು ಚಾಟ್‌ಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲು ಭಾರತ ಸರ್ಕಾರವು ಹೊಸ #WhatsApp ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ", ಎಂಬುದು ಸುಳ್ಳು ಎಂದು PIB ಫ್ಯಾಕ್ಟ್ ಚೆಕ್ ಟ್ವಿಟ್ಟರ್ ತಿಳಿಸಿದೆ. ಈ ಸಂದೇಶವು ನಕಲಿಯಾಗಿದ್ದು, ಅಂತಹ ಯಾವುದೇ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿಲ್ಲ,'' ಎಂದು ಸ್ಪಷ್ಟಪಡಿಸಿದೆ.

WhatsApp ಭಾರತದಲ್ಲಿ ಅತ್ಯಂತ ಜನಪ್ರಿಯ ಸಂದೇಶ ಕಳುಹಿಸುವ ವೇದಿಕೆಯಾಗಿದೆ. ಇದನ್ನು ಕೋಟಿಗಟ್ಟಲೆ ಜನರು ಬಳಸುತ್ತಾರೆ. ಇದು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದೆ ಎಂದು ಕಂಪನಿ ಹೇಳಿಕೊಂಡರೂ, ಪೆಗಾಸಸ್‌ನಂತಹ ಸ್ಪೈವೇರ್‌ಗಳು ಭದ್ರತೆಯನ್ನು ಕದ್ದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ.

Fact Check

ಕ್ಲೇಮು

ವಾಟ್ಸಾಪ್ ಸಂದೇಶಗಳ ಮೇಲ್ವಿಚಾರಣೆ ಮತ್ತು ಕ್ರಮಕ್ಕಾಗಿ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಪರಿಸಮಾಪ್ತಿ

ವಾಟ್ಸಾಪ್‌ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಮೇಲ್ವಿಚಾರಣೆ ಮಾಡುವುದು. ಕೆಟ್ಟ ಸಂದೇಶಗಳನ್ನು ಗುರುತಿಸಿ ಕಳುಹಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂಬ ಸುದ್ದಿಯನ್ನು ಹರಿ ಬಿಡಲಾಗಿದೆ.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+