ಮಾಸ್ಕ್ ಹಾಕಿದರೂ ಶೇ 85ರಷ್ಟು ಜನರಿಗೆ ಕೋವಿಡ್ ಬರುತ್ತದೆಯೇ?

ವಾಷಿಂಗ್ಟನ್, ಅಕ್ಟೋಬರ್ 16 : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ ಸೋಂಕು ಹರಡುವಿಕೆ ಬಗ್ಗೆ ಗುರುವಾರ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಸ್ಕ್ ಧರಿಸಿದರೂ ಶೇ 85ರಷ್ಟು ಜನರಿಗೆ ಸೋಂಕು ತಗುಲುತ್ತದೆ ಎಂದು ಹೇಳಿದ್ದಾರೆ.

ಒಂದೇ ದಿನದಲ್ಲಿ ಎರಡು ಬಾರಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಇದು ತಪ್ಪು. ಶೇ 85ರಷ್ಟು ಜನರಿಗೆ ಮಾಸ್ಕ್ ಹಾಕಿದ್ದರೆ ಕೋವಿಡ್ ಸೋಂಕು ಹಬ್ಬುವುದಿಲ್ಲ.

ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಂಡ ಕೋವಿಡ್ ಹಬ್ಬುವಿಕೆ ಕುರಿತ ವರದಿಯಲ್ಲಿ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅಧ್ಯಯನ ವರದಿ ಮಾಸ್ಕ್ ಧರಿಸಿದ ಎಷ್ಟು ಜನರಿಗೆ ಕೋವಿಡ್ ತಗುಲಬಹುದು ಎಂದು ಖಚಿತಪಡಿಸಿಲ್ಲ.

Fact check : 85 Per Cent Of People Who Wear Masks Gets COVID In US

ಅಮೆರಿಕದಲ್ಲಿ ಜುಲೈ ತಿಂಗಳಿನಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದ 154 ಜನರ ಅಭ್ಯಾಸಗಳನ್ನು ಅಧ್ಯಯನ ಮಾಡಿ ವರದಿ ತಯಾರು ಮಾಡಲಾಗಿತ್ತು. 160 ಜನರಿಗೆ ಲಕ್ಷಣಗಳು ಕಂಡು ಬಂದಿದ್ದರೂ ಅವರ ವರದಿ ನೆಗೆಟಿವ್ ಬಂದಿತ್ತು.

160 ಜನರಲ್ಲಿ ಶೇ 88.7ರಷ್ಟು ಜನರ ಸದಾ ಮಾಸ್ಕ್ ಧರಿಸುತ್ತಿದ್ದರು, ಇಲ್ಲವೇ ಆಗಾಗ ಧರಿಸುತ್ತಿದ್ದರು. ಮಾಸ್ಕ್ ಧರಿಸುವ ಮತ್ತು ಧರಿಸದೇ ಇರುವ ಜನರ ನಡುವೆ ಸೋಂಕು ಪತ್ತೆಯಾಗುವುದಕ್ಕೆ ಬಹಳ ವ್ಯತ್ಯಾಸವಿದೆ.

ವಿಶ್ವದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವುದು ಅಮೆರಿಕದಲ್ಲಿ. ಒಟ್ಟು ಸೋಂಕಿತರ ಸಂಖ್ಯೆ 8.20 ಮಿಲಿಯನ್, 2,18,000 ಜನರು ಇದುವರೆಗೂ ಮೃತಪಟ್ಟಿದ್ದಾರೆ.

Fact Check

ಕ್ಲೇಮು

ಮಾಸ್ಕ್ ಹಾಕಿದರೂ ಶೇ 85ರಷ್ಟು ಜನರಿಗೆ ಕೋವಿಡ್ ಸೋಂಕು ತಗುಲುತ್ತದೆ

ಪರಿಸಮಾಪ್ತಿ

ಈ ಮಾಹಿತಿ ತಪ್ಪು, ಇಂತಹ ಯಾವುದೇ ವರದಿಗಳಿಲ್ಲ

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+