Fact Check: ಮುಕೇಶ್ ಅಂಬಾನಿ ಮೊಮ್ಮಗುವನ್ನು ನೋಡಲು ಮೋದಿ ಆಸ್ಪತ್ರೆಗೆ ಹೋಗಿದ್ದರೇ?

ನವದೆಹಲಿ, ಡಿಸೆಂಬರ್ 15: ಮುಕೇಶ್ ಅಂಬಾನಿ, ನೀತಾ ಅಂಬಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಇರುವ ಚಿತ್ರ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಜನಿಸಿದ ಅಂಬಾನಿ ಮೊಮ್ಮಗನನ್ನು ನೋಡಲು ನರೇಂದ್ರ ಮೋದಿ ಆಸ್ಪತ್ರೆಗೆ ತೆರಳಿದ್ದರು ಎಂದು ಬಿಂಬಿಸಲಾಗುತ್ತಿದೆ.

ಆಸ್ಪತ್ರೆಯಲ್ಲಿ ನೀತಾ ಅಂಬಾನಿ, ಮುಕೇಶ್ ಅಂಬಾನಿ, ನರೇಂದ್ರ ಮೋದಿ ಹಾಗೂ ಕೆಲವು ವೈದ್ಯರಿರುವ ಫೋಟೊ ಇದಾಗಿದೆ.

ಆದರೆ ಮುಕೇಶ್ ಅಂಬಾನಿ ಮೊಮ್ಮಗುವನ್ನು ನೋಡಲು ನರೇಂದ್ರ ಮೋದಿ ಆಸ್ಪತ್ರೆಗೆ ಹೋಗಿಲ್ಲ. ಈ ಚಿತ್ರವನ್ನು ಮುಂಬೈನಲ್ಲಿ 2014ರಲ್ಲಿ ನಿರ್ಮಿಸಲಾದ ರಿಲಯಾನ್ಸ್ ಆಸ್ಪತ್ರೆ ಉದ್ಘಾಟನೆಯ ಚಿತ್ರವಾಗಿದೆ. ಅಂದು ಆಸ್ಪತ್ರೆಯ ಉದ್ಘಾಟನೆಯನ್ನು ನರೇಂದ್ರ ಮೋದಿ ಮಾಡಿದ್ದರು ಎಂಬುದು ಸತ್ಯದ ಸಂಗತಿಯಾಗಿದೆ.

Fact Check: 2014 Image Revived To Claim Modi Visited Ambani’s Newborn Grandson

ಕೃಷಿ ಕಾಯ್ದೆಯನ್ನು ವಿರೋಧಿಸಿ ನವೆಮಬರ್ 26 ರಿಂದ ರೈತರು ದೆಹಲಿ, ಪಂಜಾಬ್, ಹರ್ಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಆಸ್ಪತ್ರೆಯಲ್ಲಿದ್ದ ಚಿತ್ರ ಎಲ್ಲೆಡೆ ಹರಿದಾಡಿದೆ. ಜತೆಗೆ ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಸಿ ವಿದ್ಯಾಸಾಗರ್ ಅವರನ್ನೂ ಕೂಡ ಈ ಚಿತ್ರದಲ್ಲಿ ಕಾಣಬಹುದಾಗಿದೆ.

ಆದರೆ ಫೋಟೊ ಶೀರ್ಷಿಕೆಯನ್ನು ಹಿಂದಿಯಲ್ಲಿ ನೀಡಲಾಗಿದ್ದು, ಮುಕೇಶ್ ಅಂಬಾನಿ ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಹೋಗುತ್ತಾರೆ ಆದರೆ ರೈತರ ಕಷ್ಟಗಳನ್ನು ಆಲಿಸಲು ರೈತರ ಬಳಿ ಬಂದಿಲ್ಲ ಎಂದು ಹೀಯಾಳಿಸಿದ್ದಾರೆ.

ಮೊದಲ ಬಾರಿಗೆ ಅಜ್ಜ ಅಜ್ಜಿಯಾಗಿ ಮುಕೇಶ್​ ಹಾಗೂ ನೀತಾ ಬಡ್ತಿ ಪಡೆದಿದ್ದಾರೆ. 2019 ರ ಮಾರ್ಚ್​ ನಲ್ಲಿ ಶೋಕ್ಲಾ ಹಾಗೂ ಆಕಾಶ್​ ಹಸೆಮಣೆ ಏರಿದ್ದರು. ಜಿಯೋ ವರ್ಲ್ಡ್​​ ಸೆಂಟರ್​ನಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಬಾಲಿವುಡ್​ ಸೇರಿದಂತೆ ಹಲವು ದಿಗ್ಗಜ್ಜರು ಭಾಗಿಯಾಗಿದ್ದರು.

Fact Check

ಕ್ಲೇಮು

ನರೇಂದ್ರ ಮೋದಿ ಮುಕೇರ್ಶ ಅಂಬಾನಿ ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಬಂದಿದ್ದರು

ಪರಿಸಮಾಪ್ತಿ

ಆ ಚಿತ್ರ 2014ರಲ್ಲಿ ಮುಂಬೈನಲ್ಲಿ ರಿಲಾಯಾನ್ಸ್ ಆಸ್ಪತ್ರೆಯ ಉದ್ಘಾಟನೆ ಸಂದರ್ಭದಲ್ಲಿ ತೆಗೆದಿದ್ದಾಗಿದೆ. ನರೇಂದ್ರ ಮೋದಿ ಮುಕೇಶ್ ಅಂಬಾನಿ ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಬಂದಿಲ್ಲ.

Rating

Misleading
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+