ಯುವ ರಾಜ್‌ಕುಮಾರ್‌ಗೆ ದುನಿಯಾ ವಿಜಯ್ ಪುತ್ರಿ ನಾಯಕಿ, ಸೆಟ್ಟೇರಿತು ಸಿನಿಮಾ

ಡಾ.ರಾಜ್‌ಕುಮಾರ್‌ ಮೊಮ್ಮಗ ನಟ ಯುವ ರಾಜ್‌ಕುಮಾರ್‌ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರ ಮತ್ತೊಂದು ಸಿನಿಮಾ ಸೆಟ್ಟೇರಿದ್ದು, ಇದರಲ್ಲಿ ಯುವಗೆ ನಾಯಕಿಯಾಗಿ ನಟ ದುನಿಯಾ ವಿಜಯ್‌ ಪುತ್ರಿ ರಿತನ್ಯಾ ಆಯ್ಕೆಯಾಗಿದ್ದಾರೆ. ಯುವರಾಜ್‌ಕುಮಾರ್‌ ಹಾಗೂ ನಿರ್ದೇಶಕ ಸುಕ್ಕ ಸೂರಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎಂದು ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಅಕ್ಷಯ ತೃತೀಯ ಅಂಗವಾಗಿ ಈ ಸಿನಿಮಾಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ.

ಅಕ್ಷಯ ತೃತೀಯ ದಿನವಾದ ಇಂದು ಬೆಂಗಳೂರಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿದೆ. ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್‌ಕುಮಾರ್‌ ಈ ಸಿನಿಮಾಗೆ ಕ್ಲ್ಯಾಪ್‌ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಪುನೀತ್‌ ರಾಜ್‌ಕುಮಾರ್ ಅವರ‌ ಪುತ್ರಿ ಧೃತಿ ಪುನೀತ್ ರಾಜ್‌ಕುಮಾರ್‌ ಅವರು ಕ್ಯಾಮೆರಾಗೆ ಚಾಲನೆ ನೀಡುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್‌, ನಿರ್ದೇಶಕ ಸೂರಿ ಸೇರಿದಂತೆ ಕೂಡ ಇಂದಿನ ಮುಹೂರ್ತದಲ್ಲಿ ಇದ್ದರು.

Yuva Rajkumar New Film Launched Duniya Vijay Daughter Rithanya To Play Lead Actress

ವಿಶೇಷವೆಂದರೆ ನಟ ದುನಿಯಾ ವಿಜಯ್‌ ಅವರ ಮೊದಲ ಸಿನಿಮಾವನ್ನೂ ಸೂರಿ ನಿರ್ದೇಶಿಸಿದ್ದರು. ಈಗ ಅವರ ಪುತ್ರಿಯ ಸಿನಿಮಾಗೂ ಆವರೇ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ದುನಿಯಾ ವಿಜಯ್‌ ಮೊದಲ ಪುತ್ರಿ ರಿತನ್ಯಾ ವಿಜಯ್‌ ಕುಮಾರ್‌ ಈ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದು, ಈಗಾಗಲೇ ಲ್ಯಾಂಡ್‌ ಲಾರ್ಡ್‌ ಸಿನಿಮಾ ಮೂಲಕ ರಿತನ್ಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದು, ಇದು ಎರಡನೇ ಸಿನಿಮಾ ಆಗಿದೆ.

ಈ ಸಿನಿಮಾಗೆ ಚರಣ್‌ ರಾಜ್‌ ಸಂಗೀತ ನಿರ್ದೇಶನ, ಸಂತೋಷ್‌ ಕಲಾ ನಿರ್ದೇಶನ, ಶೇಖರ್‌ ಕ್ಯಾಮೆರಾ ಇರಲಿದೆ. ಮುಂದಿನ ತಿಂಗಳು ಈ ಸಿನಿಮಾ ಶೂಟಿಂಗ್‌ ಶುರುವಾಗಲಿದೆ. ಪ್ರತಿಷ್ಠಿತ ಮೂರು ನಿರ್ಮಾಣ ಸಂಸ್ಥೆಯಡಿ ಈ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ತಯಾರಾಗಲಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಬ್ಯಾನರ್‌ನಡಿ ಯುವ ಅವರ "ಎಕ್ಕ" ಸಿನಿಮಾ ಕೂಡ ಅದ್ಧೂರಿಯಾಗಿ ತಯಾರಾಗುತ್ತಿದೆ. ಇತ್ತೀಚೆಗೆ ಟೀಸರ್‌ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಯುವ ಹೊಸ ಸಿನಿಮಾ ಅನೌನ್ಸ್‌ ಆಗಿದೆ.

Yuva Rajkumar New Film Launched Duniya Vijay Daughter Rithanya To Play Lead Actress

ಯುವರಾಜ್‌ ಕುಮಾರ್‌ ನಾಯಕನಾಗಿ ಹಾಗೂ ರೋಹಿತ್‌ ಪದಕಿ ಡೈರೆಕ್ಷನ್‌ನಲ್ಲಿ ಎಕ್ಕ ಸಿನಿಮಾ ಇದೇ ಜೂನ್‌ ತಿಂಗಳಲ್ಲಿ ರಿಲೀಸ್‌ ಆಗಲಿದ್ದು, ಸದ್ಯ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಈಗಾಗಲೇ ಎಕ್ಕ ಸಿನಿಮಾದ ಟೀಸರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ರಿಲೀಸ್‌ ಆಗಿದ್ದು ಅಭಿಮಾನಿಗಳಲ್ಲಿ ಕ್ರೇಜ್‌ ಹುಟ್ಟಿಸಿದೆ.

ದುನಿಯಾ, ಟಗರು ಸೇರಿದಂತೆ ಹಲವು ವಿಭಿನ್ನ ಸಿನಿಮಾಗಳನ್ನು ಡೈರೆಕ್ಟ್‌ ಮಾಡಿರುವ ಸೂರಿ ಅವರ ನಿರ್ದೇಶನದಲ್ಲಿ ಈ ಹೊಸ ಸಿನಿಮಾ ಬರುತ್ತಿರುವುದು ಕುತೂಹಲ ಹೆಚ್ಚಿಸಿದೆ. ಈಗಾಗಲೇ ಎರಡು ಸ್ಯಾಂಡಲ್‌ವುಡ್‌ನಲ್ಲಿ ಅಬ್ಬರಿಸುತ್ತಿರುವ ಯುವ ರಾಜ್‌ಕುಮಾರ್‌ ಅವರಿಗೆ ಈ ಸಿನಿಮಾ ಹೊಸ ತಿರುವು ಕೊಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+