Bigg Boss: ಯುಟ್ಯೂಬರ್ ಸಮೀರ್‌ಗೆ ಬಿಗ್‌ಬಾಸ್‌ನಿಂದ ಆಫರ್? ಜನ ಏನಂತಿದ್ದಾರೆ?
ಬಿಗ್‌ಬಾಸ್ ಕನ್ನಡ ಸೀಸನ್-12 (Bigg Boss Kannada 12) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಬಿಗ್‌ಬಾಸ್ ಮನೆಗೆ ಯಾರೆಲ್ಲ ಹೋಗ್ತಾರೆ ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ. ಸಾಮಾನ್ಯವಾಗಿ ಈ ರಿಯಾಲಿಟಿ ಶೋನಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುತ್ತಾರೆ. ಇದರ ಜೊತೆಗೆ ಕಾಂಟ್ರವರ್ಸಿ ಜನರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುವವರಿಗೂ ಬಿಗ್‌ಬಾಸ್ ಎಂಟ್ರಿ ಸಿಗುತ್ತಿದೆ. ಹೀಗಾಗಿ ಹಲವರು ಹೆಸರು ಈಗಾಗಲೇ ಚಾಲ್ತಿಯಲ್ಲಿದೆ. ಅದರಲ್ಲಿ ಖ್ಯಾತ ಯುಟ್ಯೂಬರ್ ಸಮೀರ್ ಎಂಡಿ ಕೂಡ.
ಹೌದು, ಯುಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿರುವ ಕನ್ನಡದ ಯುಟ್ಯೂಬರ್ ಸಮೀರ್ ಎಂಡಿ ಅವರಿಗೆ ಸಖತ್ ಫಾಲೋಯಿಂಗ್ ಕೂಡ ಇದೆ. ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಇವರು ಮಾಡಿದ ಯುಟ್ಯೂಬ್ ವಿಡಿಯೋಗಳು. ಅದರಲ್ಲೂ ಧರ್ಮಸ್ಥಳದ ಸೌಜನ್ಯ ಕೇಸ್ ಬಗ್ಗೆ ಸಮೀರ್ ಅಪ್‌ಲೋಡ್ ಮಾಡಿದ್ದ ವಿಡಿಯೋ ಸಂಚಲನ ಸೃಷ್ಟಿಸಿತ್ತು. ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು, ಶವಗಳ ನಿಗೂಢ ಅಂತ್ಯಕ್ರಿಯೆ ಬಗ್ಗೆಯೂ ಯುಟ್ಯೂಬ್‌ನಲ್ಲಿ ವಿಡಿಯೋ ಹಂಚಿಕೊಂಡು ವಿವರಣೆ ನೀಡಿದ್ದರು.

ಇದು ರಾಜ್ಯದಾದ್ಯಂತ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದಲ್ಲದೆ, ಪ್ರಕರಣದ ಮಾಹಿತಿ ಹಂಚಿಕೊಂಡ ಆರೋಪದ ಮೇರೆ ಸಮೀರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಇನ್ನು ಸಮೀರ್ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಅಭಿಮಾನಿಗಳು, ಹಿಂಬಾಲಕರು ಹುಟ್ಟಿಕೊಂಡಿದ್ದು, ಸಿಕ್ಕಾಪಟ್ಟೆ ಕ್ರೇಜ್ ಕೂಡ ಹುಟ್ಟಿಕೊಂಡಿದೆ. ಬಿಗ್‌ಬಾಸ್ ಕೂಡ ಸದ್ಯದಲ್ಲೇ ಶುರುವಾಗಿರುವುದರಿಂದ ಈ ಬಾರಿ ಸಮೀರ್ ಕೂಡ ಬಿಗ್‌ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಹಲವರು ಸಮೀರ್ ಬಿಗ್‌ಬಾಸ್‌ಗೆ ಹೋಗ್ತಾರೆ, ಈಗಾಗಲೇ ಬಿಗ್‌ಬಾಸ್‌ನಿಂದ ಸಮೀರ್‌ಗೆ ಆಫರ್ ಬಂದಿದೆ ಎಂದೆಲ್ಲ ಸುದ್ದಿ ಹರಿದಾಡುತ್ತಿದೆ. ಇನ್ನೂ ಕೆಲವರು ಎಂತೆಂತವರನ್ನೋ ಬಿಗ್‌ಬಾಸ್ ಮನೆಗೆ ಕಳಿಸಲಾಗುತ್ತದೆ. ಸಮೀರ್ ಅವರಂತಹ ಯುವಕರಿಗೆ ಬಿಗ್‌ಬಾಸ್ ವೇದಿಕೆಯಾಗಬೇಕು ಎಂದು ಅಭಿಪ್ರಾಯ ತಿಳಿಸುತ್ತಿದ್ದಾರೆ. ಯುಟ್ಯೂಬರ್‌ಗಳು ಕೂಡ ಇತ್ತೀಚೆಗೆ ಕ್ರಾಂತಿ ಕಹಳೆ ಮೂಡಿಸುತ್ತಿದ್ದು, ಅವರಿಗೂ ಅವಕಾಶ ಕೊಡಿ ಎನ್ನುತ್ತಿದ್ದಾರೆ.
ಡಾ.ಬ್ರೋ ಹೆಸರು ಕೂಡ ಚರ್ಚೆ
ಆದರೆ ಸಮೀರ್‌ಗೆ ಬಿಗ್‌ಬಾಸ್ ಕಡೆಯಿಂದ ಆಫರ್ ಹೋಗಿದೆಯೇ? ಇಲ್ಲವೇ? ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸಮೀರ್ ಕೂಡ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಸೀಸನ್ ಶುರುವಾಗುತ್ತಿರುವುದರಿಂದ ಸಹಜವಾಗಿ ಸಮೀರ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಸಮೀರ್ ಮಾತ್ರವಲ್ಲದೆ, ಮತ್ತೊಬ್ಬ ಯುಟ್ಯೂಬರ್ ಡಾ.ಬ್ರೋ ಖ್ಯಾತಿಯ ಗಗನ್ ಕೂಡ ಬಿಗ್‌ಬಾಸ್‌ಗೆ ಹೋಗ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಅಂತಿಮವಾಗಿ ಬಿಗ್‌ಬಾಸ್ ಸ್ಪರ್ಧಿಗಳು ಯಾರು ಎಂಬುದು ಬಿಗ್‌ಬಾಸ್‌ಗೆ ಮಾತ್ರ ಗೊತ್ತಿದ್ದು, ಸೀಸನ್ ಶುರುವಾಗುವ ಮೊದಲ ದಿನವೇ ಸ್ಪರ್ಧಿಗಳ ಹೆಸರು ರಿವೀಲ್ ಆಗಲಿದೆ. ಬಿಗ್‌ಬಾಸ್‌ನಲ್ಲಿ ಸಮೀರ್ ಕಾಣಿಸಿಕೊಂಡರೂ ಅನುಮಾನವಿಲ್ಲ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಉತ್ತರ ಕೆಲ ದಿನಗಳಲ್ಲೇ ಸಿಗಲಿದೆ.












Click it and Unblock the Notifications