Year Ender 2025: ಈ ವರ್ಷ ಡಿವೋರ್ಸ್, ಬ್ರೇಕಪ್ ಮೂಲಕ ಸುದ್ದಿಯಾದ ಸೆಲೆಬ್ರಿಟಿಗಳು
2025ಕ್ಕೆ ವಿದಾಯ ಹೇಳಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಹಲವು ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ಏಳುಬೀಳುಗಳನ್ನು ಕಂಡಿದ್ದಾರೆ. ಕೆಲವರು ಇನ್ನೇನು ಮದುವೆಯಾಗಬೇಕು ಎನ್ನುವ ಹೊತ್ತಿಗೆ ಬ್ರೇಕಪ್ ಘೋಷಿಸಿ ಸುದ್ದಿಯಾದರೆ, ಕೆಲವರು ಮದುವೆಯಾದ ಕೆಲವೇ ವರ್ಷಗಳಿಗೆ ಡಿವೋರ್ಸ್ ಪಡೆದು ಅಚ್ಚರಿ ಮೂಡಿಸಿದ್ದಾರೆ. ಈ ವರ್ಷ ಡಿವೋರ್ಸ್, ಬ್ರೇಕಪ್ ಮಾಡಿಕೊಂಡ ಸೆಲೆಬ್ರಿಟಿಗಳು ಇವರೇ ನೋಡಿ..
ನಟಿ ತಮನ್ನಾ ಭಾಟಿಯಾ & ವಿಜಯ್ ವರ್ಮಾ
ಸದ್ಯ ಭಾರತೀಯ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂದು ಕರೆಸಿಕೊಂಡಿರುವ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಈ ವರ್ಷ ಬ್ರೇಕಪ್ ಶಾಕ್ ನೀಡಿದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ನಟ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಅವರ ಬ್ರೇಕಪ್ಗೆ ಈ ವರ್ಷ ಸಾಕ್ಷಿಯಾಯಿತು. ಕನ್ನಡದ ಕೆಜಿಎಫ್ ಸಿನಿಮಾದ ಜೋಕೆ ನಾನು ಬಳ್ಳಿಯ ಮಿಂಚು ಎಂದು ಸೊಂಟ ಬಳುಕಿಸಿದ್ದ ತಮನ್ನಾ ನಂತರ ಸುದ್ದಿಯಾಗಿದ್ದು, ನಟ ವಿಜಯ್ ವರ್ಮಾ ಅವರೊಂದಿಗಿನ ಡೇಟಿಂಗ್ ಸುದ್ದಿಯಿಂದ. ಮೊದಲಿಗೆ ಇದು ವದಂತಿಯೇ ಆದರೂ, ನಂತರ ಒಟ್ಟಾಗಿ ಹಲವು ವೇದಿಕೆಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದರು.
ಆಗ ತಮನ್ನಾ ವಿಜಯ್ ಅವರ ಮದುವೆ ಪ್ಲ್ಯಾನ್ ಕೂಡ ಆಗಿ, ಇನ್ನೇನು ಮದುವೆ ದಿನಾಂಕ ಘೋಷಿಸುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದರು. ಆದರೆ 2023ರಲ್ಲಿ ಡೇಟಿಂಗ್ ಶುರು ಮಾಡಿದ್ದ ಈ ಜೋಡಿ ಈ ವರ್ಷದ ಆರಂಭದಲ್ಲೇ ಪರಸ್ಪರ ದೂರವಾಗುವ ನಿರ್ಧಾರ ತೆಗೆದುಕೊಂಡಿತು.

ಚಹಾಲ್-ಧನಶ್ರೀ
ಸಿನಿಮಾ ಮಾತ್ರವಲ್ಲದೆ, ಕ್ರೀಡಾ ಜಗತ್ತಿನ ಸೆಲೆಬ್ರಿಟಿಗಳ ಡಿವೋರ್ಸ್ ಪ್ರಕರಣ ಕೂಡ ಈ ವರ್ಷ ಸದ್ದು ಮಾಡಿತು. ಭಾರತೀಯ ಅಂತರರಾಷ್ಟ್ರೀಯ ಕ್ರಿಕೆಟಿಗ, ಲೆಗ್ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ವಿವಾಹವು ಕೊನೆಗೊಂಡಿತು. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಇಬ್ಬರ ಪರಿಚಯವಾಗಿ ಡಿಸೆಂಬರ್ನಲ್ಲಿ ಮದುವೆಯಾದರು. 2025ರ ಆರಂಭದಲ್ಲೇ ವಿಚ್ಛೇದನದ ಸುದ್ದಿ ಹರಡಿತು. ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ವೃತ್ತಿಜೀವನದಲ್ಲಿನ ಒತ್ತಡ, ಸಮಯದ ಕೊರತೆ ಮತ್ತು ಹೊಂದಾಣಿಕೆಯ ಸಮಸ್ಯೆಗಳಿಂದಾಗಿ ಈ ವಿಚ್ಛೇದನ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಚಹಾಲ್ ಖಿನ್ನತೆ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಎದುರಿಸಿದ್ದಾಗಿ ವರದಿಯಾಗಿದೆ.
ನಟ ಜಿವಿ ಪ್ರಕಾಶ್ ಕುಮಾರ್-ಸೈಂಧವಿ
ತಮಿಳು ಚಿತ್ರರಂಗದ ಸಂಗೀತ ಸಂಯೋಜಕ ಹಾಗೂ ನಟ ಜಿವಿ ಪ್ರಕಾಶ್ ಕುಮಾರ್ & ಗಾಯಕಿ ಸೈಂಧವಿ ದಂಪತಿ ಕೂಡ ಈ ವರ್ಷ ಡಿವೋರ್ಸ್ ಪಡೆದ ಸೆಲೆಬ್ರಿಟಿಗಳ ಪಟ್ಟಿಯಲ್ಲಿದ್ದಾರೆ. ಇವರು ಶಾಲೆಯಿಂದಲೇ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಬಳಿಕ ಮದುವೆಯೂ ಆಗಿದ್ದರು. ತಮ್ಮ 12 ವರ್ಷಗಳ ದಾಂಪತ್ಯವನ್ನು ಈ ವರ್ಷ ಅಧಿಕೃತವಾಗಿ ಕೊನೆಗೊಳಿಸಿದರು. ಮಾರ್ಚ್ 24ರಂದು ಅವರು ಚೆನ್ನೈ ಕುಟುಂಬ ಕಲ್ಯಾಣ ನ್ಯಾಯಾಲಯದಲ್ಲಿ ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.
ನಟಿ ಮೀರಾ ವಾಸುದೇವನ್-ವಿಪಿನ್
ಮಲಯಾಳಂ ನಟಿ ಮೀರಾ ವಾಸುದೇವನ್ ಅವರು ತಮ್ಮ ಮೂರನೇ ಪತಿ ವಿಪಿನ್ ಪುತಿಯಂಕಂಗೆ ವಿಚ್ಛೇದನ ನೀಡಿದರು. ಕಳೆದ ಆಗಸ್ಟ್ನಿಂದಲೂ ನಾನು ಸಿಂಗಲ್ ಎಂದು ಘೋಷಿಸಿದರು. ಈ ಮೂಲಕ ತಮ್ಮ ಜೀವನದ ಶಾಂತಿಯುತ ಹಂತವನ್ನು ಎದುರಿಸುತ್ತಿರುವುದಾಗಿ ತಿಳಿಸಿದ್ದರು. ಇದು ಅವರ ಮೂರನೇ ಮದುವೆಯಾಗಿದ್ದು, ಕೇವಲ ಒಂದು ವರ್ಷದೊಳಗೆ ಮುರಿದುಬಿತ್ತು.

ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್
ಭಾರತದ ಕ್ರಿಕೆಟ್ ಆಟಗಾರ್ತಿ, ಆರ್ಸಿಬಿ ತಂಡದ ಕ್ಯಾಪ್ಟನ್ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಮದುವೆ ನವೆಂಬರ್ 2025ರಲ್ಲಿ ನಡೆಯಬೇಕಿತ್ತು. ಮುಹೂರ್ತದ ದಿನವೇ ಮದುವೆ ರದ್ದಾಗಿ ಎಲ್ಲರಿಗೂ ಶಾಕ್ ಕೊಟ್ಟರು. ಬಳಿಕ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಸ್ಮೃತಿ ಮಂಧಾನ ಇತ್ತೀಚೆಗೆ ಖಚಿತಪಡಿಸಿದರು. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದು, ಕುಟುಂಬದ ಗೌಪ್ಯತೆ ಕಾಪಾಡುವಂತೆ ಅವರು ವಿನಂತಿಸಿದರು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications