Master Anand: 'ಇದೊಂದು ಇದ್ರೆ ಹೆಂಡ್ತಿನಾ ಕೂಡ ಬಿಟ್ಟು ಇರ್ತಾರಂತೆ ಮಾಸ್ಟರ್ ಆನಂದ್'
ಕಿರುತೆರೆಯ ನನ್ನಮ್ಮ ಸೂಪರ್ ಸ್ಟಾರ್ ಮೂಲಕ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕ, ನಟ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ವಿವ್ ಆಗಿದ್ದಾರೆ. ರೀಲ್ಸ್, ವಿಡಿಯೋ ಮೂಲಕ ತಮ್ಮದೇ ಅಭಿಮಾನಿಗಳನ್ನು ಹೊಂದಿರುವ ಯಶಸ್ವಿನಿ, ಇದೀಗ ತಮ್ಮದೇ ಆದ ಹೊಸ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದಾರೆ.
ಕನೆಕ್ಟ್ ಕನ್ನಡ(Konnect Kannada) ಎನ್ನುವ ಹೆಸರಿನ ಯೂಟ್ಯೂಬ್ ಚಾನೆಲ್ ತೆರೆದಿರುವ ಯಶಸ್ವಿನಿ, ತಾವೇ ನಿರೂಪಕಿಯಾಗಿ ವಿಶೇಷವಾದ ಅತಿಥಿಗಳನ್ನೇ ಕರೆಸಿ ಸಂದರ್ಶನ ಮಾಡುವ ಮೂಲಕ ವಿಭಿನ್ನವಾಗಿ ಶೋ ನಡೆಸಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಕನೆಕ್ಟ್ ಕನ್ನಡ ಐದು ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.

ಇದೀಗ ಯಶಸ್ವಿನಿ ಮಾಸ್ಟರ್ ಆನಂದ್ ಅವರ ಕನೆಕ್ಟ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಕಾಮಿಡಿ ಕಿಲಾಡಿಗಳು ನಯನ ಅತಿಥಿಯಾಗಿ ಬಂದಿದ್ದು, ಈ ಸಂಚಿಕೆಯಲ್ಲಿ ಮಾಸ್ಟರ್ ಆನಂದ್ ಅವರ ಬಗ್ಗೆ ಇಬ್ಬರು ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಈ ವೇಳೆ ಯಶಸ್ವಿನಿ, ಆನಂದ್‌ಗೆ ನಯನ ನನಗಿಂತ ಕ್ಲೋಸ್ ಎಂದು ಕಾಲು ಎಳೆದಿದ್ದು, ಕಾಮಿಡಿ ಕಿಲಾಡಿಗಳು ಸೆಟ್‌ನಲ್ಲಿ ನಡೆಯುವ ಕೆಲವು ತಮಾಷೆಯ ವಿಚಾರಗಳನ್ನು ಮೆಲುಕು ಹಾಕಿದ್ದಾರೆ.
ಇನ್ನು ಈಗಾಗಲೇ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಯನಗೆ ಬಿಗ್ ಬಾಸ್ ಆಫರ್ ಬಂದಿದೆಯೇ ಎನ್ನುವ ಯಶಸ್ವಿನಿ ಮಾಸ್ಟರ್ ಆನಂದ್ ಪ್ರಶ್ನೆಗೆ ಉತ್ತರಿಸಿ ನಯನ, ಹೌದು ಎರಡು ಮೂರು ಸಾರಿ ಬಂದಿದೆ. ಆದರೆ ನಾನು ಹೋಗಲ್ಲ ಎಂದು ನೇರವಾಗಿ ಉತ್ತರಿಸಿದ್ದಾರೆ. ನಯನ ಯಾಕೆ ಬಿಗ್ ಬಾಸ್‌ಗೆ ಹೋಗಲ್ಲ ಎನ್ನುವ ಕಾರಣ ಕೇಳಿದರೆ ಓದುಗರೂ ಕೂಡ ನಗುವುದಂತೂ ಗ್ಯಾರಂಟಿ. ಯಾಕಂದರೆ ಬಿಗ್ ಬಾಸ್ ಮನೆಯಲ್ಲಿ ಊಟ ಸರಿಯಾಗಲ್ಲ ಎಂದಿದ್ದಾರೆ.

ಮಾತು ಮುಂದುರಿಸಿದ ನಯನ, ನನಗೆ ಕೋಪ ಜಾಸ್ತಿ. ನೋಡಿ ಬಿಗ್ ಬಾಸ್ ಇವಳು ಸ್ವಲ್ಪ ಜಾಸ್ತಿ ತಿಂದಿದ್ದಾಳೆ ಅಂತಾ ಯಾರಾದರೂ ಹೇಳಿದರೆ ನಾನು ಅವರಿಗೆ ಸೌಟ್‌ನಲ್ಲಿ ಹೊಡೆದು ಬಿಡುತ್ತೇನೆ. ನಮ್ಮಪ್ಪನ ಮನೆಯಲ್ಲೇ ನನ್ನ ಯಾರು ಕೇಳಿಲ್ಲ. ಇವರ್ಯಾರು ಕೇಳೋಕೆ ಅಂತಾ ಸಿಟ್ಟಾಗುತ್ತೇನೆ. ಯಾಕೆ ಬೇಕು ಇದೆಲ್ಲಾ ಅಂತಾ ಸುಮ್ಮನಾಗಿದ್ದೇನೆ. ಜೊತೆಯಲ್ಲಿ ತಾಳ್ಮೆ ಕೂಡ ಕಮ್ಮಿ ನನಗೆ. ಯಾರಾದರೂ ಜಗಳಕ್ಕೆ ಬಂದರೆ ಜುಟ್ಟು ಹಿಡಿದುಕೊಂಡು ಜಗಳ ಆಡುತ್ತೇನೆ. ಅಷ್ಟು ಕೋಪ ಇರುತ್ತದೆ ನನಗೆ ಎಂದಿದ್ದಾರೆ.

ನಾನು ತುಂಬಾ ಫುಡ್ಡಿ (Foodie). ನನಗೆ ಚೆನ್ನಾಗಿ ತಿನ್ನಬೇಕು ಅಂತಾ ನಯನ ಹೇಳುತ್ತಿದ್ದಂತೆ ಯಶಸ್ವಿನಿ, ಆನಂದ್ ನಿನಗಿಂತಾ ಫುಡ್ಡಿ (Foodie) ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ನಯನ, ಅವರು ಇರುತ್ತಾರೆ. ಹೆಂಡ್ತೀನೇ ಬಿಟ್ಟು ಹಿಂಗೆ ಇದ್ದಾರೆ. ಇನ್ನೂ ಊಟ ಬಿಟ್ಟು ಇರಲ್ವಾ ಅಂತಾ, ಆನಂದ್ ದೇವರ ಪೂಜೆ-ಜಪವೊಂದಿದ್ದರೆ ಏನೂ ಬೇಕಾದರು ಬಿಟ್ಟು ಇರುತ್ತಾರೆ ಎನ್ನುವುದನ್ನು ಹೇಳಿದ್ದಾರೆ. ಇದಕ್ಕೆ ಯಶಸ್ವಿನಿ ಜೋರಾಗಿ ನಕ್ಕು ಅವರು ಊಟ ಬಿಡುವುದು ಸ್ವಲ್ಪ ಕಷ್ಟನೇ ಎಂದಿದ್ದಾರೆ.












Click it and Unblock the Notifications