'ಧುರಂಧರ್-2'ಗೆ ಹೆದರಿ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಮುಂದೂಡಿಕೆ ವದಂತಿ, ಇಲ್ಲಿದೆ ಸ್ಪಷ್ಟನೆ
2026ರ ಬಹುನಿರೀಕ್ಷಿತ ಚಿತ್ರಗಳ ಪೈಕಿ ನಟ ಯಶ್ ಅಭಿನಯದ "ಟಾಕ್ಸಿಕ್" ಹಾಗೂ ರಣವೀರ್ ಸಿಂಗ್ ಅಭಿನಯದ ಆದಿತ್ಯ ಧರ್ ನಿರ್ದೇಶನದ "ಧುರಂಧರ್ 2" ಚಿತ್ರಗಳು ಮಾರ್ಚ್ 19ರಂದು ಒಂದೇ ದಿನ ಬಿಡುಗಡೆಯಾಗುವುದು ಗೊತ್ತೇ ಇದೆ. ಇದರಿಂದ ಈ ವರ್ಷದ ದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಶ್ಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಇದರ ನಡುವೆ ಎರಡೂ ಸಿನಿಮಾಗಳು ಬಿಗ್ ಬಜೆಟ್ನದ್ದಾಗಿರುವುದರಿಂದ ಬಿಡುಗಡೆ ದಿನಾಂಕ ಮುಂದೂಡುವ ವದಂತಿ ಕೂಡ ಹಬ್ಬಿದೆ. ಈಗಾಗಲೇ ಧುರಂದರ್ ಟೀಂ ಅದೇ ದಿನ ಸಿನಿಮಾ ರಿಲೀಸ್ ಖಚಿತ ಎಂದು ಸ್ಪಷ್ಟಪಡಿಸಿದ್ದು, ಇದೀಗ "ಟಾಕ್ಸಿಕ್" ಸಿನಿಮಾದ ಬಿಡುಗಡೆ ದಿನಾಂಕ ಮುಂಡೂಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.
ಟಾಕ್ಸಿಕ್ ಸಿನಿಮಾವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಆದರೆ ಇತ್ತೀಚೆಗಷ್ಟೇ ಕೆವಿಎನ್ ಪ್ರೊಡಕ್ಷನ್ಸ್ಗೆ ಸವಾಲುಗಳು ಎದುರಾಗಿದ್ದವು. ಇದೇ ಬ್ಯಾನರ್ನಡಿ ಬರಬೇಕಿದ್ದ ನಟ ದಳಪತಿ ವಿಜಯ್ ಅವರ "ಜನ ನಾಯಗನ್" ಸಿನಿಮಾ ಬಿಡುಗಡೆಗೆ ಕಾನೂನು ಸಂಕಷ್ಟ ಎದುರಾದ ಹಿನ್ನೆಲೆ ಇದೀಗ "ಟಾಕ್ಸಿಕ್" ಚಿತ್ರದ ಬಿಡುಗಡೆ ದಿನಾಂಕದ ಕುರಿತೂ ಊಹಾಪೋಹಗಳು ಶುರುವಾಗಿದೆ. ಮಾರ್ಚ್ 19ರಂದೇ "ಧುರಂಧರ್ 2" ಕೂಡ ಬಿಡುಗಡೆಯಾಗುತ್ತಿರುವ ಹಿನ್ನೆಲೆ "ಟಾಕ್ಸಿಕ್" ಚಿತ್ರದ ಬಿಡುಗಡೆಯನ್ನು ಮುಂದೂಡಬಹುದು ಎಂಬ ಮಾತುಗಳು ಕೇಳಿಬಂದಿವೆ.

ಕೆವಿಎನ್ ಟೀಂನಿಂದ ಅಧಿಕೃತ ಮಾಹಿತಿ
ಆದರೆ ಈ ಎಲ್ಲ ವದಂತಿಗಳಿಗೆ ಕೆವಿಎನ್ ಪ್ರೊಡಕ್ಷನ್ಸ್ ತೆರೆ ಎಳೆದಿದೆ. "ಟಾಕ್ಸಿಕ್" ಚಿತ್ರದ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. "ಮಾರ್ಚ್ 19ರಂದು ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಬಿಡುಗಡೆಯಾಗುವುದು ಖಚಿತ" ಎಂದು ನಿರ್ಮಾಣ ಸಂಸ್ಥೆ ಅಧಿಕೃತವಾಗಿ ತಿಳಿಸಿದ್ದು, ವಿಳಂಬದ ಕುರಿತು ಹರಡಲಾಗುತ್ತಿರುವ ಎಲ್ಲ ಸುದ್ದಿಗಳನ್ನು ಸಂಸ್ಥೆ ತಳ್ಳಿ ಹಾಕಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಸಿನಿಮಾ ವಲಯದ ಮೂಲಗಳ ಪ್ರಕಾರ, ಈ ಎರಡೂ ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಪ್ರೇಕ್ಷಕರು ವಿಭಜನೆಯಾಗುವ ಸಾಧ್ಯತೆ ಇದೆ. ಹೀಗಾಗಿ ಒಂದು ಸಿನಿಮಾ ಮುಂದೂಡುವ ಚರ್ಚೆಗಳು ನಡೆದಿದ್ದವು ಎನ್ನಲಾಗಿದೆ. ಇದು ಭಯದಿಂದಲ್ಲ, ಬಾಕ್ಸ್ ಆಫೀಸ್ ಆರೋಗ್ಯಕರವಾಗಿರಲಿ ಎಂಬ ಉದ್ದೇಶ, ಎರಡೂ ಚಿತ್ರಗಳು ತನ್ನದೇ ಆದ ಸಂಭ್ರಮದೊಂದಿಗೆ ಬಿಡುಗಡೆಯಾಗಬೇಕು ಎಂಬ ದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರ ಇರಬಹುದು ಎನ್ನಲಾಗಿತ್ತು. ಆದರೆ ಈ ಚರ್ಚೆಗಳ ನಡುವೆಯೇ ಟಾಕ್ಸಿಕ್ ನಿರ್ಮಾಪಕರು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಟಾಕ್ಸಿಕ್ ಮೇಲೆ ಹೆಚ್ಚಿದ ನಿರೀಕ್ಷೆ
ಇನ್ನು ಟಾಕ್ಸಿಕ್ 2026ರ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿದೆ. ಚಿತ್ರದ ಮೊದಲ ಟೀಸರ್ ಬಿಡುಗಡೆಯಾದಾಗಿನಿಂದಲೇ ಭಾರೀ ಹೈಪ್ ಸೃಷ್ಟಿಯಾಗಿದ್ದು, ಹಲವು ವರ್ಷಗಳ ಬಳಿಕ ಯಶ್ ಅವರನ್ನು ತೆರೆ ಮೇಲೆ ನೋಡುವ ಕಾತುರ ಹಾಗೂ ವಿಭಿನ್ನ ಕಥನ ಶೈಲಿಯು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ.ನಾರಾಯಣ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ತಾರಾಗಣವೇ ನಟಿಸುತ್ತಿರುವುದು ಚಿತ್ರದ ಮೇಲೆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮಾರ್ಚ್ 19ರಂದೇ ಟಾಕ್ಸಿಕ್ ಹಾಗೂ ಧುರಂಧರ್ 2 ಎರಡೂ ಫ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಯಾದರೆ, ಈ ವರ್ಷ ಬಾಕ್ಸ್ ಆಫೀಸ್ನಲ್ಲಿ ಭಾರಿ ಫೈಟ್ ನಡೆಯುವುದು ಖಚಿತ ಎನ್ನಲಾಗುತ್ತಿದೆ. ಇತ್ತೀಚೆಗೆ ಧುರಂದರ್-2 ಸಿನಿಮಾದ ಟೀಸರ್ ಬಹುಭಾಷೆಗಳಲ್ಲಿ ರಿಲೀಸ್ ಆಗಿದ್ದು, ಈ ಸಿನಿಮಾದ ಡೈಲಾಗ್ ಟಾಕ್ಸಿಕ್ಗೆ ಟಕ್ಕರ್ ಕೊಡುವಂತಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications