Yash Toxic Teaser: ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಟೀಸರ್ ರಿಲೀಸ್: ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್
Yash Toxic Teaser: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ. ನಟ ಯಶ್ ಅವರು ಅಭಿನಯಿಸಿರುವ ಟಾಕ್ಸಿಕ್ Vs ಧುರಂಧರ್ 2 ಸಿನಿಮಾಗಳ ನಡುವೆ ಭಾರೀ ಪೈಪೋಟಿ ಇದೆ. ಧುರಂಧರ್ 2 ಸಿನಿಮಾಗೆ ಯಾವ ರೀತಿ ಪೈಪೋಟಿ ನೀಡಲಿದೆ ಎನ್ನುವ ಕುತೂಹಲವಿತ್ತು. ಈ ಕುತೂಹಲಗಳಿಗೆ ತೆರೆ ಬಿದ್ದಂತೆ ಆಗಿದೆ. ಯಶ್ ಅಭಿಮಾನಿಗಳಿಗೆ ನಟ ಯಶ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಚಿತ್ರತಂಡವು ದಿಢೀರ್ ಎಂದು ಶುಕ್ರವಾರ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈಚೆಗೆ ಟಾಕ್ಸಿಕ್ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿತ್ತು.

ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ನಟ ಯಶ್ ಹೊಸ ಸ್ಟೈಲ್‌ನಲ್ಲಿ ಮಿಂಚಿದ್ದಾರೆ. ಕೆಜಿಎಫ್: ಅಧ್ಯಾಯ 2 ರ ಬ್ಲಾಕ್‌ಬಾಸ್ಟರ್ ಯಶಸ್ಸಿನ ನಂತರ ಯಶ್ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 20ನೇ ಶತಮಾನದ ಮಧ್ಯಭಾಗದ ಗೋವಾದಲ್ಲಿ ನಡೆಯುವ ಅಂಡರ್ ವರ್ಡ್‌ನ ಚಿತ್ರಕಥೆಯನ್ನು ಈ ಸಿನಿಮಾ ಹೊಂದಿದೆ. ಕೆಜಿಎಫ್ ಸಿನಿಮಾ ಬಿಡುಗಡೆಯಾದ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಯಶ್ ಅವರ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗುತ್ತಿದೆ.
ಟೀಸರ್‌ನಲ್ಲಿ ಇರುವಂತೆ 1940 ಮತ್ತು 1970 ರ ನಡುವೆ ಗೋವಾದಲ್ಲಿ ನಡೆಯುವ ಘಟನೆಗಳನ್ನು ಒಳಗೊಂಡಿದೆ. ಇದು ಆಕ್ಷನ್-ಥ್ರಿಲ್ಲರ್ ಸಾಹಸಗಾಥೆಯಾಗಿದೆ. ಟಾಕ್ಸಿಕ್ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಅದೇ ದಿನ ಬಿಡುಗಡೆಯಾಗಲಿರುವ ರಣವೀರ್ ಸಿಂಗ್ ಅವರ ಧುರಂಧರ್ 2 ನೊಂದಿಗೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಎದುರಿಸುತ್ತಿದೆ.
ಡಬಲ್ ರೋಲ್‌ನಲ್ಲಿ ಮಿಂಚಿರುವ ಯಶ್
ಇನ್ನು ಟಾಕ್ಸಿಕ್ ಸಿನಿಮಾದಲ್ಲಿ ನಟ ಯಶ್ ಅವರು ಡಬಲ್ ರೋಲ್‌ನಲ್ಲಿ ಮಿಂಚಿದ್ದಾರೆ. ಈ ಮೊದಲು ಬಿಡುಗಡೆಯಾದ ಗ್ಲಿಂಪ್‌ನಲ್ಲಿಯೇ ಅಭಿಮಾನಿಗಳು ಟಾಕ್ಸಿಕ್ ಸಿನಿಮಾದಲ್ಲಿ ನಟ ಯಶ್ ಅವರ ಡಬಲ್ ರೋಲ್ ಇರಲಿದೆ ಎಂದು ಅಂದಾಜಿಸಿದ್ದರು. ಇದೀಗ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಟೀಸರ್‌ನಲ್ಲಿ ಯಶ್ ಯಂಗ್ ಲುಕ್ನಲ್ಲೂ ಕಾಣಿಸಿಕೊಂಡಿದ್ದು, ಇದು ರಾಯನ ಮಗ ಇರಬಹುದೇ ಎಂದು ಅಂದಾಜಿಸಲಾಗಿದೆ. ಇನ್ನು ನಟ ಯಶ್ ಅವರ ಸಿನಿಮಾ ಜರ್ನಿಯಲ್ಲಿ ಡಬಲ್ ರೋಲ್ ಮಾಡಿರುವ ಮೊದಲ ಸಿನಿಮಾ ಟಾಕ್ಸಿಕ್ ಆಗಲಿದೆ.
Yash Toxic Teaser: ಟಾಕ್ಸಿಕ್ ಸಿನಿಮಾದಲ್ಲಿ ನಟಿಯರ ದಂಡು
ಇನ್ನು ಟಾಕ್ಸಿಕ್ ಸಿನಿಮಾದಲ್ಲಿ ನಟಿಯರ ದಂಡೇ ಇದೆ. ಟೀಸರ್ ಮೂಲಕ ಸಿನಿಮಾದ ಪ್ರಮುಖ ಪಾತ್ರಧಾರಿಗಳ ಪರಿಚಯ ಮಾಡಿಕೊಡಲಾಗಿದೆ. ನಟಿಯರ ದಂಡೇ ಈ ಸಿನಿಮಾದಲ್ಲಿ ಇದೆ.
ಪ್ರಮುಖ ನಟ ಮತ್ತು ನಟಿಯರು ಪಾತ್ರ
ಯಶ್: ರಾಯ (Raya)
ನಯನತಾರಾ: ಗಂಗಾ
ಕಿಯಾರಾ ಅಡ್ವಾಣಿ: ನಾದಿಯಾ
ಹುಮಾ ಖುರೇಶಿ: ಎಲಿಜಬೆತ್
ರುಕ್ಮಿಣಿ ವಸಂತ್: ಮೆಲಿಸಾ
ತಾರಾ ಸುತಾರಿಯಾ: ರೆಬೆಕಾ
ನಟಾಲಿ ಬರ್ನ್: ಉಕ್ರೇನಿಯನ್ ನಟಿ












Click it and Unblock the Notifications