Yash Toxic craze: ಫ್ಯಾನ್ಸ್‌ಗಳ ಅತೀ ಅಭಿಮಾನವೇ ಯಶ್‌ಗೆ ಶಾಪವಾಗ್ತಿದೆಯಾ! ಟಾಕ್ಸಿಕ್ ಹೈದರಾಬಾದ್ ಇವೆಂಟ್‌ನಲ್ಲಿ ನಡೆದಿದ್ದೇನು
ಯಶ್ ಅಂದರೆ ಈಗ ಜಗತ್ತೇ ಅಭಿಮಾನ ಪಡುವ ನಟ ಎಂದು ಬಣ್ಣಿಸಲಾಗ್ತಿದೆ. ಅವರ ಮೇಲಿನ ಈ ಅಭಿಮಾನಕ್ಕೆ ಕಾರಣ ಲಾರ್ಜರ್ ದ್ಯಾನ್ ಲೈಫ್ ಕಾನ್ಸೆಪ್ಟ್‌ನಲ್ಲಿ ಹೊರಬರುತ್ತಿರುವ ಅವರ ಸಿನಿಮಾಗಳು. ಹೀರೋನ ಸ್ಥಾನದಲ್ಲಿ ಹೆಚ್ಚಾಗಿ ತಮ್ಮನ್ನೇ ಕಲ್ಪಿಸಿಕೊಂಡು ಸಿನಿಮಾ ನೋಡುವ ಅಭಿಮಾನಿಗಳಿಗೆ ಈ ಕಾನ್ಸೆಪ್ಟೇ ಮೈ ನವಿರೇಳಿಸಿತ್ತು. ಲೈಪಿನ ಜಂಜಟಗಳನ್ನು ಮರೆತು ಅವರು ಮತ್ಯಾವುದೋ ಜಗತ್ತಿನಲ್ಲಿ ಕಳೆದುಹೋದಂತಾಗಿದ್ದರು.
ತಮಗೆ ಇಂಥಾದ್ದೊಂದು ಅನುಭವ ಕಟ್ಟಿಕೊಟ್ಟ ನಾಯಕನ ಬಗ್ಗೆ ಪ್ರೇಕ್ಷಕರಿಗೆ ಅಭಿಮಾನ ಹುಟ್ಟುವುದು ಸಹಜವೇ. ಆದರೆ ಈಗ ಅಂಥಾ ಅಭಿಮಾನವೇ ಸ್ಟಾರ್ ನಟ ಯಶ್‌ಗೆ ತಲೆನೋವನ್ನು ಸೃಷ್ಟಿಸಿದಂತಾಗಿದೆ. ಹೈದರಾಬಾದ್ ಈವೆಂಟ್ ಇದಕ್ಕೆ ಮತ್ತೊಂದು ಸಾಕ್ಷಿಯಾಯಿತು.

ಸಾವು ನೋವಿಗೆ ಕಾರಣವಾಗುತ್ತಿರುವ ಅಭಿಮಾನ
ತನ್ನ ಅಂತ್ಯಕ್ರಿಯೆಗೆ ಯಶ್ ಬರಬೇಕು ಅಂತ ಡೆತ್‌ನೋಟ್ ಬರೆದಿಟ್ಟು ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಇತ್ತೀಚಿನ ಸಂದರ್ಶನದಲ್ಲಿ ಇದನ್ನು ಉಲ್ಲೇಖಿಸಿ ಮಾತನಾಡಿದ ಯಶ್, ʼನನ್ನ ಆ ಅಭಿಮಾನಿ ತೀರಿಕೊಂಡಾಗ ಮನಸ್ಸಿಗೆ ಬಹಳ ಬೇಸರವಾಗಿತ್ತು. ಆದರೆ ಆತನ ಅಂತ್ಯಕ್ರಿಯೆಗೆ ನಾನು ಹೋಗಲಿಲ್ಲ. ಒಂದು ವೇಳೆ ಹೋಗಿದ್ದರೆ ತಪ್ಪು ಮೆಸೇಜ್ ಹೋದಂತಾಗುತ್ತಿತ್ತು. ಅನೇಕರು ಯಶ್ ಅಂತ್ಯಕ್ರಿಯೆಗೆ ಬರಬೇಕು ಅಂತ ಬರೆದಿಟ್ಟು ಸಾವಿಗೆ ಶರಣಾಗುವ ಸಾಧ್ಯತೆ ಇತ್ತು. ಇದು ಬಹಳ ಮಾರಕವಾದದ್ದುʼ ಎಂದು ಯಶ್ ಹೇಳಿದ್ದರು.
ಯಶ್ ಬರ್ತ್‌ಡೇ ಸಂಭ್ರಮದಲ್ಲಾದ ಅವಘಡ
ಹಿಂದೆ ಯಶ್ ಜನ್ಮದಿನದ ಸೆಲೆಬ್ರೇಶನ್ ಅನ್ನು ಗ್ರ್ಯಾಂಡ್ ಆಗಿ ಮಾಡಲು ಅಭಿಮಾನಿಗಳು ಮುಂದಾಗಿದ್ದರು. ಈ ವೇಳೆ ನಡೆದ ಅವಘಡದಲ್ಲಿ ಇಬ್ಬರು ಅಭಿಮಾನಿಗಳು ಸಾವಿಗೀಡಾಗಿದ್ದರು. ಇದರಿಂದ ಯಶ್‌ಗೆ ಆಘಾತವಾಗಿತ್ತು. ಅಭಿಮಾನಿಗಳ ಜಾಗಕ್ಕೆ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಿ ಸಹಾಯವನ್ನೂ ಮಾಡಿದ ಯಶ್ ಮುಂದೆಂದೂ ತನ್ನ ಜನ್ಮದಿನ ಆಚರಣೆಯನ್ನು ಪಬ್ಲಿಕ್ ಆಗಿ ಮಾಡಲು ಮುಂದಾಗಲಿಲ್ಲ. ಸಮಯವಿದ್ದರೆ ಅಭಿಮಾನಿಗಳಿಗೆ ಮನೆಯಲ್ಲೇ ಸೆಲ್ಫಿಗೆ ಪೋಸ್ ನೀಡುತ್ತಿದ್ದರು.
ಹೈದರಾಬಾದ್‌ನಲ್ಲಿ ಕಹಿ ಘಟನೆ
ಟಾಕ್ಸಿಕ್ ರಿಲೀಸ್ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಪ್ರೀರಿಲೀಸ್ ಈವೆಂಟ್ ಆಯೋಜಿತವಾಗಿತ್ತು. ಹೈದರಾಬಾದ್‌ನ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ಅತಿಯಾದ ಜನಸ್ತೋಮ ಸೇರಿದ್ದರಿಂದ ಜನಸಂದಣಿ ನಿಯಂತ್ರಣ ಕಷ್ಟಕರವಾಗಿತ್ತು. ಈ ಬೃಹತ್ ಕಾರ್ಯಕ್ರಮದಲ್ಲಿ ಸೌಂಡ್‌ಬಾಕ್ಸ್ ಮತ್ತು ಲೈಟಿಂಗ್ ಸೆಟಪ್ ಬಿದ್ದು ಕೆಲವು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಗಾಯಗೊಂಡಿದ್ದಾರೆ. ವೇದಿಕೆಯಲ್ಲಿ ಯಶ್ ಅವರು ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ.
ಯಶ್ ನೋಡಲು ನೂಕುನುಗ್ಗಲು ತಳ್ಳಾಟ
ವೇದಿಕೆಯ ಹತ್ತಿರಕ್ಕೆ ಬರಲು ವಿದ್ಯಾರ್ಥಿಗಳು ಸೌಂಡ್‌ಬಾಕ್ಸ್ ಹಾಗೂ ಇತರ ಉಪಕರಣಗಳನ್ನು ಕಟ್ಟಿಹಾಕಿದ್ದ ಕಂಬಗಳನ್ನು ಹತ್ತಲು ಯತ್ನಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಯಶ್ ವೇದಿಕೆಗೆ ಬರುತ್ತಿದ್ದಂತೆ ಜನರಿಗೆ ಅವರನ್ನು ನೋಡುವ ಕ್ರೇಜ್ ಹೆಚ್ಚಾಗಿದೆ. ಈ ವೇಳೆ ಅವರು ಸೌಂಡ್‌ಬಾಕ್ಸ್ ಮತ್ತು ಬೇರೆ ಬೇರೆ ಉಪಕರಣಗಳಿದ್ದ ಕಂಬಗಳನ್ನು ಹತ್ತಲು ಮುಂದಾಗಿದ್ದಾರೆ. ಈವೇಳೆ ಭಾರ ತಡೆಯಲಾಗದೇ ಸೌಂಡ್ ಬಾಕ್ಸ್ ಹಾಗೂ ಕಂಬಗಳು ನೆಲಕ್ಕೆ ಕುಸಿದಿವೆ. ಇದನ್ನು ಏರಿದವರೂ ನೆಲಕ್ಕೆ ಬಿದ್ದಿದ್ದಾರೆ. ಈ ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದೆ. ಓರ್ವ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣವೇ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಘಟನೆಗೂ ಮುನ್ನವೇ ತಳ್ಳಾಟ ನಿಯಂತ್ರಿಸಲು ಜನರನ್ನು ಪೊಲೀಸರು ಹಿಂದೆ ಸರಿಯುವಂತೆ ಎಚ್ಚರಿಸಿದ್ದರು. ಆದರೆ ಮಲ್ಲಾರೆಡ್ಡಿ ಯೂನಿವರ್ಸಿಟಿಯಲ್ಲಿ ಅತಿಯಾದ ಜನಸ್ತೋಮ ಸೇರಿದ್ದರಿಂದ ಜನಸಂದಣಿ ನಿಯಂತ್ರಣ ಕಷ್ಟಕರವಾಗಿತ್ತು.
టాక్సిక్ ప్రీ-రిలీజ్ ఈవెంట్లో ప్రమాదం
— Tupaki (@tupaki_official) August 22, 2026
హైదరాబాద్లోని మల్లారెడ్డి యూనివర్సిటీలో జరిగిన #Toxic ప్రీ-రిలీజ్ ఈవెంట్లో ప్రమాదం చోటుచేసుకుంది.
ఈవెంట్ కోసం ఏర్పాటు చేసిన భారీ సౌండ్ బాక్స్ సెటప్ ఒక్కసారిగా కూలిపోవడంతో ఇద్దరు విద్యార్థులు తీవ్రంగా గాయపడ్డారు. వారిలో ఓ యువతి స్పృహ… pic.twitter.com/qIwIy681JK
ಯಶ್ ಕಳವಳದ ಮಾತು
ಯಶ್ ವೇದಿಕೆ ಮೇಲೇರಿದಾಗ ಈ ಘಟನೆ ನಡೆದಿದ್ದು, ಅಭಿಮಾನಿಗಳು ಬಿದ್ದದ್ದು ನೋಡಿ ಯಶ್ ಕೂಗಿಕೊಂಡಿದ್ದಾರೆ. ತನಗೆ ತಿಳಿದ ತೆಲುಗಿನಲ್ಲೇ ಅಲ್ಲಿದ್ದವರಿಗೆ ಸೂಚನೆ ನೀಡಿದ್ದಾರೆ. ಮಾತು ನಿಲ್ಲಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದ ಅವರು, ಪ್ರೇಕ್ಷಕರು ಶಾಂತವಾಗಿ ಕುಳಿತುಕೊಳ್ಳುವಂತೆ ಮತ್ತು ಜಾಗರೂಕರಾಗಿರುವಂತೆ ಮನವಿ ಮಾಡಿದ್ದಾರೆ. ಆಯೋಜಕರಿಂದ ಘಟನೆಯ ವಿವರ ಪಡೆದುಕೊಂಡು ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿರುವುದಾಗಿ ವರದಿಯಾಗಿದೆ.
ಸದ್ಯ ಯಶ್‌ಗೆ ಅತೀ ಅಭಿಮಾನವೇ ಟೆನ್ಶನ್ ಹೆಚ್ಚಿಸುವಂತಿದೆ. ಟಾಕ್ಸಿಕ್‌ನ ಹವಾ ಎಷ್ಟು ಜೋರಾಗಿದೆ ಅಂದರೆ ತಮ್ಮ ನೆಚ್ಚಿನ ನಾಯಕನ ಮೇಲಿನ ಕ್ರೇಜ್‌ಗಾಗಿ ಫ್ಯಾನ್ಸ್ ಯಾವ ರಿಸ್ಕ್‌ಗೂ ಮುಂದಾಗುವ ಹಾಗೆ ಕಾಣುತ್ತಿದೆ. ಇಂಥಾ ಕುರುಡು ಅಭಿಮಾನವನ್ನು ಎಂದೂ ಪ್ರೋತ್ಸಾಹಿಸದ ಯಶ್, ʼನೀವು ಸಾಧನೆ ಮಾಡಿ ನನ್ನ ಕರೆದರೆ ಬರ್ತೀನಿ, ಹೀಗೆಲ್ಲ ಜೀವಕ್ಕೆ ತೊಂದರೆ ಮಾಡಿಕೊಂಡರೆ ನನ್ನ ಸಪೋಟ್ ಇರಲ್ಲ. ಸಿನಿಮಾವನ್ನು ಎನ್‌ಜಾಯ್ ಮಾಡಿ ನಂತರ ನಿಮ್ಮ ಬದುಕಿನ ಸಾಧನೆಗಳ ಕಡೆ ಮುಖ ಮಾಡಿ. ಅತೀ ಅಭಿಮಾನ ಬೇಡವೇ ಬೇಡʼ ಎಂಬ ಮಾತನ್ನ ಯಾವತ್ತೂ ಹೇಳುತ್ತಾರೆ. ಹೈದರಾಬಾದ್ ವೇದಿಕೆಯಲ್ಲೂ ಹೇಳಿದ್ದಾರೆ. ಅಭಿಮಾನಿಗಳು ಕ್ರೇಜ್ ಅನ್ನು ನಿಯಂತ್ರಿಸಲೇ ಬೇಕಾಗಿದೆ.


Click it and Unblock the Notifications
