KGF-3: ಕೆಜಿಎಫ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೊನೆಗೂ ಸಿಕ್ಕಿತು!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ದೊಡ್ಡ ಅಬ್ಬರ ತೋರಿಸಿದ್ದ ಸಿನಿಮಾ ಕೆಜಿಎಫ್ ಆಗಿತ್ತು, ಇತ್ತೀಚಿನ ವರ್ಷಗಳಲ್ಲಿ ಇಡೀ ಇಂಡಿಯನ್ ಸಿನಿಮಾ ಬಾಕ್ಸ್ ಆಫಿಸ್ ಅಖಾಡವನ್ನೇ ನಡುಗಿಸಿ ಹಾಕಿತ್ತು ಕನ್ನಡಿಗರ 'ಕೆಜಿಎಫ್' ಸಿನಿಮಾ. ಅಭಿಮಾನಿಗಳು ಕೂಡ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ನೋಡಿ ಹೆಮ್ಮೆಪಟ್ಟಿದ್ದರು. ಆದರೆ 'ಕೆಜಿಎಫ್-1' ಹಾಗೂ 'ಕೆಜಿಎಫ್-2' ಮುಗೀತು, 'ಕೆಜಿಎಫ್-3' ಯಾವಾಗ? ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಭರ್ಜರಿ ಸುದ್ದಿ ಸಿಕ್ಕಿದೆ.
ಕೆಜಿಎಫ್ ಸಿನಿಮಾ ಯಾವ ರೇಂಜ್‌ಗೆ ಟ್ರೆಂಡ್ ಸೆಟ್ ಮಾಡಿತ್ತು ಅಂದ್ರೆ, ಯಾವುದೇ ಒಂದು ಸಿನಿಮಾ ಮಾಡಬೇಕು ಅಂದ್ರೆ ಮೊದಲು ಕೆಜಿಎಫ್ ನೋಡಿ ಅಂತಾ ಹೇಳುವ ಕಾಲವೇ ಸೃಷ್ಟಿ ಅಗಿತ್ತು. ಯಶ್ ಅವರ 'ಕೆಜಿಎಫ್-1' 2018ರ ಅಂತ್ಯದಲ್ಲಿ ರಿಲೀಸ್ ಆಗಿ ದೊಡ್ಡ ಸೌಂಡ್ ಮಾಡಿ, ಬಾಕ್ಸ್ ಆಫಿಸ್‌ನಲ್ಲಿ ನೂರಾರು ಕೋಟಿ ರೂಪಾಯಿ ವಸೂಲಿ ಮಾಡಿತ್ತು. ಆ ನಂತರ 'ಕೆಜಿಎಫ್-2' ಸಿನಿಮಾ ಭರ್ಜರಿ 4 ವರ್ಷಗಳ ನಂತರ ರಿಲೀಸ್ ಆಗಿ ಅಬ್ಬರಿಸಿತ್ತು. ಹೀಗಿದ್ದಾಗ, 'ಕೆಜಿಎಫ್-2' ಕ್ಲೈಮ್ಯಾಕ್ಸ್ ಸೀನ್‌ನಲ್ಲಿ 'ಕೆಜಿಎಫ್-3' ಬಗ್ಗೆ ಹಿಂಟ್ ಕೊಡಲಾಗಿತ್ತು. ಇದೀಗ ಅದು ನಿಜವೇ ಆಗುತ್ತಿದೆ.

'ಕೆಜಿಎಫ್-3' ಅಖಾಡಕ್ಕೆ ಅಜಿತ್ ಎಂಟ್ರಿ!
ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದ್ದ 'ಕೆಜಿಎಫ್-1' ಹಾಗೂ 'ಕೆಜಿಎಫ್-2' ಅಬ್ಬರಿಸಿ ದೊಡ್ಡ ಸೌಂಡ್ ಮಾಡಿವೆ. ಹೀಗಾಗಿ 'ಕೆಜಿಎಫ್-3' ಯಾವಾಗ ಬರಲಿದೆ? ಎಂಬ ಬಗ್ಗೆಯೂ ಕುತೂಹಲ ಮೂಡಿತ್ತು. ಹೀಗಿದ್ದಾಗ, 'ಕೆಜಿಎಫ್-3' ಬಗ್ಗೆ ಹೊಸ ಸುದ್ದಿ ಹೊರಗೆ ಬಿದ್ದಿದೆ. ಅದು ಏನಪ್ಪಾ ಅಂದ್ರೆ, 'ಕೆಜಿಎಫ್-3' ಅಖಾಡಕ್ಕೆ ತಮಿಳು ಸ್ಟಾರ್ ನಟರಾದ ಅಜಿತ್ ಅವರ ಎಂಟ್ರಿ ಗ್ಯಾರಂಟಿ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇದೀಗ 'ಕೆಜಿಎಫ್-3' ಮತ್ತೊಮ್ಮೆ ಟ್ರೆಂಡ್ ಹುಟ್ಟುಹಾಕಿದೆ.












Click it and Unblock the Notifications