Toxic: ಯಶ್ ಕ್ರೇಜ್‌ಗೆ ಬೆಚ್ಚಿಬಿದ್ದ ಬಾಕ್ಸ್ ಆಫೀಸ್; 'ಟಾಕ್ಸಿಕ್' ಟಿಕೆಟ್‌ಗಳಿಗೆ ಹೆವೀ ಡಿಮ್ಯಾಂಡ್, ಬುಕಿಂಗ್‌ನಲ್ಲಿ ದಾಖಲೆ
Toxic: ಕರ್ನಾಟಕ ಸೇರಿದಂತೆ ಭಾರತವೇ ಕಾತರದಿಂದ ಕಾಯುತ್ತಿರುವ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಐದು ದಿನ ಬಾಕಿ ಇದೆ. ಆಗಸ್ಟ್ 21ರಿಂದ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಯಶ್ ಟಿಕೆಟ್ ಬುಕಿಂಗ್‌ನಲ್ಲೂ ದಾಖಲೆ ಬರೆದಿದ್ದಾರೆ. ಮೊದಲ ದಿನವೇ ಎಲ್ಲ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. 'ಟಾಕ್ಸಿಕ್' ಹಿಂದಿನ ಕೆಜಿಎಫ್ ನ ಎಲ್ಲ ದಾಖಲೆಗಳನ್ನು ಪುಡಿ ಮಾಡಿ ಮುನ್ನುಗ್ಗಲಿದೆ. 'ಟಾಕ್ಸಿಕ್' ಮೂಲಕ ಯಶ್ ಕ್ರೇಜ್ ಪ್ಯಾನ್ ಇಂಡಿಯಾದಿಂದ ಪ್ಯಾನ್ ವರ್ಲ್ಡ್ ಹಂತಕ್ಕೆ ತಲುಪುವ ಲಕ್ಷಣಗಳು ಕಾಣಿಸುತ್ತಿವೆ.
ಗೀತು ಮೋಹನದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾದ 'ರಾಯ' ಬೆಂಗಳೂರಿನ 50 ಸಿಂಗಲ್ ಸ್ಕ್ರೀನ್, ಮಲ್ಟಿಫ್ಲೆಕ್ಸ್ ಸೇರಿದಂತೆ ವಿಶ್ವದಾದ್ಯಂತ ಬರೋಬ್ಬರಿ 12000+ ಅಧಿಕ ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದ್ದಾನೆ. ಇಷ್ಟು ದಿನ ಫ್ಯಾನ್ಸ್ ಕಾಯುತ್ತಿದ್ದ ಶುಭ ಗಳಿಗೆ ಎದುರಾಗಿದ್ದು, ಟಿಕೆಟ್ ಬುಕಿಂಗ್ ಮೇಲೆ ಸುಮಾರು 1.1 ಮಿಲಿಯನ್ ಮಂದಿ ಆಸಕ್ತಿ ತೋರಿಸಿದ್ದಾರೆ. ಯಶ್ ಅವರ ವಿವಿಧ ಶೇಡ್ ನ ನಟನೆ ನೋಡಲು ಹಾಗೂ ಐವರು ನಟಿ ಮಣಿಯರನ್ನು ಕಣ್ತಿಂಬಿಕೊಳ್ಳಲು ಕಾತರರಾಗಿದ್ದ ಫ್ಯಾನ್ಸ್ ಇಂದಿನಿಂದ ಟಾಕ್ಸಿಕ್ ಹಬ್ಬ ಅಚರಿಸುತ್ತಿದ್ದಾರೆ.

ಯಶ್ ಕ್ರೇಜ್; ಎಲ್ಲ ಟಿಕೆಟ್ ಸೋಲ್ಡ ಔಟ್! ಏಳುತ್ತೆ ಸುನಾಮಿ..
ಕೆಜಿಎಫ್ ಸರಣಿ ದಾಖಲೆಗಳನ್ನು ಬರೆದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿರುವ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಟಿಕೆಟ್ ಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿದ್ದಂತೆ ಕ್ಷಣಾರ್ಧದಲ್ಲಿ ಸೋಲ್ಡ್ ಔಟ್ ಆಗಿವೆ. ಈ ಮೂಲಕ ಮತ್ತೊಂದು ದಾಖಲೆ ನಿರ್ಮಾಣವಾಗಿದೆ.
ಟಿಕೆಟ್ ವಿಂಡೋ ತೆರೆಯುತ್ತಿದ್ದಂತೆ ಬೆಂಗಳೂರಿನ ಎಲ್ಲ ಥಿಯೇಟರ್ ಟಿಕೆಟ್‌ಗಳು ಬುಕಿಂಗ್ ಆಗಿವೆ. ಜನ ಮುಗಿಬಿದ್ದು ಖರೀದಿಸಿದ್ದಾರೆ. ಮಲ್ಟಿಫ್ಲೆಕ್ಸ್, ಸಿಂಗಲ್ ಸ್ಕ್ರೀನ್ ಸೇರಿದಂತೆ ಯಾವುದನ್ನು ಬಿಟ್ಟಿಲ್ಲ. ಎಲ್ಲ ಟಿಕೆಟ್ ಗಳು ನಿಮಿಷಗಳಲ್ಲಿ ಬುಕ್ ಆಗಿವೆ. ಬಹುತೇಕ ಎಲ್ಲ ಟಿಕೆಟ್‌ಗಳು ಬುಕ್ ಆಗುವ ಮೂಲಕ 'ಟಾಕ್ಸಿಕ್' ಅನೇಕ ದಾಖಲೆಗಳನ್ನು ಮಾಡುವ ಮುನ್ಸೂಚನೆ ದೊರೆತಿದೆ. ಯಶ್ ಕ್ರೇಜ್, ಟಿಕೆಟ್ ಬುಕಿಂಗ್ ನೋಡಿದರೆ ಯಶ್ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲಿದ್ದಾರೆ ಎನ್ನಿಸುತ್ತಿದೆ. ಕೇವಲ ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೇ 'ಇಂಡಿಯನ್ ಬಾಕ್ಸ್ ಆಫೀಸ್ ಸುಲ್ತಾನ' ಆಗುವ ಲಕ್ಷಣಗಳು ಕಾಣಿಸುತ್ತಿವೆ. ಇದು ನಿಜವಾಗಲು ಕೆಲವೇ ದಿನಗಳು ಕಾಯಬೇಕಿದೆ.
ಕೆಜಿಎಫ್ 2 ಬಳಿಕ ಯಶ್ ವರ್ಚಸ್ಸು ಬೇರೆ ಹಂತಕ್ಕೆ ತಲುಪಿತ್ತು. ಪ್ರತಿ ಬಾರಿಯು ನೆಕ್ಸ್ಟ್ ಲೇವೆಲ್‌ನಲ್ಲಿ ಯೋಚಿಸುವ ರಾಕಿಭಾಯ್ ಅದನ್ನು ಟಾಕ್ಸಿಕ್ ಮೂಲಕ ಮತ್ತೆ ಸಾಬೀತು ಮಾಡಿದ್ದಾರೆ. ಇದು ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ, ಏಕ ಕಾಲಕ್ಕೆ ಕನ್ನಡ ಮತ್ತು ಇಂಗ್ಲಿಷನ್‌ನಲ್ಲಿ ಶೂಟ್ ಆಗಿರುವ ಪ್ಯಾನ್ ವರ್ಲ್ಡ್ (ಕನ್ನಡ) ಸಿನಿಮಾ.
ಕಿಯಾರಾ, ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಸೇರಿ ಐವರು ಖ್ಯಾತ ನಟಿಯರು ಇದರಲ್ಲಿ ನಟಿಸಿದ್ದಾರೆ. ಟ್ರೈಲರ್ ನೋಡಿದ ಮೇಲಂತೂ ಯಾವಾಗ ಸಿನಿಮಾ ಕಣ್ತುಂಬಿಕೊಳ್ಳುತ್ತೇವೋ ಎಂದು ಜನ ಕಾಯುತ್ತಿದ್ದರು. ಸುಮಾರು 4.5 ವರ್ಷಗಳ ನಂತರ ಆಗಸ್ಟ್ 26ರಂದು ದೊಡ್ಡ ಪರದೆ ಮೇಲೆ ಯಶ್ ಅವರು 'ರಾಯ' ನಾಗಿ ಎಲ್ಲರನ್ನು ರಂಜಿಸಲಿದ್ದಾರೆ.
ಮೊದಲ ಎ ಸರ್ಟಿಫಿಕೆಟ್ ಸಿನಿಮಾ
ಟಾಕ್ಸಿಕ್ ಟಿಕೆಟ್ ಬುಕಿಂಗ್ ಓಪನ್ ಮಾಡುತ್ತಿದ್ದಂತೆ ಲೊಕೇಷನ್, 2d, 4dx, imax ಎಂದೆಲ್ಲ ಕೇಳುತ್ತದೆ. ಬುಕ್ ಮಾಡುವಾಗ ನಿಯಮದಂತೆ 'ಎ' ಸರ್ಟಿಫಿಕೇಟ್ ಸಿನಿಮಾಗೆ ತೋರಿಸುವಂತೆ ಇದು 18+ ಅವರಿಗೆ ಮಾತ್ರವೇ, ದಯವಿಟ್ಟು ಐಡಿ ಕಾರ್ಡ್ ಕ್ಯಾರಿ ಮಾಡಿ ಎಂದು ಕಾಣಿಸುತ್ತದೆ. ಇದು ಯಶ್ ಅವರ ಮೊದಲ ಎ ಸರ್ಟಿಫಿಕೆಟ್ ಸಿನಿಮಾ ಆಗಿದೆ. ಸಿನಿಮಾ ಹಾಗೂ ಅದು ಗಳಿಸುವ ಮೊದಲ ದಿನದ ಕಲೆಕ್ಷನ್ ಮೇಲೆ ಅಪಾರ ನಿರೀಕ್ಷೆಗಳು ಮೂಡಿವೆ.


Click it and Unblock the Notifications
