Bigg Boss Kannada: ಬಿಗ್ ಬಾಸ್ ಕನ್ನಡ 12 ನಿರೂಪಕ ಇವರೇ ನೋಡಿ: ಸುಳಿವು ಕೊಟ್ಟ ಕಲರ್ಸ್ ಕನ್ನಡ...

ಬೆಂಗಳೂರು, ಜೂನ್12: ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮ ಮುಗಿದು ಆರು ತಿಂಗಳು ಕಳೆದಿದೆ. ಬಿಗ್‌ ಬಾಸ್‌ 11 ಸೀಸನ್‌ ಬಳಿಕ ಕಿಚ್ಚ ಸುದೀಪ್‌ ಅವರು ವಿದಾಯ ಹೇಳಿದ್ದು, ಅಭಿಮಾನಿಗಳು ತೀವ್ರ ನೋವಿನಲ್ಲಿದ್ದಾರೆ. ಕಿಚ್ಚ ಸುದೀಪ್‌ ಅವರೇ ನಿರೂಪಣೆ ಮಾಡ್ಬೇಕು ಎಂದು ಅಭಿಮಾನಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಇದೀಗ ಬಿಗ್ ಬಾಸ್ ಕನ್ನಡ 12' ಶೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ.ಈ ಬಾರಿ ದೊಡ್ಮನೆಗೆ ಯಾರೆಲ್ಲಾ ಸ್ಪರ್ಥಿಗಳು ಹೋಗುತ್ತಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್‌ ಹೋಸ್ಟ್‌ ಆಗಿ ವಾಪಸ್ ಬರ್ತಾರಾ, ಇಲ್ವಾ ಎಂಬ ಡೌಟ್‌ ವೀಕ್ಷಕರಿಗೆ ಕಾಡುತ್ತಿದೆ.

ಹೌದು, ಬಿಗ್‌ ಬಾಸ್‌ ಕನ್ನಡ ಸೀಸನ್ 11 ರಲ್ಲಿ ವೀಕ್ಷಕರು ಅಂದುಕೊಂಡತೇ ಹನುಮಂತ ಗೆದ್ದು ಬೀಗಿದ್ದಾನೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಕ್ಕೆ ಖುಷಿಯಾಗಿದ್ದಾರೆ. ಎಲ್ಲ ಖುಷಿ ಖುಷಿಯಾಗಿರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಬೇಸರದಲ್ಲಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದು ಇದೇ ಕೊನೆ ಎಂದು ಈಗಾಗಲೇ ಹೇಳಿದ್ದಾರೆ. ಶೋ ಮುಗಿಯುವುದಕ್ಕೂ ಮುನ್ನವೇ ಮತ್ತೊಮ್ಮೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇಷ್ಟೆಲ್ಲ ಹೇಳಿದ ಮೇಲೆ ಮತ್ತೆ ಬಿಗ್ ಬಾಸ್ ನಿರೂಪಣೆ ಮಾಡುವುದ ಅನುಮಾನ ಅನ್ನೋದು ಎಲ್ಲರಿಗೂ ಗೊತ್ತಿದೆ.

Will Sandalwood Actor Kiccha Sudeep Come Back As A Host For Bigg Boss Kannada 12

ಕಲರ್ಸ್ ಕನ್ನಡ ಫಿನಾಲೆಯಲ್ಲಿದ್ದ ಮೊದಲ ಮೂವರು ಸ್ಪರ್ಧಿಗಳನ್ನು ಇಟ್ಟುಕೊಂಡು ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಅದರಲ್ಲಿ ಮುಂದಿನ ಸೀಸನ್‌ಗೆ ಯಾರು ಹೋಸ್ಟ್ ಅನ್ನೋ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಮುಂದಿನ ಸೀಸನ್ ಬಗ್ಗೆ ಕಲರ್ಸ್ ಕನ್ನಡ ಕೊಟ್ಟ ಸುಳಿವು ನೀಡಿತ್ತು. ಇದೀಗ 12 ಸೀಸನ್‌ ನ ಕಿಚ್ಚ ಸುದೀಪ್‌ ಅವರೇ ಹೋಸ್ಟ್ ಮಾಡ್ತಾರಂತೆ ಎಂಬ ಅಂತೆ - ಕಂತೆಗಳು ಹುಟ್ಟಿಕೊಂಡಿವೆ.

ಬಿಗ್‌ ಬಾಸ್‌ ಕನ್ನಡ ಆರಂಭವಾದಗಿನಿಂದ 11 ನೇ ಸೀಸನ್‌ ವರೆಗೂ ಈ ರಿಯಾಲಿಟಿ ಶೋ ನಿರೂಪಣೆಯನ್ನು ಸುದೀಪ್ ಬಿಟ್ಟರೆ ಬೇರೆ ಯಾರನ್ನೂ ನಡೆಸಿಕೊಟ್ಟಿಲ್ಲ. ಇನ್ನೂ ಈ ಜಾಗದಲ್ಲಿ ನಟ ಕಿಚ್ಚ ಸುದೀಪ್‌ ಅವರನ್ನ ಬಿಟ್ಟರೇ ಬೇರೆ ಯಾರನ್ನೂ ಕಿರುತೆರೆ ವೀಕ್ಷಕರು ಕೂಡ ಬೇರೆ ಊಹಿಸಿಕೊಂಡಿಲ್ಲ.ಆದರೆ ಮುಂದಿನ ಸೀಸನ್‌ ನಿರೂಪಣೆ ಮಾಡೋದು ಯಾರು? ಎನ್ನುವ ಪ್ರಶ್ನೆಗಳಿಗೆ ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಈ ಹಿಂದೆ ಉತ್ತರವನ್ನ ಕೊಟ್ಟಿದ್ದರು. ಸುದೀಪ್‌ ಹತ್ತನೇ ಸೀಸನ್ ಮುಗಿಯುತ್ತಿದ್ದಂತೆ ಸಾಕು ಎಂದು ಕೊಂಡಿದ್ದರು. ಹತ್ತು ಸೀಸನ್ ಸಾಕು. ಕೆಲಸ ಒಂದೇ ತರ ಅನಿಸುತ್ತಿದೆ ಎಂದು ಹೇಳಿದ್ದರಂತೆ. ಆದರೆ, ಕಲರ್ಸ್ ಕನ್ನಡ ತಂಡವೇ ಅವರನ್ನು ಒಪ್ಪಿಸಿ ಸೀಸನ್ 11ಕ್ಕೆ ಕರೆದುಕೊಂಡಿದ್ದಾಗಿ ಹೇಳಿದ್ದಾರೆ. ಬಿಗ್ ಬಾಸ್ ಸೀಸನ್ 12ಕ್ಕೆ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ಕಲರ್ಸ್ ಕನ್ನಡದ ನಾನ್ ಫಿಕ್ಷನ್ ಹೆಡ್ ಪ್ರಕಾಶ್ ಹೇಳಿದ್ದಾರೆ.

ಬಿಗ್ ಬಾಸ್‌ ಕನ್ನಡ 12 ಕಾರ್ಯಕ್ರಮದ ಸಿದ್ದತೆಗೆ ಈಗಾಗಲೇ ಚಾಲನೆ ಸಿಕ್ಕಿದ್ದು, ಈ ಬಾರಿಯೂ ಹೋಸ್ಟ್ ಆಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯುತ್ತಾರಂತೆ. ಇದಕ್ಕಾಗಿ ಕಿಚ್ಚ ಸುದೀಪ್‌ ಕೆಲವು ಕಂಡೀಷನ್‌ಗಳನ್ನ ಹಾಕಿದ್ದಾರೆ ಎನ್ನಲಾಗಿದೆ. ಅವೆಲ್ಲದಕ್ಕೂ ಬಿಗ್ ಬಾಸ್ ಆಯೋಜಕರು ಒಪ್ಪಿಕೊಂಡಿದ್ದಾರಂತೆ ಎಂದು ಕಿರುತೆರೆ ಲೋಕದಲ್ಲಿ ಗುಲ್ಲೆಬ್ಬಿದೆ. ಈ ಬಾರಿಯೂ ಕಿಚ್ಚ ಸುದೀಪ್‌ ಅವರೇ ನಿರೂಪಕರಾದರೇ ಅಭಿಮಾನಿಗಳಿಗೆ ಖುಷಿಯ ಸುದ್ದಿಯಾಗಲಿದೆ. ಒಂದು ವೇಳೆ ಕಿಚ್ಚ ಸುದೀಪ್‌ ಅವರು ಹೋಸ್ಟ್‌ ಆಗಿ ಮುಂದುವರೆಯಲಿಲ್ಲ ಎಂದರೇ ಹೊಸ ನಿರೂಪಕರು ಯಾರಾಗ್ತಾರೆ ಎಂಬುದು ಕುತೂಹಲ ಹುಟ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+