Prabhas: ಪ್ರಭಾಸ್ - ಅನುಷ್ಕಾ ಶೆಟ್ಟಿ ಎಂಗೇಜ್‌ಮೆಂಟ್? ವೈರಲ್ ಆಗ್ತಿವೆ ಫೋಟೊಗಳು
ಟಾಲಿವುಡ್‌ನ 'ರೆಬೆಲ್ ಸ್ಟಾರ್' ಪ್ರಭಾಸ್‌ಗೆ ಈಗಾಗಲೇ 45 ವರ್ಷ ವಯಸ್ಸಾಗಿದ್ದು, ಅವರು ಮದುವೆ ಆಗೋದು ಯಾವಾಗ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಪ್ರಭಾಸ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ಈಗಾಗಲೇ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ಅವರು ಅವುಗಳ ಚಿತ್ರೀಕರಣ ಮುಗಿಸಲೇ ಇನ್ನೂ ಎರಡು ಮೂರು ವರ್ಷ ಬೇಕಾಗುತ್ತದೆ. ಇದೆಲ್ಲದರ ನಡುವೆ ಪ್ರಭಾಸ್ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ಎನ್ನುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ.
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುವ ಹಲವು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಬಾಹುಬಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರು ಮದುವೆಯಾದರೆ ಜೋಡಿ ಚನ್ನಾಗಿರುತ್ತದೆ ಎಂದು ಅಭಿಮಾನಿಗಳು ಹಾರೈಸಿದ್ದು ಇದೆ.

ಹಲವು ಬಾರಿ ಇಬ್ಬರ ನಡುವೆ ಪ್ರೀತಿಯಿದೆ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡಿದಾಗ, ಇಬ್ಬರೂ ನಮ್ಮ ನಡುವೆ ಏನೂ ಇಲ್ಲ ಎಂದು ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ. ಹಾಗಾದರೆ ಇದ್ದಕ್ಕಿದ್ದಂತೆ ಅವರಿಬ್ಬರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಫೋಟೋಗಳು ಬಂದದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಎಐ ತಂತ್ರಜ್ಞಾನ ಮಾಡಿದ ಅವಾಂತರ
ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸದ್ಯ ಜಗತ್ತನ್ನು ಆಳುತ್ತಿರುವ ತಂತ್ರಜ್ಞಾನ. ಕ್ರಿಯಾಶೀಲತೆಗೆ ಸಾಕಷ್ಟು ಸಹಕಾರಿಯಾಗಿದ್ದರು ದುರ್ಬಳಕೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಈಗ ವೈರಲ್ ಆಗಿರುವ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಎಂಗೇಜ್‌ಮೆಂಟ್ ಫೋಟೊಗಳು ಕೂಡ ಎಐ ಬಳಸಿಕೊಂಡು ಸೃಷ್ಟಿಸಿದ ಫೋಟೊಗಳಾಗಿದೆ. ನೋಡಲು ಅಸಲಿಯಂತೆ ಕಂಡರೂ ಇವು ನಕಲಿ ಚಿತ್ರಗಳು.
ಅಭಿಮಾನಿಗಳು ಎಐ ತಂತ್ರಜ್ಞಾನ ಬಳಸಿಕೊಂಡು ಇಂತಹ ಹಲವು ಚಿತ್ರಗಳನ್ನು ಸೃಷ್ಟಿಸಿದ್ದಾರೆ. ಇಬ್ಬರಿಗೂ ಮದುವೆಯಾಗಿರುವಂತೆ ಕೂಡ ಫೋಟೊಗಳನ್ನು ಸೃಷ್ಟಿಸಲಾಗಿದೆ. ಇಂತಹ ಹಲವು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ.
ಪ್ರಭಾಸ್ ಯಾವಾಗ ಮದುವೆಯಾಗುತ್ತಾರೆ ಎಂದು ಗೊತ್ತಿಲ್ಲದ ಅಭಿಮಾನಿಗಳು ಈ ಫೋಟೊಗಳನ್ನು ನೋಡಿ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್ ಮದುವೆಯಾಗಲು ಯಾವಾಗ ಮನಸ್ಸು ಮಾಡುತ್ತಾರೆ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿದೆ.
ಮತ್ತೊಂದು ಕಡೆ ಅನುಷ್ಕಾ ಶೆಟ್ಟಿ ಸಾಕಷ್ಟು ಗ್ಯಾಪ್ ನಂತರ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. 2023ರ ಸೆಪ್ಟಂಬರ್ ತಿಂಗಳಿನಲ್ಲಿ ಅವರು ಅಭಿನಯಿಸಿದ ಮಿಸ್ ಅಂಡ್ ಮಿಸ್ಟರ್ ಪೋಲಿಶೆಟ್ಟಿ ಬಿಡುಗಡೆಯಾಗಿತ್ತು. 2024ರಲ್ಲಿ ಯಾವ ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿಲ್ಲ. 2025ರಲ್ಲಿ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಅವರ ಅಭಿನಯದ ಘಾಟಿ ಸಿನಿಮಾ 2025ರ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ. ಚಿತ್ರದ ಟೀಸರ್ ಈಗಾಗಲೇ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದು ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.












Click it and Unblock the Notifications