Yash-Radhika Pandit : ನಮ್ಮ ಪ್ರೀತಿಯ ಪ್ರಪಂಚಕ್ಕೆ 'ಸ್ಟಾರ್' ನೀವು: ಯಶ್ಗೆ ರಾಧಿಕಾ ಪಂಡಿತ್ ಲವ್ಲಿ ವಿಶ್
ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಜೊತೆಗೆ ಖುಷಿಯಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜನವರಿ 8ರಂದು ಯಶ್ ಬರ್ತ್ ಡೇ ಹಿನ್ನೆಲೆ ಅನೇಕೆ ಸೆಲೆಬ್ರಿಟಿ ಹಾಗೂ ಅಭಿಮಾನಿಗಳು ಶುಭಕೋರಿದ್ರು. ನಟಿ ರಾಧಿಕಾ ಪಂಡಿತ್ ಕೂಡ ಯಶ್ ಜೊತೆ ಫೋಟೋ ಶೇರ್ ಮಾಡಿ ಲವ್ಲಿ ವಿಶ್ ಮಾಡಿದ್ದಾರೆ.
ಪಕ್ಕಾ ಫ್ಯಾಮಿಲಿ ಮ್ಯಾನ್ ಯಶ್ ಅವರು ಕುಟುಂಬಸ್ಥರ ಜೊತೆ ವಿಶೇಷ ದಿನಗಳನ್ನ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಕಡಲ ಕಿನಾರೆಯಲ್ಲಿ ಕೇಕ್ ಕತ್ತರಿಸಿದ ಯಶ್ಗೆ ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ, ಯಥರ್ವ್ ಲವ್ಲಿ ವಿಶ್ ಮಾಡಿದ್ದಾರೆ. ಮಕ್ಕಳ ಜೊತೆ ಯಶ್ ರಾಧಿಕಾ ಪಂಡಿತ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ರಾಧಿಕಾ ಪಂಡಿತ್ ಪತಿಯ ಜೊತೆಗಿನ ಸ್ಪೆಷಲ್ ಫೋಟೋಗಳನ್ನು ಹಂಚಿಕೊಂಡು ನನ್ನ ಪ್ರೀತಿಯ ಪ್ರಪಂಚಕ್ಕೆ ಸ್ಟಾರ್ ನೀವು ಎಂದು ಲವ್ಲಿ ವಿಶ್ ಮಾಡಿದ್ದಾರೆ.

ಇನ್ಸ್ಟಾದಲ್ಲಿ ನಟ ಯಶ್ ಜೊತೆಗಿನ ಬ್ಯೂಟಿಫುಲ್ ಫೋಟೋಸ್ ಶೇರ್ ಮಾಡಿದ ನಟಿ ರಾಧಿಕಾ ಪಂಡಿತ್, ಪತ್ನಿಗೆ ಲವ್ಲಿ ವಿಶ್ ಮಾಡಿದ್ದಾರೆ. ಬೆಸ್ಟ್ ಪತಿ ಹಾಗೂ ಅಪ್ಪ, ನೀವು ನಮ್ಮ ಮಕ್ಕಳಿಗೆ ಸದಾ ರಾಕ್, ನನ್ನ ಹೃದಯವನ್ನ ಆಳುವ 'ಕಿಂಗ್' ಮತ್ತು ನಮ್ಮ ಜಗತ್ತನ್ನು ಯಾವಾಗಲೂ ಬೆಳಗಿಸುವ 'ಸ್ಟಾರ್'. ನಾವು ನಿಮ್ಮನ್ನು ಸದಾ ಪ್ರೀತಿಸುತ್ತೇವೆ. ಜನ್ಮದಿನದ ಶುಭಾಶಯಗಳು ಎಂದು ನಟಿ ರಾಧಿಕಾ ಪಂಡಿತ್ ಬರೆದಿದ್ದಾರೆ.
ಇನ್ನೂ ಸ್ಯಾಂಡಲ್ವುಡ್ನಲ್ಲಿ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಪವರ್ ಫುಲ್ ಜೋಡಿಯಾಗಿದ್ದಾರೆ. ಇನ್ನೂ ಈ ಜೋಡಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಹಾಗೂ ಯಶ್ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗಿದೆ. ಕ್ಯೂಟ್ ಕಪಲ್ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.
38 ವರ್ಷದ ನ್ಯಾಷನಲ್ ಸ್ಟಾರ್ ಯಶ್ ಟಾಕ್ಸಿಕ್ ಟೀಸರ್ನಲ್ಲಿ ಮತ್ತಷ್ಟು ಯಂಗ್ ಆಗಿದ್ದಾರೆ. ಯಶ್ ಬರ್ತ್ಡೇಗೆ ಬಂದ ಈ ಟೀಸರ್ನಲ್ಲಿ ರಾಕಿಯ ಎಂಟ್ರಿ ರಗಡ್ ಆಗಿದೆ. ಬಾಯಲ್ಲಿ ಸಿಗರೇಟ್ ಹಚ್ಚಿ ಬರೋ ಯಶ್ ಮಾದಕ ಜಗತ್ತಿನ ಡಾನ್ ರೀತಿ ಕಾಣಿಸಿದ್ದಾರೆ. ಇನ್ನೂ ಈ ಟೀಸರ್ ನಿಂದಾಗಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇನ್ನೂ ಸ್ಯಾಂಡಲ್ ವುಡ್ನ ಸೂಪರ್ ಜೋಡಿ ಅಂದ್ರೆ ಅದು, ಯಶ್ ಹಾಗೂ ರಾಧಿಕಾ ಪಂಡಿತ್. ಇವರಿಬ್ಬರೂ ಪ್ರೀತಿಸಿ ಮದುವೆಯಾದ್ರು. ಚಂದನವನದ ಚೆಲುವೆ ರಾಧಿಕಾ ಪಂಡಿತ್ ಮನಸ್ಸು ಗೆಲ್ಲೋದ್ದಕ್ಕೆ ರಾಕಿಭಾಯ್ ತುಂಬಾನೇ ಕಷ್ಟ ಪಟ್ಟಿದ್ದಾರಂತೆ. ಹಲವು ವರ್ಷಗಳು ಇಬ್ರು ಸ್ನೇಹಿತರಾಗಿಯೇ ಇದ್ರು. ಈ ಸಂದರ್ಭದಲ್ಲಿ ಇಬ್ಬರೂ ಸಹ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡ್ರು ಎಂದು ಒಂದು ಸಂದರ್ಶನದಲ್ಲಿ ನಟ ಯಶ್ ಹೇಳಿಕೊಂಡಿದ್ದರು.
ಡಿಸೆಂಬರ್ 9 , 2016 ರಲ್ಲಿ ರಾಧಿಕಾ ಇಷ್ಟದಂತೆ ಬೆಂಗಳೂರಿನಲ್ಲಿ ಇಬ್ಬರ ಮದುವೆ ನಡೆಯಿತು. 2018 ಡಿಸೆಂಬರ್ 2 ರಂದು ರಾಧಿಕಾ ಪಂಡಿತ್ ಮುದ್ದು ಮಗಳು ಐರಾಗೆ ಜನ್ಮ ನೀಡಿದ್ರು. ಒಂದು ವರ್ಷದ ನಂತರ ಅಂದ್ರೆ 2019ರಲ್ಲಿ ಮಗ ಯಥರ್ವ್ ಕೂಡ ಜನಿಸಿದ್ರು. ಇದೀಗ ಸೂಪರ್ ಹಿಟ್ ಸಿನಿಮಾಗಳನ್ನ ನೀಡುತ್ತಿರುವ ಯಶ್ ತಮ್ಮ ಕುಟುಂಬದ ಜೊತೆ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ.












Click it and Unblock the Notifications