Sonal Monteiro: ಮದುವೆಯಾದ ಮೇಲೆ ಸೋನಾಲ್‌ ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ ಯಾಕೆ?

ಕನ್ನಡ ಚಿತ್ರರಂಗದಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಜೋಡಿ ಎಂದರೆ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್ ಮೊಂಥೆರೋ. ಸ್ಯಾಂಡಲ್​ವುಡ್​ ಸ್ಟಾರ್​ ನಿರ್ದೇಶಕ ತರುಣ್‌ ಸುಧೀರ್‌ ಜೊತೆ ನಟಿ ಸೋನಲ್ ಮೊಂಥೆರೋ ಇತ್ತೀಚಿಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಬಳಿಕ ತಮ್ಮ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಸೋನಲ್, ಸದ್ಯ ಯಾವುದೇ ಹೊಸ ಚಿತ್ರ ಒಪ್ಪಿಕೊಂಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಮದುವೆಯಾದ ಬಳಿಕ ಯಾಕೆ ಹೊಸ ಸಿನಿಮಾವನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವುದರ ಬಗ್ಗೆ ಸ್ವತಃ ನಟಿ ಸೋನಲ್ ಮೊಂಥೆರೋ ಮಾತನಾಡಿದ್ದಾರೆ. 'ಮದುವೆಯಾದ ಮೇಲೆ ಹೊಸ ಸಿನಿಮಾ ಅವಕಾಶಗಳು ತುಂಬಾ ಬಂದಿದೆ. ಆದರೆ ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಯಾಕೆಂದರೆ ಈ ಹಿಂದೆ ಒಪ್ಪಿಕೊಂಡ ಕೆಲಸಗಳೇ ತುಂಬಾ ಇದೆ. ಅದೆಲ್ಲಾ ಒಂದು ಸರಿ ಮುಗಿದ ಮೇಲೆ ಹೊಸ ಸಿನಿಮಾಗಳಿಗೆ ಕೈ ಹಾಕುತ್ತೇನೆ' ಎಂದು ಹೇಳಿದ್ದಾರೆ.

Why Has Actress Sonal Monteiro Not Accepted Any Film After Marriage

ಪತಿ ತರುಣ್‌ ಸುಧೀರ್‌ ಅವರ ಸಿನಿಮಾದಲ್ಲಿ ನಟಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸೋನಾಲ್‌, ತರುಣ್‌ ಅವರು ಮೊದಲೇ ಹೇಳಿದ್ದಾರೆ. ನಾನು ಮಾಡುವ ಸಿನಿಮಾದಲ್ಲಿ ಸೋನಾಲ್‌ ಈ ಪಾತ್ರಕ್ಕೆ ಸೂಕ್ತ ಎನಿಸಿದರೆ ಮಾತ್ರ ನಾನು ತೆಗೆದುಕೊಳ್ಳುತ್ತೇನೆ. ನನ್ನ ಹೆಂಡತಿ ಎನ್ನುವ ಕಾರಣಕ್ಕೆ ಪಾತ್ರ ಕೊಡುವುದಿಲ್ಲ. ಸಿನಿಮಾ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ. ಅವರ ಸಿನಿಮಾಗಳನ್ನು ಅವರು ಮಾಡುತ್ತಾರೆ. ನನ್ನ ಕೆಲಸಗಳು ಕೂಡ ನಡೆಯುತ್ತಿದೆ ಎಂದರು.

ಅವರ ಮುಂದಿನ ಸಿನಿಮಾದಲ್ಲಿ ನಾನು ಇರುತೇನಾ? ಇಲ್ಲವಾ ನನಗೂ ಗೊತ್ತಿಲ್ಲ. ಅದನ್ನು ಅವರ ಹತ್ತಿರವೇ ಕೇಳಬೇಕು. ಅವರು ಬರೆದಿರುವ ಕಥೆಯಲ್ಲಿ ನನಗೊಂದು ಪಾತ್ರ ಇದೆಯಾ ಅಂತಾ ಅವರೇ ಹೇಳಬೇಕು ಎಂದು ನಟಿ ಸೋನಾಲ್‌ ಹೇಳಿದ್ದಾರೆ.

Why Has Actress Sonal Monteiro Not Accepted Any Film After Marriage

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಜಾಮೀನು ಸಿಕ್ಕ ಬಗ್ಗೆ ಮಾತನಾಡಿದ ಅವರು, ಅವರಿಗೆ ಜಾಮೀನು ಸಿಕ್ಕಿರುವುದು ತುಂಬಾ ಖುಷಿ ಆಯ್ತು. ಜೊತೆಗೆ ಅವರ ಆರೋಗ್ಯದ ಬಗ್ಗೆ ಕೂಡ ಅಷ್ಟೇ ಆತಂಕ ಇತ್ತು. ಅವರಿಗೆ ಬೆನ್ನುನೋವು ಮೊದಲಿನಿಂದಾಲೂ ಇತ್ತು. ಅಲ್ಲಿಗೆ ಹೋದ ಮೇಲೆ ಮತ್ತೆ ಜಾಸ್ತಿ ಆಗಿದೆ. ಹೀಗಾಗಿ ಅದರ ಬಗ್ಗೆ ಕೂಡ ನಮಗೆ ಆತಂಕ ಇತ್ತು ಎಂದರು.

ಮಾತು ಮುಂದುವರಿಸಿದ ಸೋನಾಲ್‌, ಖಂಡಿತಾ ದರ್ಶನ್‌ ಅವರನ್ನು ಭೇಟಿ ಮಾಡಬೇಕು ಆದರೆ ಈಗಲ್ಲ. ಅವರಿಗೆ ಅವರ ಕುಟುಂಬದ ಜೊತೆ ಸಮಯ ಕಳೆಯಲು ನಾವು ಕೂಡ ಸಮಯ ಕೊಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಹುಷಾರಾಗಬೇಕು. ಬೆನ್ನು ನೋವು, ಸರ್ಜರಿಯಿಂದ ಆಚೆ ಬರಲಿ ಅವರು. ಅದಾದ ಮೇಲೆ ಖಂಡಿತಾ ಹೋಗಿ ಭೇಟಿಯಾಗುತ್ತೇವೆ. ಯಾಕೆಂದರೆ ನಮ್ಮ ಮದುವೆಗೆ ಅವರಿರಲ್ಲ ಎನ್ನುವ ಬೇಜಾರಿದೆ. ಆದರೆ ಅವರು ಮೊದಲು ಹುಷಾರಾಗಲಿ, ಆಮೇಲೆ ಹೋಗಿ ಭೇಟಿಯಾಗುತ್ತೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+