Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಸಂಜನಾ ಬುರ್ಲಿ ಹೊರಬಂದಿದ್ದೇಕೆ?

ಕಿರುತೆರೆಯ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಪ್ರೇಕ್ಷಕರಿಗೆ ಧಾರಾವಾಹಿ ತಂಡ ಏಕಾಏಕಿ ಶಾಕ್‌ ಕೊಟ್ಟಿದೆ. ಧಾರಾವಾಹಿಯ ಪ್ರಮುಖ ಪಾತ್ರವನ್ನೇ ಅಂತ್ಯಗೊಳಿಸಲಾಗಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ಪಾತ್ರ ಸ್ನೇಹ ಪಾತ್ರವನ್ನು ಸದ್ಯ ಅಂತ್ಯಗೊಳಿಸಲಾಗಿದ್ದು, ಸ್ನೇಹ ಎನ್ನುವ ಹೆಸರಿನ ಹೊಸ ಪಾತ್ರವನ್ನೇ ಪರಿಚಯಿಸಲಾಗಿದೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಎರಡನೇ ಮಗಳು ಸ್ನೇಹ ಪಾತ್ರದಲ್ಲಿ ಅಭಿನಯಿಸುತ್ತಿರುವ ಸಂಜನಾ ಬುರ್ಲಿ ಇದೀಗ ಕಾರಣಾಂತರಗಳಿಂದ ಧಾರಾವಾಹಿ ಪಾತ್ರದಿಂದ ಹೊರಬಂದಿದ್ದಾರೆ. ಸರಿಸುಮಾರು ಮೂರು ವರ್ಷಗಳ ಕಾಲ ಸ್ನೇಹ ಪಾತ್ರಧಾರಿಯಾಗಿ ಅಭಿನಯಿಸಿದ್ದ ಸಂಜನಾ ಬುರ್ಲಿ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

Why Did Sanjana Burli Walk Out From Puttakkana Makkalu Serial

ಇದೀಗ ಮೂರು ವರ್ಷದ ಬಳಿಕ ಸಂಜನಾ ಧಾರಾವಾಹಿಯಿಂದ, ಸ್ನೇಹಾ ಪಾತ್ರದಿಂದ ಹೊರಬಂದಿದ್ದಾರೆ. ಈ ವಿಚಾರವನ್ನು ಸ್ವತಃ ಸಂಜನಾ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಪ್ರತಿಯೊಂದು ದೊಡ್ಡ ವಿಷಯವೂ ಕೊನೆಗೊಳ್ಳುತ್ತದೆ. ಈ ಮಹತ್ವದ ಪಾತ್ರದೊಂದಿಗೆ ನನ್ನ ಸ್ನೇಹ ಪಾತ್ರದ ಪ್ರಯಾಣವೂ ಕೊನೆಗೊಳ್ಳುತ್ತದೆ ಎಂದು ತಿಳಿಸಿದ್ದರು.

'ಕಳೆದ ಮೂರು ವರ್ಷಗಳಿಂದ ನಾನು ಸ್ನೇಹಾ ಪಾತ್ರಕ್ಕೆ ಜೀವ ತುಂಬಿದ್ದೇನೆ. ಅದು ನನ್ನ ನಟನಾ ವೃತ್ತಿ ಜೀವನದ ಅವಿಭಾಜ್ಯ ಅಂಗವಾಗಿತ್ತು.

ಆದರೆ ಇದೀಗ ವಿದಾಯ ಹೇಳುವ ಸಮಯ ಬಂದಿದೆ‌. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಆಗಿ ನಟಿಸುವ ಸುವರ್ಣಾವಕಾಶ ದೊರೆತಿರುವುದಕ್ಕೆ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ನನಗೆ ಈ ಉತ್ತಮ ಪಾತ್ರವನ್ನು ನೀಡಿದ್ದಕ್ಕಾಗಿ ಮತ್ತು ಸ್ನೇಹಾ ಆಗಿ ನನ್ನನ್ನು ಆಯ್ಕೆ ಮಾಡಿದ ಜೀ ಕನ್ನಡ ಚಾನೆಲ್ ಮತ್ತು ಪ್ರೊಡಕ್ಷನ್ ಹೌಸ್‌ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು' ಎಂದು ಸಂಜನಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Why Did Sanjana Burli Walk Out From Puttakkana Makkalu Serial

ರಂಗಭೂಮಿಯ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡ ಉತ್ತರ ಕರ್ನಾಟಕದ ಬೆಡಗಿ ಸಂಜನಾ ಬುರ್ಲಿ ನವೀನ್ ಕೃಷ್ಣ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪತ್ತೇಧಾರಿ ಪ್ರತಿಭಾ ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಾಯಕಿ ಮಯೂರಿ ಆಗಿ ನಟಿಸಿದ ಬಳಿಕ ಸ್ನೇಹ ಪಾತ್ರದಲ್ಲಿ ಕಾಣಿಸಿಕೊಂಡು ಕಿರುತೆರೆಯಲ್ಲಿ ದೊಡ್ಡಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದರು.

ಸದ್ಯ ಬೆಳ್ಳಿ ತೆರೆಯತ್ತ ಮುಖ ಮಾಡಿರುವ ಸಂಜನಾ ಬುರ್ಲಿ ಸ್ನೇಹರ್ಷಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಲಿದ್ದಾರೆ. ಜೊತೆಗೆ ವೀಕೆಂಡ್ ಹಾಗೂ ರಾಧಾ ಮಿಸ್ಸಿಂಗ್ ರಮಣ ಸರ್ಚಿಂಗ್ ಸಿನಿಮಾಗಳಲ್ಲಿಯೂ ಸಂಜನಾ ನಟಿಸುತ್ತಿದ್ದಾರೆ. ಕಿರುತೆರೆಯಿಂದ ಸಂಜನಾ ಬೆಳ್ಳಿತೆರೆಯಲ್ಲಿ ಮಿಂಚಲು ಸಂಪೂರ್ಣ ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+