Deepika Padukone: ಬ್ರೇಕ್‌ಅಪ್‌: ರಣಬೀರ್ ಕಪೂರ್‌ಗೆ ಥ್ಯಾಂಕ್ಸ್ ಹೇಳಿದ್ಯಾಕೆ ದೀಪಿಕಾ ಪಡುಕೋಣೆ!

Deepika Padukone: ಕನ್ನಡತಿ ಹಾಗೂ ಬಾಲಿವುಡ್‌ನ ಪ್ರಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಡೇಟಿಂಗ್ ಬಗ್ಗೆ ಮತ್ತೊಮ್ಮೆ ಸೋಷಿಯಲ್‌ ಮೀಡಿಯಾ ಸದ್ದು ಮಾಡುತ್ತಿದೆ. ಇವರಿಬ್ಬರು ಡೇಟ್‌ ಮಾಡುತ್ತಿದ್ದಾರೆ, ಇನ್ನೇನು ಮದುವೆ ಆಗಲಿದ್ದಾರೆ ಎನ್ನುವಷ್ಟರ ಮಟ್ಟಿಗೆ ಇವರ ನಡುವಿನ ಪ್ರೇಮ ಸಂಬಂಧ ಮುಂದುವರಿದಿತ್ತು. ಕಾಫಿ ವಿತ್ ಕರಣ್ ಶೋನಲ್ಲಿ ದೀಪಿಕಾ ಹಲವು ಸಿಕ್ರೇಟ್‌ಗಳನ್ನು ರಿವೀಲ್ ಮಾಡಿದ್ದರು. ರಣಬೀರ್ ಕಪೂರ್ ಕಾಂಡೋಮ್ಗೆ ಜಾಹೀರಾತು ಕೊಡಬಹುದು ಅಂತಲೂ ಅವರು ಹೇಳೀದ್ದರು. ಅಲ್ಲದೇ ಸೋನಂ ಕಪೂರ್ ಸಹ ಆ ಶೋನಲ್ಲಿ ರಣಬೀರ್ ಕಪೂರ್ ಒಳ್ಳೆಯ ಬಾಯ್ಫ್ರೆಂಡ್ ಅಲ್ಲ ಅಂತ ಹೇಳಿದ್ದರು. ರಣಬೀರ್ ಕಪೂರ್ ಜೊತೆಗೆ ಪ್ರಿಯಾಂಕಾ ಚೋಪ್ರಾ ಅವರ ಹೆಸರು ಸಹ ಕೇಳಿ ಬಂದಿತ್ತು.

ಸೆಲೆಬ್ರಿಟಿಗಳ ವಿಚಾರವು ಯಾವಾಗಲೂ ಸುದ್ದಿಯಾಗುತ್ತಲ್ಲೇ ಇರುತ್ತದೆ. ಇದೀಗ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಅವರ ಹಳೇ ವಿಷಯ ಇದೀಗ ಮತ್ತೆ ಚರ್ಚೆಯಾಗುತ್ತಿದೆ. ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಸಂಬಂಧದ ಬಗ್ಗೆ ಹೊಸ ವಿಷಯವೊಂದು ಬಂದಿದೆ. ಇವರಿಬ್ಬರು ಡೇಟ್‌ ಮಾಡುತ್ತಿದ್ದ ವಿಷಯ ಎಲ್ಲರಿಗೂ ಗೊತ್ತಿತ್ತಾದರೂ, ಯಾಕೆ ಬ್ರೇಕ್‌ಅಪ್‌ ಮಾಡಿಕೊಂಡರು ಎನ್ನುವ ಅನುಮಾನಗಳಿಗೆ ಉತ್ತರ ಸಿಕ್ಕಿರಲಿಲ್ಲ. ರಣಬೀರ್ ಅವರು ಚೀಟ್ ಮಾಡಿದ್ದೇ ಇದಕ್ಕೆಲ್ಲ ಕಾರಣ ಅವರು, ಮೋಸ ಮಾಡಿದ್ದ ವಿಚಾರ ದೀಪಿಕಾಗೆ ಗೊತ್ತಾಗಿತ್ತು ಅಂತ ಹೇಳಿದ್ದರು. ರಣಬೀರ್‌ ರೆಡ್‌ ಹ್ಯಾಂಡ್‌ ಸಿಕ್ಕಿದ್ದರು ಅಂತಲೂ ದೀಪಿಕಾ ಹೇಳಿದ್ದು ಇದೀಗ ಮತ್ತೆ ಚರ್ಚೆ ಆಗ್ತಿದೆ.

Why Did Deepika Padukone Thank Ranbir Kapoor

ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಇಬ್ಬರೂ ಪ್ರತ್ಯೇಕವಾಗಿ ಮದುವೆಯಾಗಿದ್ದರೆ. ಇಬ್ಬರಿಗೂ ಮಗುವಾಗಿದೆ. ದೀಪಿಕಾ ಪಡುಕೋಣೆ ಅವರು ರಣವೀರ್ ಸಿಂಗ್‌ ಅವರೊಂದಿಗೆ ವಿವಾಹವಾಗಿದ್ದರೆ, ಆಲಿಯಾ ಭಟ್‌ ಅವರು ರಣಬೀರ್ ಕಪೂರ್ ಅವರೊಂದಿಗೆ ಮದುವೆಯಾಗಿದ್ದರೆ. ಮದುವೆ ಆಗಿ ಮಕ್ಕಳು ಆಗಿರುವಾಗ ಇವರಿಬ್ಬರ ಹಳೆಯ ಬ್ರೇಕ್‌ಅಪ್‌ ನ್ಯೂಸ್‌ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

ದೀಪಿಕಾ ಅವರು ರಣಬೀರ್ ಅವರನ್ನು ಸಿಕ್ಕಾಪಟ್ಟೆ ಲವ್‌ ಮಾಡುತ್ತಿದ್ದರು. ಟ್ಯಾಟೂ ಸಹ ಹಾಕಿಸಿಕೊಂಡಿದ್ದರು. ನಾವು ಮೂರ್ಖರಾಗುವ ಸಂಬಂಧದಲ್ಲಿ ಯಾಕೆ ಇರಬೇಕು, ಇದಕ್ಕಿಂತಲೂ ಸಿಂಗಲ್‌ ಆಗಿರುವುದೇ ಬೆಸ್ಟ್‌. ಈ ತರ ಯೋಚನೆ ಮಾಡದೆ ಇದ್ದರೆ ಒಳ್ಳೆಯದು ಅಂತ ಅವರು ಹೇಳಿದ್ದರು. ನಾನು ರಣಬೀರ್‌ಗೆ ಎರಡನೇ ಸಲ ಚಾನ್ಸ್‌ ಕೊಡುವಷ್ಟು ಮೂರ್ಖನಾಗಿದ್ದೆ. ಆ ನೋವಿನಿಂದ ಹೊರಗೆ ಬರುವುದಕ್ಕೆ ನನಗೆ ತುಂಬಾ ಕಷ್ಟವಾಯ್ತು ಅಂತ ಹೇಳಿಕೊಂಡಿರುವ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.

ಒಬ್ಬ ವ್ಯಕ್ತಿಯ ವಿಚಾರವಾಗಿ ನಾವು ಅಷ್ಟೊಂದು ಅಚ್ಚಿಕೊಳ್ಳಬಾರದು ಎನ್ನುವ ವಿಷಯವನ್ನು ತಿಳಿದುಕೊಂಡೆ. ಬ್ರೇಕ್ ಅಪ್ ಆದ ಮೇಲೆ ಅದರಿಂದ ಹೊರಗೆ ಬರುವುದಕ್ಕೆ ತುಂಬಾ ಸಮಯ ತೆಗೆದುಕೊಂಡೆ. ಬ್ರೇಕ್ ಅಪ್ ಸಮಯದಲ್ಲಿ ನಾನು ಸಾಕಷ್ಟು ನೊಂದಿದ್ದೆ. ಈ ಘಟನೆಯಿಂದ ನಾನು ಉತ್ತಮ ವ್ಯಕ್ತಿಯಾಗಿ ಬದಲಾಗಿದ್ದೇನೆ. ಇದಕ್ಕಾಗಿ ನಾನು ಥ್ಯಾಂಕ್ಸ್‌ ಹೇಳ್ತೀನಿ ಅಂತಲೂ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+