Bigg Boss: ಈ ವಾರ ಡಬಲ್ ಎಲಿಮಿನೇಷನ್‌ನಿಂದ ಪಾರಾಗೋದು ಇವರೇ..

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಫಿನಾಲೆಗೆ ಇನ್ನೊಂದೇ ಮೆಟ್ಟಿಲು ಬಾಕಿ ಇದೆ. ಐದು ಜನರ ಮೇಲೆ ಎಲಿಮಿನೇಷನ್ ತೂಗು ಗತ್ತಿ ನೇತಾಡುತ್ತಿದೆ. ಈ ವಾರ ಮನೆಯಲ್ಲಿರುವ ಒಟ್ಟು ಎಂಟು ಜನರ ಪೈಕಿ ಇಬ್ಬರು ಮನೆಗೆ ಹೋಗುವುದು ಗ್ಯಾರಂಟಿ. ಹಾಗಾದರೆ ಬಿಗ್‌ಬಾಸ್‌ ಮನೆಯಲ್ಲಿ ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ. ಯಾರು ಈ ವಾರ ಮನೆಯಲ್ಲಿ ಉಳಿದುಕೊಳ್ಳುತ್ತಾರೆ? ಯಾರು ಮನೆಯಿಂದ ಹೊರ ಹೋಗುತ್ತಾರೆ? ಎಲ್ಲದರ ಬಗ್ಗೆ ಕಂಪ್ಲೀಟ್ ಆಗಿ ತಿಳಿಯೋಣ.

ಬಿಗ್‌ಬಾಸ್‌ ಸೀಸನ್ 11ರ ಕೊನೆಯ ವಾರ ಆರಂಭವಾಗಲಿದೆ. ಇಂದು ಕಿಚ್ಚನ ಪಂಚಾಯಿತಿ ಶುರುವಾಗಲಿದೆ. ಈ ವಾರ ಕಿಚ್ಚ ಸುದೀಪ್ ಇಬ್ಬರು ಸ್ಪರ್ಧಿಯನ್ನು ಮನೆಯಿಂದ ಕಳುಹಿಸಲಿದ್ದಾರೆ. ಹಾಗಾದರೆ ಆ ಇಬ್ಬರು ಸ್ಪರ್ಧಿಗಳು ಯಾರು? ಯಾರು ಬಿಗ್‌ಬಾಸ್‌ ಮನೆಯಿಂದ ಹೊರಬರಲಿದ್ದಾರೆ? ಯಾರು ಎಲಿಮಿನೇಷನ್‌ನಿಂದ ಪಾರಾಗಲಿದ್ದಾರೆ?

ಅಂದಹಾಗೆ ಈ ವಾರ ಮಿಡ್‌ ವೀಕ್ ಎಲಿಮಿನೇಷನ್ ನಡೆಯಬೇಕಿತ್ತು. ಆದರೆ ಈ ವಾರ ಯಾರೂ ಕೂಡ ಬಿಗ್‌ಬಾಸ್‌ ಮನೆಯಿಂದ ಹೊರಬಂದಿಲ್ಲ. ಹೀಗಾಗಿ ಮನೆಯಲ್ಲಿ ಎಂಟು ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್‌ಬಾಸ್‌ ಪೂರ್ಣಗೊಳ್ಳಲು ಒಂದು ವಾರ ಮಾತ್ರ ಬಾಕಿ ಇದೆ. ಆದರೂ ಕೂಡ ಬಿಗ್‌ಬಾಸ್‌ ಮನೆಯಲ್ಲಿ ಪ್ರಸ್ತುತ ಎಂಟು ಜನ ಉಳಿದುಕೊಂಡಿದ್ದಾರೆ. ಈ ಹಿಂದಿನ ಸಂಚಿಕೆಗಳಿಗೆ ಹೋಲಿಸಿದರೆ ಇಷ್ಟೊತ್ತಿಗಾಗಲೇ ಮನೆಯಲ್ಲಿ ಕೇವಲ ಐದು ಜನ ಅಥವಾ ಆರರಿಂದ ಏಳು ಜನ ಮಾತ್ರ ಉಳಿದುಕೊಂಡಿರುತ್ತಿದ್ದರು. ಆದರೆ ಈ ವಾರ ಮಿಡ್‌ ವೀಕ್ ನಾಮಿನೇಷನ್ ಕ್ಯಾನ್ಸಲ್ ಆಗಿದೆ. ಹಾಗಾದರೆ ಈ ಮಿಡ್‌ ಮೀಕ್ ನಾಮಿನೇಷನ್ ಕ್ಯಾನ್ಸಲ್ ಆಗಲು ಕಾರಣ ಏನು?

ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಆಟಗಳನ್ನೇ ಹೆಚ್ಚಾಗಿ ಆಡಿಸಲಾಗಿದೆ. ವಿಶೇಷವಾಗಿ ನಾಮಿನೇಷನ್‌ನಿಂದ ಪಾರಾಗಲು ಆಟಗಳನ್ನು ಆಡಿಸಲಾಗಿದೆ. ಆದರೆ ಈ ಟಾಸ್ಕ್‌ನಲ್ಲಿ ಆಡಿದ ಧನ್‌ರಾಜ್ ಮೋಸದ ಆಟ ಆಡಿ ಗೆದ್ದಿದ್ದಾರೆ. ಇದಕ್ಕೆ ಮನೆಯ ಮಂದಿ ಎಲ್ಲಾ ಕೆಂಡಾಮಂಡಲರಾಗಿದ್ದಾರೆ. ಮನೆಯಿಂದ ಹೊರ ಬರಬೇಕಾಗಿದ್ದ ಸ್ಪರ್ಧಿಗಳು ಇನ್ನೇನು ಬಾಗಿಲು ದಾಟುವ ಆತಂಕದಲ್ಲಿ ಇರುವಾಗ ಧನ್‌ರಾಜ್ ಮೋಸದ ದೃಶ್ಯವನ್ನು ಬಿಗ್‌ಬಾಸ್‌ ಮನೆ ಮಂದಿಗೆಲ್ಲಾ ತೋರಿಸಿದ್ದಾರೆ. ಇದರಿಂದಾಗಿ ಮಿಡ್‌ ವೀಕ್ ಎಲಿಮಿನೇಷನ್ ಕೂಡ ಕ್ಯಾನ್ಸಲ್ ಆಗಿದೆ. ಹಾಗಾದರೆ ಈ ವಾರ ಮನೆಗೆ ಹೋಗುವವರು ಯಾರು? ಉಳಿದುಕೊಳ್ಳುವವರು ಯಾರು?

who will survive bigg boss kannada season 11 last double elimination this week

ಧನ್‌ರಾಜ್‌ ಔಟ್?

ಈವರೆಗೂ ಧನ್‌ರಾಜ್ ಅವರು ಟಾಪ್‌ 5 ಸ್ಪರ್ಧಿಗಳಲ್ಲಿ ಒಬ್ಬರಾಗಿರುತ್ತಾರೆ ಎಂದು ಅಂದುಕೊಳ್ಳಲಾಗಿತ್ತು. ಆದರೆ ಅವರು ಮಾಡಿದ ದೊಡ್ಡ ತಪ್ಪಿನಿಂದಾಗಿ ಈಗ ಅವರು ಬಿಗ್‌ಬಾಸ್‌ ಮನೆಯಿಂದ ಹೊರ ಬರುವ ಎಲ್ಲಾ ಸಾಧ್ಯತೆಗಳು ಇವೆ. ಹೀಗಾಗಿ ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿಯಲ್ಲಿ ಧನ್‌ರಾಜ್ ಇರುವುದು ಖಚಿತ ಎನ್ನಲಾಗುತ್ತದೆ. ಯಾಕೆಂದರೆ ಧನ್‌ರಾಜ್‌ ಈ ತಪ್ಪನ್ನು ಬಿಗ್‌ಬಾಸ್‌ ಮನೆಗೆ ಬಂದ ಆರಂಭದಲ್ಲಿ ಮಾಡಿದ್ದರೆ ಕ್ಷಮಿಸಬಹುದಾಗಿತ್ತು. ಆದರೆ ಧನ್‌ರಾಜ್‌ ಬೇರೆಯವರಿಗೆ ಆಡುವ ಅವಕಾಶವನ್ನು ಕಿತ್ತುಕೊಂಡು ತಾವು ಕೂಡ ನಿಯತ್ತಾಗಿ ಆಡದೆ ಗೆದ್ದು ತಪ್ಪನ್ನು ಮುಚ್ಚಿಟ್ಟಿದ್ದಾರೆ. ಈ ಘಟನೆ ನಡೆದಿದ್ದು ಬಿಗ್‌ಬಾಸ್‌ ಫಿನಾಲೆ ಟಾಸ್ಕ್ ಆಡುವಾಗ. ಹೀಗಾಗಿ ಬಿಗ್‌ಬಾಸ್‌ ಈ ಮೋಸವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.

ಮೋಕ್ಷಿತಾ ಡೇಂಜರ್‌ ಝೋನ್

ಇನ್ನೂ ಮೋಕ್ಷಿತಾ ಹಾಗೂ ಭವ್ಯಾ ಕೂಡ ಇದೇ ವಾರ ಮೋಸದ ಆಟ ಆಡಿದರು. ಟಾಸ್ಕ್‌ನಲ್ಲಿ ರಜತ್ ಅವರನ್ನು ಟಾರ್ಗೇಟ್ ಮಾಡಲು ಇವರಿಬ್ಬರೂ ಕೂಡ ಡೀಲ್ ಮಾಡಿಕೊಂಡಿದ್ದು ಕಂಡು ಬಂದಿದೆ. ಮೋಕ್ಷಿತಾ ಕಳೆದ ಕೆಲ ವಾರಗಳಿಂದ ಚೆನ್ನಾಗಿ ಆಟ ಆಡಿಕೊಂಡು ಬಂದಿದ್ದರು. ಆದರೀಗ ಮತ್ತದೇ ಕುತಂತ್ರಿ ಕೆಲಸ ಮಾಡಿದ್ದು ವೀಕ್ಷಕರಿಗೆ ಬೇಸರ ತಂದಿದೆ. ಹೀಗಾಗಿ ಮೋಕ್ಷಿತಾ ಕೂಡ ಈ ವಾರ ಮನೆಯಿಂದ ಹೊರಹೋಗುವ ಡೇಂಜರ್ ಝೋನ್‌ನಲ್ಲಿ ಇದ್ದಾರೆ.

who will survive bigg boss kannada season 11 last double elimination this week

ಹನುಮಂತನ ಮೇಲೆ ಕೈ ಮಾಡಿ ರಜತ್ ಟಾರ್ಗೇಟ್ ಮಾಡಿದ ಭವ್ಯಾ

ಮೋಕ್ಷಿತಾ ಜೊತೆಗೆ ಭವ್ಯಾ ಕೂಡ ಕೈ ಜೋಡಿಸಿ ರಜತ್‌ ಅವರನ್ನು ಈ ವಾರದ ಟಾಸ್ಕ್‌ ವೇಳೆ ಟಾರ್ಗೇಟ್ ಮಾಡಿದ್ದು ಕಂಡು ಬಂದಿದೆ. ಕಳೆದ ವಾರ ಟಾಸ್ಕ್‌ನಲ್ಲಿ ಹನುಮಂತನ ಮೇಲೆ ಕೈ ಮಾಡಿ ಜೈಲಿಗೆ ಹೋಗಿದ್ದ ಭವ್ಯಾ ಈ ವಾರ ರಜತ್‌ ಅವರನ್ನು ಮೋಕ್ಷಿತಾ ಜೊತೆ ಕೈ ಜೋಡಿಸಿ ಟಾರ್ಗೇಟ್ ಮಾಡಿದ್ದು ಕಂಡು ಬಂದಿದೆ. ಇದಕ್ಕೆ ಬಿಗ್‌ಬಾಸ್‌ ವೀಕ್ಷಕರೂ ಕೂಡ ಭವ್ಯಾ ಗೌಡ ಅವರನ್ನು ಬಿಗ್‌ಬಾಸ್‌ ಮನೆಯಲ್ಲಿ ಯಾಕೆ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಹೌದು.. ಬಿಗ್‌ಬಾಸ್‌ ಮನೆಯಲ್ಲಿ ಯಾವುದೇ ಸ್ಪರ್ಧಿ ಯಾರ ಮೇಲೆ ಕೈ ಮಾಡುವಂತಿಲ್ಲ. ಆದರೂ ಕೂಡ ಭವ್ಯಾ ಟಾಸ್ಕ್‌ ವೇಳೆ ಹನುಮಂತನ ಮೇಲೆ ಕೈ ಮಾಡುತ್ತಾರೆ. ಇದರಿಂದಾಗಿ ಭವ್ಯಾ ಬಿಗ್‌ಬಾಸ್‌ ಮನೆಯಿಂದ ಹೊರಬರಬೇಕಿತ್ತು. ಆದರೆ ಭವ್ಯಾ ಮಾಡಿದ ತಪ್ಪಿಗೆ ಅವರಿಗೆ ಕೇವಲ ಜೈಲಿಗೆ ಕಳುಹಿಸುವ ಶಿಕ್ಷೆ ನೀಡಿ ಮನೆಯಲ್ಲಿಟ್ಟುಕೊಂಡಿದ್ದಾರೆ ಎಂದು ಜನ ಉಗಿಯುತ್ತಿದ್ದಾರೆ. ಹೀಗಾಗಿ ಭವ್ಯಾ ಕೂಡ ಡೆಂಜರ್‌ ಝೋನ್‌ನಲ್ಲಿ ಇದ್ದಾರೆ.

ಎಲಿಮಿನೇಷನ್‌ನಿಂದ ಪಾರಾಗುವವರು ಯಾರು?

ಇನ್ನೂ ತ್ರಿವಿಕ್ರಮ್, ಹನುಮಂತ, ರಜತ್ ಈ ಮೂರು ಜನ ಫಿನಾಲೆ ತಲುಪುವುದು ಪಕ್ಕಾ ಎನ್ನಲಾಗುತ್ತಿದೆ. ಯಾಕೆಂದರೆ ತ್ರಿವಿಕ್ರಮ್ ಹಾಗೂ ಹನುಮಂತ ಮೊದಲಿನಿಂದಲೂ ಆಟ ಚೆನ್ನಾಗಿ ಆಡಿಕೊಂಡು ಬಂದಿದ್ದಾರೆ. ರಜತ್ ಸಣ್ಣ ಪುಟ್ಟ ತಪ್ಪು ಮಾಡಿದ್ದರೂ ತಿದ್ದಿಕೊಂಡು ಆಡುತ್ತಿದ್ದಾರೆ.

ಇತ್ತ ಮಂಜು ಹಾಗೂ ಗೌತಮಿ ಜೊತೆಯಾಗಿ ಒಬ್ಬರನ್ನೊಬ್ಬರು ಬಿಟ್ಟು ಕೊಡದೆ ಈ ವರೆಗೂ ಆಡಿಕೊಂಡು ಬಂದಿದ್ದಾರೆ. ಆದರೆ ಈ ಫೇವರ್‌ ಗೇಮ್ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕಡಿಮೆಯಾದಂತೆ ಕಂಡು ಬಂದಿದೆ. ಹೀಗಾಗಿ ಇವರಿಬ್ಬರೂ ಕೂಡ ಫಿನಾಲೆ ಹೋಗಬಹುದು ಎನ್ನುವ ಲೆಕ್ಕಾಚಾರವಿದೆ.

ಇಲ್ಲಿ ಎಲ್ಲಾ ಸ್ಪರ್ಧಿಗಳು ಬಿಗ್‌ಬಾಸ್‌ ಆರಂಭದಿಂದಲೂ ತಪ್ಪು ಮಾಡತ್ತಲೇ ಬಂದಿದ್ದಾರೆ. ಆದರೆ ಆ ತಪ್ಪಿನ ಪ್ರಮಾಣ ಎಷ್ಟಿದೆ ಅನ್ನೋದು ಕೂಡ ಇಲ್ಲಿ ಪರಿಗಣಿಸಲಾಗುತ್ತದೆ. ಯಾರು ತಿದ್ದಿಕೊಂಡರು? ಯಾರು ತಿದ್ದಿಕೊಳ್ಳದೇ ಈಗಲೂ ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ? ಇದೆಲ್ಲವನ್ನು ಪರಿಗಣಿಸಿದರೆ ಬಿಗ್‌ಬಾಸ್‌ ಮನೆಯಿಂದ ಹೊರ ಬರುವ ಸ್ಪರ್ಧಿ ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಕೆಲ ಸ್ಪರ್ಧಿಗಳ ವಿಚಾರದಲ್ಲಿ ಬಿಗ್‌ಬಾಸ್‌ ಕೊಂಚ ಸಿಂಪತಿ ತೋರಿಸಿದಂತೆ ಇಲ್ಲಿ ಕಾಣಿಸುತ್ತಿದೆ. ಒಟ್ಟಿನಲ್ಲಿ ಈ ವಾರ ಯಾರು ಹೋಗುತ್ತಾರೆ ಹಾಗೂ ಯಾರು ಉಳಿಯುತ್ತಾರೆ ಎನ್ನುವುದು ಸ್ಪಷ್ಟವಾಗಿ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+