Mokshitha Pai: ಮೋಕ್ಷಿತಾ ಮದುವೆ ಆಗೋ ಹುಡ್ಗಾ ಹೇಗಿರಬೇಕು?

ಮೋಕ್ಷಿತಾ ಅವರ ಮೌನ ಸಾಕಷ್ಟು ಬಿಗ್‌ಬಾಸ್‌ ಅಭಿಮಾನಿಗಳ ಮನ ಗೆದ್ದಿದೆ. ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಮೋಕ್ಷಿತಾ ಪೈ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಮೋಕ್ಷಿತಾ ಅವರ ಮದುವೆ ವಿಚಾರ ಕೂಡ ಈಗ ಮುನ್ನೆಲೆಗೆ ಬಂದಿದೆ. ಹಾಗಾದರೆ ಮೋಕ್ಷಿತಾ ಪೈ ಮದುವೆ ಯಾವಾಗ ಆಗುತ್ತಾರೆ? ಅವರು ಮದುವೆ ಆಗುವ ಹುಡುಗ ಹೇಗಿರಬೇಕು?

ಸಂದರ್ಶನವೊಂದರಲ್ಲಿ ಮಾತನಾಡಿದ ಮೋಕ್ಷಿತಾ ಪೈ ಅವರು, 'ಮದುವೆ ಆಗುವ ಸಂದರ್ಭ ಬಂದರೆ ಕಂಡಿತವಾಗಿ ಮದುವೆ ಆಗುತ್ತೇನೆ. ಆದರೆ ಈವರೆಗೆ ಆ ಸಂದರ್ಭ ಬಂದಿಲ್ಲ. ಜೊತೆಗೆ ನನಗೆ ಕೆಲ ಆಸೆಗಳು ಇವೆ. ಆಸೆಯಂತೆ ಹುಡುಗ ಇದ್ದರೆ ನಾನು ಮದುವೆ ಆಗುತ್ತೇನೆ' ಎಂದು ಹೇಳಿದ್ದಾರೆ. ಜೊತೆಗೆ ಮೋಕ್ಷಿತಾ ಮದುವೆ ಆಗದೇ ಇರಲು ಕಾರಣವನ್ನೂ ನೀಡಿದ್ದಾರೆ. ಹಾಗಾದರೆ ಆ ಕಾರಣ ಏನು?

what kind of boy mokshitha pai like for marriage

ಮೋಕ್ಷಿತಾ ಮದುವೆ ಆಗೋ ಹುಡ್ಗಾ ಹೇಗಿರಬೇಕು?

ಮದುವೆ ಬಗ್ಗೆ ಇನ್ನಷ್ಟು ವಿಚಾರಗಳನ್ನು ಹಂಚಿಕೊಂಡ ಮೋಕ್ಷಿತಾ ಅವರು, 'ನನ್ನ ಸಹೋದರಿನಿಗೆ ಕೆಲ ಸಮಸ್ಯೆ ಇದೆ. ಹೀಗಾಗಿ ನಾನು ಅವನನ್ನು ನೋಡಿಕೊಳ್ಳಬೇಕು. ಈ ಕಾರಣಕ್ಕಾಗಿ ನಾನು ಇನ್ನೂ ಕೂಡ ಮದುವೆ ಬಗ್ಗೆ ಯೋಚನೆ ಮಾಡಿಲ್ಲ' ಎನ್ನುವ ಮಾತುಗಳನ್ನು ಹೇಳಿದ್ದಾರೆ. ಅಲ್ಲದೆ ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಕೂಡ ಮೋಕ್ಷಿತಾ ಈ ವೇಳೆ ಹೇಳಿದ್ದಾರೆ. ಹಾಗಾದರೆ ಮೋಕ್ಷಿತಾ ಮದುವೆ ಆಗುವ ಹುಡುಗ ಹೇಗಿರಬೇಕು?

'ಹುಡುಗ ತುಂಬಾ ಸಿಂಪಲ್‌ ಆಗಿ ಇರಬೇಕು. ನನಗೆ ಸಪೋರ್ಟಿವ್ ಆಗಿ ಇರಬೇಕು. ನನ್ನ ಫ್ಯಾಮಿಲಿಯನ್ನು ತನ್ನ ಫ್ಯಾಮಿಲಿಯಂತೆ ನೋಡಿಕೊಳ್ಳಬೇಕು. ಈ ರೀತಿ ನನಗೆ ಆಸೆಗಳು ಇವೆ. ಈ ರೀತಿ ನಾನು ಆಸೆ ಪಟ್ಟಂತೆ ಹುಡುಗ ಸಿಕ್ಕರೆ ನಾನು ಮದುವೆ ಆಗುತ್ತೇನೆ' ಎಂದು ಮೋಕ್ಷಿತಾ ಹೇಳುತ್ತಾರೆ. ಇನ್ನೂ ಇದೇ ವೇಳೆ ತ್ರಿವಿಕ್ರಮ್ ಬಗ್ಗೆ ಕೂಡ ಮೋಕ್ಷಿತಾ ಮಾತನಾಡಿದ್ದಾರೆ.

ತ್ರಿವಿಕ್ರಮ್ ಬಗ್ಗೆ ಮೋಕ್ಷಿತಾ ಹೇಳಿದ್ದೇನು?

ಹೌದು.. ತ್ರಿವಿಕ್ರಮ್ ಬಗ್ಗೆ ಕೂಡ ಮೋಕ್ಷಿತಾ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾನು ಬಿಗ್‌ಬಾಸ್‌ ಮನೆಗೆ ಹೋಗಿದ್ದು ತ್ರಿವಿಕ್ರಮ್ ಅವರನ್ನು ಇಷ್ಟಪಡಲು ಅಲ್ಲ. ನನ್ನ ಉದ್ದೇಶ ಅದಾಗಿರಲಿಲ್ಲ. ಅವರು ನನಗೆ ಜಸ್ಟ್ ಫ್ರೆಂಡ್ ಅಷ್ಟೆ. ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರಂತೆ ತ್ರಿವಿಕ್ರಮ್ ಕೂಡ ಫ್ರೆಂಡ್ ಆಗಿದ್ದರು ಅಷ್ಟೆ. ಇದರ ಹೊರತಾಗಿ ನನಗೆ ಅವರ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ಹೆಚ್ಚೇನು ಹೇಳಲು ಇಷ್ಟಪಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಇನ್ನೂ 'ತ್ರಿಮೋಕ್ಷಿ' ಅನ್ನೋ ಟ್ರೋಲ್ ಬಗ್ಗೆ ಕೂಡ ಮೋಕ್ಷಿತಾ ಮಾತನಾಡಿ- 'ಜನ ನೂರೆಂಟು ಮಾತನಾಡುತ್ತಾರೆ. ಜನ ಮಾತನಾಡುತ್ತಾರೆ ಅಂದರೆ ಅದು ಅವರ ಅಭಿಪ್ರಾಯ. ನಾನು ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ನಾನು ಸ್ಪಷ್ಟನೆ ನೀಡಬಹುದು ಅಷ್ಟೆ ಬಿಟ್ಟರೆ ಅವರ ಅಭಿಪ್ರಾಯಗಳನ್ನು ನಾನು ಚೇಂಜ್ ಮಾಡಲು ಆಗಲ್ಲ' ಎಂದಿದ್ದಾರೆ.

ಹೀಗೆ ಮೋಕ್ಷಿತಾ ತಮ್ಮ ಮದುವೆ ವಿಚಾರದಲ್ಲಿ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಮೋಕ್ಷಿತಾ ಮದುವೆ ಆಗುವ ಹುಡುಗ ಹೇಗಿರಲಿದ್ದಾರೆ ಎನ್ನುವ ಕೌತುಕ ಹೆಚ್ಚಾಗಿದೆ. ಒಟ್ಟಿನಲ್ಲಿ ಮೋಕ್ಷಿತಾ ಮಾತ್ರ ತಮ್ಮ ಮದುವೆ ಆಗುವ ಸಿಹಿ ಸುದ್ದಿಯನ್ನು ಆದಷ್ಟು ಬೇಗ ನೀಡಲಿದ್ದಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+