Namratha Gowda: ಸದ್ಯ ನಾನು ಸಿಂಗಲ್‌.. ಈ ಜಿಲ್ಲೆ ಹುಡುಗ್ರಿಗೆ ಒಳ್ಲೇ ಆಫರ್‌ ನೀಡಿದ ನಮ್ರತಾ ಗೌಡ- ವಿಡಿಯೋ ವೈರಲ್‌

Namratha Gowda: ಸಾಮಾನ್ಯವಾಗಿ ಹೊಸದಾಗಿ ವಿವಾಹ ಆಗಲು ಬಯಸುವವರಿಗೆ ಹಲವು ನಿರೀಕ್ಷೆಗಳಿರುತ್ತವೆ. ಕೆಲವು ಹುಡುಗರು ತಮ್ಮ ಜೀವನ ಬೆಳಗಲು ಬರುವ ಹುಡುಗಿ ಹೀಗೆಯೇ ಇರಬೇಕು ಎಂದು ಬಯಸಿದರೆ, ಹುಡುಗಿಯರು ಕೂಡ ತಮ್ಮ ಬಾಳಿಗೆ ಬರುಗೆ ಹುಡುಗರು ಹೀಗೆಯೇ ಇರಬೇಕು ಎಂದು ಬಯಸುತ್ತಾರೆ. ಹಾಗೆಯೇ ಇದೀಗ ನಟಿ, ಬಿಗ್‌ ಬಾಸ್‌ ನಮ್ರತಾ ಗೌಡ ಅವರು ಕೂಡ ತನ್ನನ್ನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ತಿಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ನಟಿ, ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ನಮ್ರತಾ ಗೌಡ ಅವರು ತನ್ನನ್ನು ಮದುವೆಯಾಗಬೇಕಾದ ಹುಡುಗ ಹೇಗಿರಬೇಕೆದು ಹೇಳಿರುವ ವಿಡಿಯೋ ಇದೀಗ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

What did Namratha Gowda say about marriage video Viral

ಅದರಲ್ಲೂ ತನ್ನನ್ನು ಮದುವೆಯಾಗುವ ಹುಡುಗ ಮೈಸೂರಿನನಾಗಿರಬೇಕು ಎಂದು ಹೇಳಿದ್ದಾರೆ. ಹಾಗಾದರೆ ತನ್ನ ಹುಡುಗ ಮೈಸೂರಿನವರೇ ಆಗಿರಬೇಕೆಂದು ಹೇಳಿರುವುದರ ಹಿಂದಿನ ಅಸಲಿ ಕಹಾನಿ ಏನು ಎನ್ನುವ ಮಾಹಿತಿಯನ್ನು ಅವರು ಹೇಳಿರುವ ಹಾಗೆ ಇಲ್ಲಿ ಮಾಹಿತಿ ನೀಡಲಾಗಿದೆ ಗಮನಿಸಿ.

"ಸದ್ಯಕ್ಕೆ ನಾನು ಸಿಂಗಲ್‌.. ನೋಡಿ ಯಾರಾದ್ರೂ ಮೈಸೂರು ಹುಡುಗರು ಸಿಂಗಲ್‌ ಆಗಿದ್ರೆ, ಮಾತನಾಡಬಹುದು. ಒಂದೇ ಒಂದು ಸೀಕ್ರೇಟ್‌ ಏನಂದರೆ, ನನಗೆ ಮೈಸೂರಿಲ್ಲಿ ಸೆಟ್ಲ್‌ ಆಗಬೇಕೆನ್ನುವುದು ನನ್ನ ಆಸೆ. ಆದ್ದರಿಂದ ಮೈಸೂರು ಹುಡುಗ ಸಿಕ್ಕರೆ ಮತ್ತಷ್ಟು ಸಹಾಯ ಆದಂತಾಗಲಿದೆ," ಎಂದು ಹೇಳಿದ್ದಾರೆ.

ಅಲ್ಲದೆ, "ಮತ್ತೊಂದೆಡೆ ನಾನು ಮದುವೆಯಾಗುವಷ್ಟು ಹಣ ಸಂಪಾದನೆ ಮಾಡಿಕೊಳ್ಳಬೇಕು. ಬಳಿಕ ಮದುವೆ ಬಗ್ಗೆ ಯೋಚನೆ ಮಾಡಬೇಕು. ಮೊದಲು ಹುಡುಗ ಸಿಗಬೇಕು," ಎಂದು ಹೇಳಿಕೊಂಡಿರುವ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಒಟ್ಟಿನಲ್ಲಿ ನಮ್ರತಾ ಗೌಡ ನಾನು ಮದುವೆ ಆಗುವುದಿದ್ದರೆ, ಅದು ಮೈಸೂರು ಹುಡುಗನನ್ನೇ ಎನ್ನುವುದು ಈ ವಿಡಿಯೋದ ಮೂಲಕ ಸ್ಪಷ್ಟವಾಗಿ ತಿಳಿಯುತ್ತದೆ.

ಪರಂವಾಸ್ಟುಡಿಯೋದ ಸ್ಪಷ್ಟನೆ ಏನು?: "ಬ್ಯಾಚುಲರ್ ಪಾರ್ಟಿ" ಸಿನಿಮಾದಲ್ಲಿ 2 ಹಾಡುಗಳನ್ನು ಅನುಮತಿಯಿಲ್ಲದೇ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಇದ್ದು, ಈ ಸಂಬಂಧ ಎಫ್​ಐಆರ್​ ದಾಖಲಾಗಿದೆ. ಇದಕ್ಕೆ ಇದೀಗ ರಕ್ಷಿತ್​ ಶೆಟ್ಟಿ ಅವರ ಒಡೆತನದ ಪರಂವಃ ಸ್ಟುಡಿಯೋಸ್​ ಸಂಸ್ಥೆಯು ಪ್ರತಿಕ್ರಿಯೆ ನೀಡಿದೆ.

ರಕ್ಷಿತ್​ ಶೆಟ್ಟಿ ಒಡೆತನದ "ಪರಂವಾ ಸ್ಟುಡಿಯೋಸ್" ನಿರ್ಮಾಣ ಮಾಡಿದ ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ 2 ಹಾಡುಗಳನ್ನು ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಇದೀಗ ಎಂಆರ್‌​ಟಿ ಮ್ಯೂಸಿಕ್​ ಸಂಸ್ಥೆಯು ಪ್ರಕರಣ ದಾಖಲಿಸಿದೆ. ಇದಕ್ಕೆ ಸಂಬಂಧ ಪರಂವಾ ಸ್ಟುಡಿಯೋಸ್​ ಕಡೆಯಿಂದ ಸ್ಪಷ್ಟನೆ ನೀಡಲಾಗಿದ್ದು, ಇದನ್ನು ಕೋರ್ಟ್‌ನಲ್ಲೇ ಬಗೆಹರಿಸಿಕೊಳ್ಳು ರಕ್ಷಿತ್​ ಶೆಟ್ಟಿ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಪರಂವಾ ಸ್ಟುಡಿಯೋಸ್​ ತನ್ನ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ವಿವರವಾಗಿ ಸ್ಪಷ್ಟನೆ ಪ್ರಕಟಿಸಿದೆ. ಪ್ರೀತಿಯ ಪ್ರೇಕ್ಷಕರೇ ಹಾಗೂ ಮಾಧ್ಯಮ ಮಿತ್ರರೇ, ನಾವು ಈ ಬಹಿರಂಗ ಪತ್ರವನ್ನು ಎಂಆರ್‌​ಟಿ ಮ್ಯೂಸಿಕ್ ಸಂಸ್ಥೆ ನಮ್ಮ ಮೇಲೆ 2 ಹಾಡಿನ ಹಕ್ಕು ಉಲ್ಲಂಘನೆಯ ಆರೋಪ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ಬರೆದಿರುತ್ತೇವೆ.

ಮೊದಲಿಗೆ ಸ್ಪಷ್ಟಿಕರಿಸಲು, ಚಿತ್ರದಲ್ಲಿ ಬಳಕೆ ಆಗಿರುವ ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಕಾರಣ, ಚಿತ್ರದಲ್ಲಿ ಈ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂದು, ಹಾಗೂ ಬಳಕೆಯ ರೂಪವನ್ನು ನಿಮ್ಮ ಗಮನಕ್ಕೆ ತರಲು ಎಂದು ಪತ್ರ ಆರಂಭಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+