Bigg Boss ನಟಿ ಹರಿಪ್ರಿಯಾ ಬಿಗ್‌ಬಾಸ್‌ಗೆ ಹೋಗ್ತಾರಾ, ಏನಂದ್ರು ನೋಡಿ

ನಟಿ ಹರಿಪ್ರಿಯಾ ಅವರು ಈ ಬಾರಿ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಬಾರಿ ಬಿಗ್‌ಬಾಸ್‌ನಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಕುತೂಹಲ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೆಲವು ಹೆಸರುಗಳು ಕೇಳಿ ಬಂದಿತ್ತು. ನಟಿ ಹರಿಪ್ರಿಯಾ ಅವರು ಸಹ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಇದಕ್ಕೆ ಹರಿಪ್ರಿಯಾ ಅವರು ಏನು ಹೇಳಿದ್ದಾರೆ ನೋಡಿ.

ನಟಿ ಹರಿಪ್ರಿಯಾ ಅವರು ಕನ್ನಡದ ಖ್ಯಾತ ನಟಿ, ನಟ ವಸಿಷ್ಠ ಸಿಂಹ ಅವರನ್ನು ವಿವಾಹವಾಗಿದ್ದು. ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ಎನ್ನುವ ಖ್ಯಾತಿ ಈ ಜೋಡಿಗೆ ಇದೆ. ಈಚೆಗೆ ಅವರು ಸಿನಿಮಾದಿಂದ ಸಣ್ಣ ಬ್ರೇಕ್‌ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರು, ಈ ಬಾರಿ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಅವರ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಈ ಬಗ್ಗೆ ಭಿನ್ನವಾಗಿ ಹರಿಪ್ರಿಯಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ಗೆ ಅವರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

What did actress Haripriya say about going to Bigg Boss

ಬಿಗ್‌ಬಾಸ್‌ಗೆ ಹೋಗುವ ಬಗ್ಗೆ ಹರಿಪ್ರಿಯಾ ಹೇಳಿದ್ದೇನು ?

ನಟಿ ಹರಿಪ್ರಿಯಾ ಅವರು ಈ ಬಾರಿಯ ಬಿಗ್‌ಬಾಸ್‌ಗೆ ಹೋಗಲಿದ್ದಾರೆ ಎನ್ನುವ ಬಗ್ಗೆ ಈಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಜೋರು ಚರ್ಚೆ ನಡೆದಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ನಟಿ ಹರಿಪ್ರಿಯಾ ಅವರು ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಅದರಲ್ಲಿ "ಇಲ್ಲಪ್ಪಾ ಇಲ್ಲ...! ನನಗೆ ನಾನೆ ಬಾಸು, ನಾನು ನಮ್ಮ ಮನೆ ಬಿಟ್ಟು ಯಾವ್‌ ಮನೆಗೂ ಹೋಗ್ತಿಲ್ಲ" ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ಗೆ ಅವರ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನೀವು ಬಿಗ್‌ಬಾಸ್‌ಗೆ ಹೋಗಬೇಕಿತ್ತು ಮೇಡಂ ನೀವು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಇರುತ್ತೀರಿ ಎಂದು ನಿರೀಕ್ಷೆ ಮಾಡಿದ್ವಿ ಎಂದಿದ್ದರೆ, ಇನ್ನೂ ಕೆಲವರು ನಿಜವಾಗ್ಲೂ ಹೋಗ್ತಿಲ್ವಾ, ನೀವು ಹೋಗಲ್ಲ ಅಂತ ನಮಗೆ ಗೊತ್ತಿತ್ತು ಎಂದು ಕಾಮೆಂಟ್‌ ಮಾಡಿದ್ದಾರೆ. ನೀವು ಹೋಗ್ತೀನಿ ಅಂದ್ರು ಸಿಂಹದ ಗುಹೆಯಿಂದ ತಪ್ಪುಸ್ಕೊಂಡ್‌ ಹೋಗೋಕಾಗಲ್ವಲ್ಲ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

What did actress Haripriya say about going to Bigg Boss

ಈ ಬಾರಿ ಬಿಗ್‌ಬಾಸ್‌ ತೀರ ಭಿನ್ನವಾಗಿಯೇ ಪ್ರಾರಂಭಾಗುತ್ತಿದೆ. ಬಿಗ್‌ಬಾಸ್‌ ನಿರೂಪಣೆ ಯಾರು ಮಾಡಲಿದ್ದಾರೆ ಎನ್ನುವ ವಿಷಯವೇ ಒಂದು ತಿಂಗಳು ಸ್ಪಷ್ಟವಾಗಿರಲಿಲ್ಲ. ಹೊಸ ಹೊಸ ಹೆಸರುಗಳು ಕೇಳಿ ಬರುತ್ತಿದ್ದವು. ಆಗಲೂ ಕೆಲವರು ಈ ಬಾರಿ ನಟ ಸುದೀಪ್‌ ಅವರೇ ನಿರೂಪಣೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ ಈ ಬಾರಿಯೂ ನಟ ಸುದೀಪ್‌ ಅವರೇ ಈ ಬಾರಿಯೂ ಬಿಗ್‌ಬಾಸ್‌ ಸಾರಥಿಯಾಗಿದ್ದಾರೆ. ಬಿಗ್‌ಬಾಸ್‌ಗೆ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಈ ಬಾರಿ ನಡೆಯುತ್ತಿರುವುದು 11ನೇ ಬಿಗ್‌ಬಾಸ್‌. ಈ ಬಾರಿ ಬಿಗ್‌ಬಾಸ್‌ನಲ್ಲಿ ಯಾರೆಲ್ಲ ಇರಲಿದ್ದಾರೆ. ಹೊಸಬರಿಗೆ ಅವಕಾಶ ನೀಡಲಾಗುತ್ತದೆಯೇ. ಯಾವ ಕಂಟೆಂಟ್‌ ಇರಲಿದೆ ಎನ್ನುವುದು ಸೇರಿದಂತೆ ಹಲವು ಕುತೂಹಲ ಮೂಡಿದೆ. ಈ ಎಲ್ಲ ಪ್ರಶ್ನೆಗಳಿಗೂ ಇಷ್ಟರಲ್ಲೇ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+