ಎರಡನೇ ಮಗುವಿನ ಯೋಜನೆ ಬಗ್ಗೆ ಅಭಿಷೇಕ್ ಹೇಳಿದ್ದೇನು?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಹಳೆಯ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅಭಿಷೇಕ್ ಬಚ್ಚನ್ ರಿತೇಶ್ ದೇಶ್ಮುಖ್ ಅವರ 'ಕೇಸ್ ತೋ ಬಂತಾ ಹೈ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿ ಅಭಿಷೇಕ್ ಬಚ್ಚನ್ ಅವರಿಗೆ ಇನ್ನೊಂದು ಮಗುವಿನ ಬಗ್ಗೆ ಕೀಟಲೆ ಮಾಡಲಾಗಿದೆ. ಐಶ್ವರ್ಯಾ ಜೊತೆ ಎರಡನೇ ಮಗುವನ್ನು ಯಾವಾಗ ಯೋಜಿಸುತ್ತಿದ್ದೀರಿ ಎಂದು ಅಭಿಷೇಕ್ ಬಚ್ಚನ್ ಅವರನ್ನು ಕೇಳಿದಾಗ, ಅವರು ನಗುವುದು ನಾಚಿಕೊಂಡಿರುವುದು ಕಾಣಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಅಭಿಷೇಕ್ ಮನೆಯಲ್ಲಿ ಎಲ್ಲರ ಹೆಸರು 'ಎ' ಯಿಂದ ಆರಂಭವಾಗುತ್ತದೆ. ಸಂಭಾಷಣೆಯ ಸಮಯದಲ್ಲಿ ರಿತೇಶ್ ಅಭಿಷೇಕ್‌ಗೆ 'ಅಮಿತಾಬ್ ಜಿ, ಐಶ್ವರ್ಯ, ಆರಾಧ್ಯ ಮತ್ತು ನೀವು ಅಭಿಷೇಕ್. ಈ ಎಲ್ಲಾ ಹೆಸರುಗಳು 'ಎ' ಅಕ್ಷರದಿಂದ ಪ್ರಾರಂಭವಾಗುತ್ತವೆ. ಹಾಗಾದರೆ ಜಯಾ ಆಂಟಿ ಮತ್ತು ಶ್ವೇತಾ ಹೇಗೆ ಹೊರಗುಳಿದರು? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ನಟ ಅಭಿಷೇಕ್ "ನೀವು ಅದರ ಬಗ್ಗೆ ಅವರನ್ನೇ ಕೇಳಬೇಕು" ಎಂದು ಹೇಳಿದ್ದಾರೆ.

ಎರಡನೇ ಮಗುವಿನ ಯೋಜನೆ ಬಗ್ಗೆ ಅಭಿಷೇಕ್ ಹೇಳಿದ್ದೇನು?
ಇದಾದ ನಂತರ ರಿತೇಶ್ ಅಭಿಷೇಕ್ ಅವರನ್ನು ಎರಡನೇ ಮಗುವಿನ ಯೋಜನೆಗಳ ಬಗ್ಗೆ ಕೇಳಿದರು. ರಿತೇಶ್ ಅಭಿಷೇಕ್‌ಗೆ 'ಆರಾಧ್ಯ ನಂತರ?' ಎಂದು ಕೇಳಿದಾಗ ಇದಕ್ಕೆ ಅಭಿಷೇಕ್ ಮುಗ್ಧ ಪ್ರತಿಕ್ರಿಯೆ ನೀಡಿದ್ದಾರೆ. 'ಮುಂದೆ ನೋಡೋಣ' ಎಂದು ಹೇಳಿದ್ದಾರೆ. ಇದಕ್ಕೆ ರಿತೇಶ್ 'ಯಾರು ಅಷ್ಟು ಹೊತ್ತು ಕಾಯುತ್ತಾರೆ?' ಎಂದು ಕೇಳಿದ್ದಾರೆ. ಇದಕ್ಕೆ ಅಭಿಷೇಕ್ ನಗುತ್ತಾ 'ರಿತೇಶ್, ನನ್ನ ವಯಸ್ಸನ್ನು ಗೌರವಿಸು. ನಾನು ನಿನಗಿಂತ ಹಿರಿಯ' ಎಂದು ನಾಚಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಹಳೆಯ ವಿಡಿಯೋ ಈಗ ಯಾಕೆ ವೈರಲ್ ಆಗಿದೆ ಗೊತ್ತಿಲ್ಲ. ಆದರೆ ಈ ಸನ್ನಿವೇಶವನ್ನು ಜನ ಮೆಚ್ಚಿಕೊಂಡಿದ್ದಾರೆ. ಅಭಿಷೇಕ್ ಮೊದಲ ಬಾರಿಗೆ ಒಂದು ಪ್ರಶ್ನೆಗೆ ನಾಚಿಕೊಂಡು ಉತ್ತರಿಸಿದ್ದಾರೆ. ಇದೀಗ ಬಚ್ಚನ್ ಅಭಿಮಾನಿಗಳು ಈ ಸವಿ ನೆನಪನ್ನು ವಿಡಿಯೋ ಶೇರ್ ಮಾಡುವ ಮೂಲಕ ಮರಳಿಸಿದ್ದಾರೆ. ಇದೀಗ ಅಭಿಷೇಕ್ ಬಚ್ಚನ್ ಮತ್ತು ರಿತೇಶ್ ದೇಶ್ಮುಖ್ 'ಹೌಸ್‌ಫುಲ್ 5' ಸಿನಿಮಾದಲ್ಲಿ ಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚಿಗೆ ಐಶ್ವರ್ಯಾ-ಅಭಿಷೇಕ್ ಬೇರ್ಪಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಅಭಿಷೇಕ್ ಬಚ್ಚನ್ 2007 ರಲ್ಲಿ ಐಶ್ವರ್ಯಾ ರೈ ಅವರನ್ನು ವಿವಾಹವಾದರು. ಕಳೆದ ವರ್ಷ ಇಬ್ಬರೂ ಪರಸ್ಪರ ಬೇರ್ಪಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಇಬ್ಬರೂ ಈ ಬಗ್ಗೆ ಏನನ್ನೂ ಹೇಳಲಿಲ್ಲ. ಅಮಿತಾಬ್ ಬಚ್ಚನ್ ತಮ್ಮ ಕುಟುಂಬದ ವೈಯಕ್ತಿಕ ವಿಷಯಗಳ ಸುತ್ತಲಿನ ಊಹಾಪೋಹಗಳನ್ನು ಪರಿಹರಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ನಮ್ಮ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ಯಾವುದೇ ತಪ್ಪು ಮಾಹಿತಿಯನ್ನು ನಂಬಬಾರದು ಎಂದು ಅವರು ಜನರಿಗೆ ಮನವಿ ಮಾಡಿದ್ದರು.












Click it and Unblock the Notifications