123 ಟೆಸ್ಟ್ ಮ್ಯಾಚ್ ಆಡಿದ್ದ ವಿರಾಟ್ ಕೊಹ್ಲಿ ವಿದಾಯ ಹೇಳಲು ಹೆಂಡತಿ ಅಲ್ಲ ಈ ಆಟಗಾರನೇ ಕಾರಣ ಅಂತಾ... Virat Kohli
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಿಂದ ದೂರ ಆಗುತ್ತಿದ್ದಾರೆ, ವಿರಾಟ್ ಕೊಹ್ಲಿ ಬದುಕಿನಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ... ವಿರಾಟ್ ಕೊಹ್ಲಿ ಸಂಸಾರ ಮುರಿದು ಬಿತ್ತಾ? ಹಿಂಗೆಲ್ಲಾ ಭಾರಿ ದೊಡ್ಡ ಚರ್ಚೆ ಶುರುವಾಗಿ ಸಂಚಲನ ಸೃಷ್ಟಿಯಾಗಿದೆ. ಆದರೆ ಇಂತಹ ಸಮಯದಲ್ಲೇ ಇಡೀ ವಿರಾಟ್ ಕೊಹ್ಲಿ ಅಭಿಮಾನಿಗಳು ಆಕ್ರೋಶ ಹೊರಹಾಕುವ ಸುದ್ದಿ ಸಿಕ್ಕಿದ್ದು, 123 ಟೆಸ್ಟ್ ಮ್ಯಾಚ್ ಆಡಿದ್ದ ವಿರಾಟ್ ಕೊಹ್ಲಿ ವಿದಾಯ ಹೇಳಲು ಹೆಂಡತಿ ಅಲ್ಲ ಈ ಆಟಗಾರನೇ ಕಾರಣ ಅಂತಾ...
ವಿರಾಟ್ ಕೊಹ್ಲಿ 1,200 ಕೋಟಿ ರೂಪಾಯಿ ಆಸ್ತಿ ಹೊಂದಿದ್ದು ಇಡೀ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಕ್ರೀಡಾಪಟು ಪೈಕಿ ಒಬ್ಬರು ಎನಿಸಿಕೊಂಡಿದ್ದಾರೆ. ಇದು ಬಿಡಿ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಆಟದಲ್ಲಿ ರಾಜ ಅಂದ್ರೆ ಕಿಂಗ್ ಪಟ್ಟ ನೀಡಲಾಗಿದ್ದು, ವಿರಾಟ್ ಕೊಹ್ಲಿ ಮಾಡಿರುವ ದಾಖಲೆ ಮುರಿಯಲು ಇನ್ನು 200 ವರ್ಷ ಕಳೆದರೂ ಆಗಲ್ಲ ಅನ್ನೋ ಮಾತನ್ನ ಅಭಿಮಾನಿ ಬಳಗ ಹೇಳುತ್ತದೆ. ಹೀಗೆ ಅತ್ಯುತ್ತಮವಾಗಿ ಆಡುವ ಸಮಯದಲ್ಲೇ ವಿರಾಟ್ ಕೊಹ್ಲಿ ದಿಢೀರ್ ಟಿ20 ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ಈ ಆಘಾತ ಸಹಿಸಿಕೊಳ್ಳುವ ಮೊದಲೇ ಮತ್ತೆ ಶಾಕ್ ಕೊಟ್ಟಿರುವ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿ ಕ್ರಿಕೆಟ್‌ಗೆ ಕೂಡ ಗುಡ್ ಬೈ ಹೇಳಿಬಿಟ್ಟರು...

ವಿರಾಟ್ ಕೊಹ್ಲಿ ವಿದಾಯ ಹೇಳಲು ಹೆಂಡತಿ...
ವಿರಾಟ್ ಕೊಹ್ಲಿ ಅವರು ಬಾಲಿವುಡ್ ಹಾಟ್ ನಟಿ ಅವನೀತ್ ಕೌರ್ ಅವರ ಹಾಟ್ ಫೋಟೋಗೆ ಲೈಕ್ ಕೊಟ್ಟಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತ್ತು. ನಟಿ ಅವನೀತ್ ಕೌರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಒಂದು ಹಾಟ್ ಫೋಟೊಗೆ, ವಿರಾಟ್ ಕೊಹ್ಲಿ ಅವರು ಲೈಕ್ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಕಾರಣದಿಂದ ವಿರಾಟ್ ಕೊಹ್ಲಿ & ಹೆಂಡತಿ ಅನುಷ್ಕಾ ಶರ್ಮಾ ಜಗಳ ಆಡಿದ್ದಾರೆ. ಹೀಗಾಗಿಯೇ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ ಎಂಬ ವದಂತಿ ಸಂಚಲನ ಸೃಷ್ಟಿ ಮಾಡಿತ್ತು. ಹೀಗಿದ್ದಾಗಲೇ, 123 ಟೆಸ್ಟ್ ಮ್ಯಾಚ್ ಆಡಿದ್ದ ವಿರಾಟ್ ಕೊಹ್ಲಿ ವಿದಾಯ ಹೇಳಲು ಹೆಂಡತಿ ಅಲ್ಲ ಈ ಆಟಗಾರನೇ ಕಾರಣ ಅಂತಾ...
ದಿಢೀರ್ ನಿವೃತ್ತಿ ಘೋಷಣೆ ಮಾಡಲು...
ಹೌದು, ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಘೋಷಣೆ ನಂತರ ಇಡೀ ಬಾಲಿವುಡ್ ಬೆಚ್ಚಿಬಿದ್ದು ಚಿಂತೆ ಮಾಡುವಂತೆ ಆಗಿತ್ತು. ಯಾಕಂದ್ರೆ ಒಂದು ಕಡೆ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ನಡುವೆ ಒಂದು ಬಾಲಿವುಡ್ ನಟಿ ಕಾರಣಕ್ಕೆ ಕಿರಿಕ್ ಆಗಿದೆ ಅನ್ನೋ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಹಾಗೇ ಇನ್ನೊಂದು ಕಡೆ ಸಿನಿಮಾ ರಂಗದ ಒಬ್ಬ ನಟಿಯಿಂದ ವಿರಾಟ್ ಕೊಹ್ಲಿ ಸಂಸಾರ ಹೀಗೆ ಆಯ್ತಾ? ಅಂತಾ ಕೂಡ ಅಭಿಮಾನಿಗಳು ಚರ್ಚೆಯನ್ನು ಮಾಡುವಂತಾಗಿತ್ತು. ಹೀಗೆಲ್ಲಾ ಇದ್ದಾಗಲೇ ವಿರಾಟ್ ಕೊಹ್ಲಿ ಹೀಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಲು ಕಾರಣ ಆಗಿದ್ದು ಗೌತಮ್ ಗಂಭೀರ್ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾದ ತುಂಬಾ ಇದೇ ವಿಚಾರವಾಗಿ ಚರ್ಚೆ ಜೋರಾಗಿದೆ.












Click it and Unblock the Notifications