ನಾಗವಲ್ಲಿ ಕನ್ನಡಕ್ಕೆ ರಾಜ ಫುಲ್ ಫಿದಾ..ಆಮೇಲೇನಾಯ್ತು?
ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯ ವಿಡಿಯೋ ಮಾಡುವುರದಲ್ಲಿ ನಾನು ನಂದಿನಿ ಖ್ಯಾತಿಯ ವಿಕ್ಕಿಪೀಡಿಯಾ ವಿಕಾಸ್ ಹಾಗೂ ತಂಡ ಎತ್ತಿದ ಕೈ. ರಾಜ್ಯದಲ್ಲಿ ನಡೆಯುವ ಆಗು ಹೋಗುಗಳ ಬಗ್ಗೆ ವಿಡಿಯೋ ಮಾಡುವ ವಿಕಾಸ್ ಹಾಗೂ ತಂಡ ನೋಡುಗರನ್ನು ನಕ್ಕು ನಗಿಸುವುದರಲ್ಲಿ ಪಂಟರು.
ಇವರು ಮಾಡುವ ವಿಡಿಯೋ ನೋಡಿ ಎಂತವರಾದರೂ ನಗಲೇ ಬೇಕು. ತುಂಬಾ ಬೋರ್, ಬೇಸರ ಎನಿಸುತ್ತಿದೆ ಅಂದಾಗ ವಿಕ್ಕಿಪೀಡಿಯಾ ಪೇಜ್‌ಗೆ ಒಮ್ಮೆ ವಿಸಿಟಿ ಕೊಟ್ಟರೆ ಸಾಕು ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಮನಸ್ಸು ಹಗುರಾಗುತ್ತದೆ. ಸಾಮಾನ್ಯ ಕಂಟೆಟ್‌ಗಳನ್ನೇ ಡಿಫರೆಂಟ್ ಆಗಿ ಮಾಡುವ ಈ ತಂಡ ಸೋಶಿಯಲ್ ಮೀಡಿಯಾ ಬಳಸುವವರ ಮೋಸ್ಟ್ ಫೇವರೇಟ್ ಅಂತಾನೇ ಹೇಳಬಹುದು.

ಪ್ರತಿಯೊಂದು ಹಬ್ಬಕ್ಕೂ ವಿಭಿನ್ನವಾದ ಕಟೆಂಟ್ ಮೂಲಕ ಶುಭಾಶಯ ತಿಳಿಸುವ ವಿಕ್ಕಿಪೀಡಿಯಾ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಸಖತ್ ತಮಾಷೆಯಾಗಿರುವ ವಿಡಿಯೋವೊಂದನ್ನು ಮಾಡಿದ್ದಾರೆ. ಈ ವಿಡಿಯೋ ನೋಡಿದವರು ಬಿದ್ದು ಬಿದ್ದು ನಗುವುದಂತೂ ಗ್ಯಾರಂಟಿ. ವಿಷಯ, ಪಾತ್ರಗಳ ಆಯ್ಕೆ, ನಟನೆ, ವಿಡಿಯೋದಲ್ಲಿ ಹಾಡಿನ ಆಯ್ಕೆ ಹೀಗೆ ಎಲ್ಲಾ ವಿಚಾರದಲ್ಲೂ ಅತ್ಯುತ್ತಮ.
ಕನ್ನಡ ರಾಜ್ಯೋತ್ಸವಕ್ಕೆ ನಾಗವಲ್ಲಿ, ರಾಮನಾಥ ಹಾಗೂ ರಾಜನ ಸ್ಟೋರಿಯನ್ನು ವಿಕ್ಕಿಪೀಡಿಯಾ ಆಯ್ದುಕೊಂಡಿದೆ. ನಾಗವಲ್ಲಿ ಹಾಗೂ ರಾಮನಾಥರ ಜೇನ ಧ್ವನಿಯೋಳೆ ಹಾಡಿನಿಂದ ಆರಂಭವಾಗುವ ಈ ವಿಡಿಯೋ ಮದರಂಗಿಯಲ್ಲಿ ಹಾಡಿನ ಮ್ಯೂಸಿಕ್ ಮೂಲಕ ಊಹೆಗೂ ಮೀರಿದ ಟ್ವಿಸ್ಟ್‌ನೊಂದಿಗೆ ಕೊನೆಗೊಳ್ಳುತ್ತದೆ. ವಿಡಿಯೋ ಹೇಗಿದೆ ಎನ್ನುವುದನ್ನು ನೀವು ನೋಡಲೇಬೇಕು.
ನಾಗವಲ್ಲಿಯ ಕನ್ನಡಕ್ಕೆ ಮೆಚ್ಚಿ ರಾಜನೇ ನಾಗವಲ್ಲಿ ಹಾಗೂ ರಾಮನಾಥನಿಗೆ ಮದುವೆ ಮಾಡಿಸುವುದು ಈ ವಿಡಿಯೋದ ಹೈಲೈಟ್ ಆಗಿದೆ. ಈ ವಿಡಿಯೋದಲ್ಲಿ ನಾಗವಲ್ಲಿ ಪಾತ್ರದಲ್ಲಿ ನಟಿಸಿರುವ ವಿಕಾಸ್ ನಟನೆಯಂತೂ ಸೂಪರ್. ಈ ತಮಾಷೆ ವಿಡಿಯೋ ಜೊತೆಗೆ ಉತ್ತಮವಾದ ಸಂದೇಶವೊಂದನ್ನು ವಿಕ್ಕಿಪೀಡಿಯಾ ತಂಡ ನೀಡಿದೆ. ಕನ್ನಡ ಕಲಿಯಲು ಪ್ರಯತ್ನಿಸುವರಿಗೆ ಕನ್ನಡಿಗರ ಬೆಂಬಲ ಹಾಗೂ ಕನ್ನಡಿಗರ ಹೃದಯ ವಿಶಾಲತೆಯನ್ನು ಈ ವಿಡಿಯೋ ತಿಳಿಸುತ್ತಿದೆ. ಅದೇನೇ ಇರಲಿ ನಾವು ಕನ್ನಡಿಗರು ಸ್ವಲ್ಪ ಪ್ರೀತಿ ಕೊಟ್ಟರೆ ಬೆಟ್ಟದಷ್ಟು ಪ್ರೀತಿನ ಖಂಡಿತಾ ವಾಪಸ್ ಕೊಡುತ್ತೇವೆ.












Click it and Unblock the Notifications