Viral Video: ನಟಿ ಕತ್ರಿನಾ ಕೈಫ್ ಗರ್ಭಿಣಿ ವದಂತಿಗಳಿಗೆ ರೆಕ್ಕೆ ಪುಕ್ಕ: ಲಂಡನ್ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?
ಬಾಲಿವುಡ್‌ನ ತಾರಾ ದಂಪತಿಗಳಲ್ಲಿ ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ಜೋಡಿ ಸಹ ಒಂದಾಗಿದೆ. ಇವರಿಬ್ಬರು ಪ್ರೀತಿಸಿ ವಿವಾಹವಾಗಿ ಎರಡೂವರೆ ವರ್ಷವಾಗಿದೆ. ಈ ಹಿಂದೊಮ್ಮೆ ನಟಿ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದು, ತಾರಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಓಡಾಡಿತ್ತು. ಆಗ ಇದನ್ನು ನಟ-ನಟಿಯರಿಬ್ಬರು ಒಪ್ಪಿರಲಿಲ್ಲ.
ಇದೀಗ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಅವರು ಅಪ್ಪ-ಅಮ್ಮ ಆಗಲಿದ್ದಾರೆ ಎಂಬ ಸುದ್ದಿಗೆ ಮತ್ತೆ ರೆಕ್ಕೆ ಪುಕ್ಕ ಬಂದಿದೆ. ಈ ಹಿಂದೆ ವದಂತಿ ಎನ್ನಲಾಗಿದೆ. ಇದೀಗ ಲಂಡನ್ ನಲ್ಲಿ ಕ್ಯಾಟ್-ವಿಕ್ಕಿ ವಿಹರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಿಂದಲೇ ಕ್ಯಾಟ್ ಬಗ್ಗೆ ಮತ್ತೆ ರೂಮರ್ಸ್ ಶುರುವಾಗಿದೆ ಎನ್ನಲಾಗಿದೆ. ಇಲ್ಲ ನಟಿ ಗರ್ಭಾವಸ್ಥೆಯಲ್ಲಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಆನ್‌ಲೈನ್‌ನಲ್ಲಿ ಮತ್ತೆ ಚರ್ಚೆಗಳು ಶುರುವಾಗಿವೆ.

ಸದ್ಯ ಕ್ಯಾಟ್ ಮತ್ತು ವಿಕ್ಕಿ ಇಬ್ಬರು ಲಂಡನ್‌ನಲ್ಲಿದ್ದಾರೆ. ವಾರದ ಆರಂಭದಲ್ಲಿ ಅವರು ನಟ ವಿಕ್ಕಿ ಕೌಶಲ್ ಅವರ ಜನ್ಮದಿನವನ್ನು ಇಲ್ಲಿಯೇ ಆಚರಿಸಿದ್ದರು. ಸದ್ಯ ದಂಪತಿಗಳು ಲಂಡನ್‌ನ ಬೀದಿಗಳಲ್ಲಿ ಓಡಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಇದು ಕೆಲವು ಚರ್ಚೆಗೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಲಂಡನ್‌ನಲ್ಲಿ ಕತ್ರಿನಾ ಕೈಫ್ ಪತಿ ವಿಕ್ಕಿ ಕೌಶಲ್ ಜೊತೆಗೆ ಸುತ್ತಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದರೆ ನೆಟ್ಟಿಗರು ನಟಿ ಗರ್ಭಾವಸ್ಥೆಯ ಬಗ್ಗೆ ಮಾತನಾಡಿದ್ದಾರೆ. ಕ್ಲಿಪ್‌ನಲ್ಲಿ ಕತ್ರಿನಾ ಅವರು ನಡಿಗೆ ಬದಲಾಗಿದೆ. ದೊಡ್ಡ ಗಾತ್ರದ ಕೋಟ್ ಧರಿಸಿದ್ದಾರೆ. ದಂಪತಿ ಲಂಡನ್‌ನಲ್ಲಿ ಹೆರಿಗೆ ಯೋಚಿಸಿರಬೇಕು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಊಹಿಸಿದ್ದಾರೆ.
ನಟಿ ಕತ್ರಿನಾ ಅವರು ಕೆಲವು ವಿಷಯಗಳನ್ನು ಗೌಪ್ಯವಾಗಿಡಲು ಇಷ್ಟಪಡುತ್ತಾರೆ. ಅವರು ಗರ್ಭಿಣಿಯಾಗಿದ್ದು, ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನು ಪಾಪರಾಜಿಗಳಿಂದ ಮರೆ ಮಾಚುವುದಕ್ಕಾಗಿಯೇ ಲಂಡನ್ ನಲ್ಲಿ ಬೀಡು ಬಿಟ್ಟಿದ್ದಾರೆ. ನಟಿ ಕತ್ರಿನಾ ಗರ್ಭಿಣಿ ಮಹಿಳೆಯಂತ ಕಾಣುತ್ತಾರೆ. ಅದು ಅವರ ನಡಿಗೆಯಿಂದಲೇ ಗೊತ್ತಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ನಟಿ ಆಪ್ತ ಮೂಲಗಳು ಹೇಳಿದ್ದೇನು?
ಇನ್ನೊಬ್ಬರು, ಕತ್ರಿನಾ ಗರ್ಭಿಣಿ ಎಂಬುದನ್ನು ಎಮೋಜಿ ಕಾಮೆಂಟ್ ಮಾಡಿ ಅಭಿಪ್ರಾಯ ಹೊರ ಹಾಕಿದ್ದಾರೆ. ಇದೆಲ್ಲದರ ಮಧ್ಯೆ ನಟಿ ಅವರ ಆಪ್ತ ಮೂಲಗಳು ಕತ್ರಿನಾ ಗರ್ಭಾವಸ್ಥೆಯಲ್ಲಿಲ್ಲ. ದಂಪತಿಗಳು ಲಂಡನ್ ಪ್ರವಾಸದಲ್ಲಿದ್ದಾರೆ. ಗರ್ಭಿಣಿ ಎಂಬುದೆಲ್ಲ ವದಂತಿಗಳು ಎಂದು ಬಹಿರಂಗಪಡಿಸಿದ್ದಾರೆ.
ಕತ್ರಿನಾ ದಂಪತಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಲು ಹುಟ್ಟುತ್ತಿರುವುದು ಇದೇ ಮೊದಲೇನಲ್ಲ. ಕೆಲವು ವಾರಗಳು ಅಥವಾ ತಿಂಗಳುಗಳ ಕಾಲ ನಟಿ ಸಾರ್ವಜನಿಕವಾಗಿ ಕಾನದಿದ್ದಾಗ, ಕಾರ್ಯಕ್ರಮಗಳಿಗೆ ಗೈರಾದಾಗಲೆಲ್ಲ. ಇವೆಲ್ಲ ವದಂತಿಗಳು ಮುನ್ನೆಲೆಗೆ ಬರುತ್ತಿವೆ. ಈಗಲೂ ಹಾಗೆ ಆಗಿದೆ.
ಇವೆಲ್ಲ ಊಹಾಪೋಹಗಳು ಎಂದು ಬಹಿರಂಗವಾಗುತ್ತಿದ್ದರು ಸಹ ನೆಟ್ಟಿಗರು ನೆಟಿ ಕತ್ರಿನಾ ಕೈಫ್ ವೈಯಕ್ತಿಕ ವಿಚಾರಗಳ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದಾರೆ. ದಂಪತಿಗಳ ಜೀವನದ ಅಪ್ಡೇಟ್ ತಿಳಿಯಲು ಉತ್ಸುಕತೆ ತೋರುತ್ತಿದ್ದಾರೆ.












Click it and Unblock the Notifications