ಮೇಘನಾ ರಾಜ್ ಜೊತೆ 2ನೆ ಮದುವೆ ಬಗ್ಗೆ ವಿಜಯರಾಘವೇಂದ್ರ ಸ್ಪಷ್ಟನೆ
ಮೇಘನಾ ರಾಜ್ ಹಾಗೂ ವಿಜಯರಾಘವೇಂದ್ರ ಶೀಘ್ರದಲ್ಲೇ ಎರಡನೇ ಮದುವೆ ಆಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಇವರಿಬ್ಬರ ಮದುವೆ ಬಗ್ಗೆ ಆಮಂತ್ರಣ ಪತ್ರಿಕೆಯೊಂದು ವಾಟ್ಸಾಪ್ ಗ್ರೂಪ್‌ಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ಇದೀಗ ವೈರಲ್ ಆಗುತ್ತಿರುವ ಆಮಂತ್ರಣ ಪತ್ರಿಕೆ ಮತ್ತು ತಮ್ಮ ಎರಡನೇ ಮದುವೆ ಬಗ್ಗೆ ವಿಜಯರಾಘವೇಂದ್ರ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
ಇತ್ತೀಚೆಗೆ ಮೇಘನಾ ರಾಜ್ ಹಾಗೂ ವಿಜಯರಾಘವೇಂದ್ರ ಎರಡನೇ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ. ಇದರಿಂದ ಮೇಘನಾ ರಾಜ್ ಸೇರಿದಂತೆ ಅವರ ಕುಟುಂಬಸ್ಥರು ಆಪ್ತರು ತುಂಬಾ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಘನ ರಾಜ್ ಕೂಡ ಇದಕ್ಕೆ ಸ್ಪಷ್ಟಣೆಯನ್ನು ನೀಡಿದ್ದಾರೆ. ಆದರೂ ಕೂಡ ಊಹಾಪೋಹ ಸುದ್ದಿಗಳು ಹರಿದಾಡುತ್ತಲೇ ಇವೆ. ಇದೀಗ ವಿಜಯರಾಘವೇಂದ್ರ ಈ ವಿಚಾರದಲ್ಲಿ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ.

ಹೌದು ಖಾಸಗಿ ಮಾದ್ಯಮವೊಂದು ಮೇಘನರಾಜ್ ಜೊತೆಗೆ ಎರಡನೇ ಮದುವೆ ಬಗ್ಗೆ ಕೇಳಿದಾಗ ವಿಜಯರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ. 'ನಾನು ಮೇಘನಾರಾಜ್ ಅವರಿಗೆ ಸ್ನೇಹಿತ ಅಷ್ಟೇ. ಮದುವೆ ಆಗುವುದು ಸುಳ್ಳು ಸುದ್ದಿ. ನಾನು ಆ ರೀತಿ ಯೋಚನೆ ಮಾಡಲು ಸಾಧ್ಯವಿಲ್ಲ' ಎಂದು ವಿಜಯರಾಘವೇಂದ್ರ ಕಡ್ಡಿಮುರಿದಂತೆ ಹೇಳಿಕೊಂಡಿದ್ದಾರೆ.
ಫೇಕ್ ಸುದ್ದಿಗಳನ್ನು ಮಾಡೋರ ವಿರುದ್ಧ ಮೇಘನಾ ರಾಜ್ ಹಾಗೂ ವಿಜಯ ರಾಘವೇಂದ್ರ ಲೀಗಲ್ ಆಗಿ ಆಕ್ಞನ್ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ಕುರಿತಾಗಿ ಪ್ರೆಸ್ ಮೀಟ್ ತೆಗೆದುಕೊಳ್ಳುವ ಬಗ್ಗೆ ಕೂಡ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ರಾಜ್ ವಿಜಯ್ ರಾಘವೇಂದ್ರ 2ನೇ ಮದುವೆ ಆಗಲಿದ್ದಾರೆ ಎಂದು ಫೇಕ್ ನ್ಯೂಸ್ ಮಾಡೋರಿಗೆ ತಕ್ಕ ಪಾಠ ಕಲಿಸಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ಮೇಘನಾ ರಾಜ್, 'ಇವೆಲ್ಲಾ ಫೇಕ್ ನ್ಯೂಸ್. ನಾನು ವಿಜಯರಾಘವೇಂದ್ರ ಅವರನ್ನು ಮದುವೆ ಆಗುವ ಬಗ್ಗೆ ಯೋಚಿಸಿಲ್ಲ. ಇದು ಶುದ್ಧ ಸುಳ್ಳು ಸುದ್ದಿ. ನಾವು ಸಿನಿಮಾದಲ್ಲಿ ಸ್ನೇಹಿತರು ಅಷ್ಟೆ. ನಮ್ಮಿಬ್ಬರ ನಡುವೆ ಆ ರೀತಿ ಯಾವುದೇ ಭಾವನೆಗಳು ಇಲ್ಲ' ಎಂದಿದ್ದಾರೆ.
'ನಾನು ಏನಾದ್ರೂ ಮಾತನಾಡಿದರೆ, ಅದನ್ನು ಇನ್ನೊಂದು ರೀತಿ ತಿರುಚಿಬಿಡುತ್ತಾರೆ. ನಾವು ಹೇಳಿದ್ದು ಒಂದು ರೀತಿ ಆದರೆ ಅದು ಪ್ರಸಾರ ಆಗೋದೇ ಇನ್ನೊಂದು ರೀತಿ. ನಾವು ಹೇಳಿದಂತೆ ತೋರಿಸಿದರೆ ಅದು ಖುಷಿ. ಆದರೆ ಅದನ್ನು ತಮಗೆ ಹೇಗೆ ಬೇಕೋ ಹಾಗೆ ತಿರುಚಿದರೆ ನಾನು ಏನು ಮಾಡ್ಲಿಕ್ಕೆ ಆಗಲ್ಲ. ಅಂಥವರಿಗೆ ಏನ್ ಹೇಳಿಬೇಕು ಅಂತನ್ನೂ ನನಗೆ ಗೊತ್ತಿಲ್ಲ. ಹೀಗಾಗಿ ನಾನು ಇದುವರೆಗೂ ಮಾಧ್ಯಮದ ಮುಂದೆ ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ' ಎಂದಿದ್ದಾರೆ ಮೇಘನಾ ರಾಜ್.
ಇನ್ನೂ ಫೇಸ್ ನ್ಯೂಸ್ ಮಾಡೋರ ಬಗ್ಗೆ ಕೇಳಿದಾಗ, 'ನಮ್ಮ ಗಮನಕ್ಕೆ ಈಗ ಈ ವಿಚಾರ ಬಂದಿದೆ. ಮುಂದಿನ ದಿನಗಳಲ್ಲಿ ಇದು ಹೀಗೆ ಮುಂದುವರೆದರೆ ನಾವು ಅಂಥವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತೇವೆ' ಎಂದಿದ್ದಾರೆ.
ಒಟ್ಟಿನಲ್ಲಿ ಮೇಘನಾ ರಾಜ್ ಹಾಗೂ ವಿಜಯ ರಾಘವೇಂದ್ರ ಇಬ್ಬರ ಬಗ್ಗೆ ಸುಳ್ಳು ಸುದ್ದಿ ಹರಡೋರ ವಿರುದ್ಧ ಮೇಘನಾ ರಾಜ್ ಹಾಗೂ ವಿಜಯರಾಘವೇಂದ್ರ ತಿರುಗಿ ಬಿದ್ದಿದ್ದಾರೆ. ಇದು ಹೀಗೆ ಮುಂದುವರೆದರೆ ಸುಳ್ಳು ಸುದ್ದಿ ಹರಡೋರ ವಿರುದ್ಧ ಮೇಘನಾ ರಾಜ್ ಹಾಗೂ ವಿಜಯರಾಘವೇಂದ್ರ ಕ್ರಮ ತೆಗೆದುಕೊಳ್ಳುವುದು ಗ್ಯಾರಂಟಿ.












Click it and Unblock the Notifications