ಮೇಘನಾ ರಾಜ್ 2ನೇ ಮದುವೆ ಬಗ್ಗೆ ಮಾತನಾಡಿದ್ದವರಿಗೆ... Meghana Raj
ಮೇಘನಾ ರಾಜ್ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ, ಹಾಗೇ ಮೇಘನಾ ರಾಜ್ ಅವರ ತಂದೆ & ನಟಿ ಮೇಘನಾ ರಾಜ್ ಅವರ ತಾಯಿ ಕೂಡ ಕನ್ನಡ ಸಿನಿಮಾ ರಂಗದ ದೊಡ್ಡ ತಾರೆಯರು. ವಿಷ್ಣುವರ್ಧನ್ ಅವರ ಹತ್ತಾರು ಸಿನಿಮಾದಲ್ಲಿ ಇವರು ನಟಿಸಿದ್ದವರು. ನಟಿ ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ನೂರಾರು ಸಿನಿಮಾನ ಮಾಡಿದ್ದರೆ, ನಟಿ ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಾಯ್ ಕೂಡ ಕನ್ನಡ ಸಿನಿಮಾ ರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ನಟಿ ಮೇಘನಾ ರಾಜ್ ಅವರು 1990ರ ಮೇ 3 ರಂದು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಹುಟ್ಟಿದರು. ನಟಿ ಮೇಘನಾ ರಾಜ್ ಅವರು 2018 ರಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗೆ ಸಪ್ತಪದಿ ತುಳಿದು ಮದುವೆ ಕೂಡ ಆಗಿದ್ದರು. ಆದರೆ ವಿಧಿಯ ಕೈವಾಡ ಚಿರಂಜೀವಿ ಸರ್ಜಾ ಅವರು 2020ರ ಜೂನ್ 7 ರಂದು ಅಕಾಲಿಕ ಮರಣ ಹೊಂದಿದರು. ಹೀಗೆ ಕನ್ನಡದ ನಟಿ ಮೇಘನಾ ಅವರ ಬಾಳಲ್ಲಿ ಘೋರ ದುರಂತ ಒಂದು ನಡೆದು ಹೋಗಿತ್ತು. ಹೀಗಿದ್ದಾಗಲೇ, ಮೇಘನಾ ರಾಜ್ 2ನೇ ಮದುವೆ ಬಗ್ಗೆ ಮಾತನಾಡಿದ್ದವರಿಗೆ...

ಮೇಘನಾ ರಾಜ್ 2ನೇ ಮದುವೆ...
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರು ಹಲವು ವರ್ಷಗಳ ಕಾಲ ಲವ್ ಮಾಡಿ ಮದುವೆ ಆಗಿದ್ದರು. ನಟಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರನ್ನ ಮದುವೆ ಆಗಲು ಮನೆಯವರನ್ನ ಒಪ್ಪಿಸಲು ಸಾಕಷ್ಟು ಪರದಾಡಿದ್ದರಂತೆ. ಆದ್ರೆ ಇಷ್ಟು ಪ್ರೀತಿ, ವಾತ್ಸಲ್ಯ ತೋರಿಸುತ್ತಿದ್ದ ಜೋಡಿಯನ್ನೇ ಆ ದೇವರು & ವಿಧಿ ದೂರ ಮಾಡಿಬಿಟ್ಟರು. ಹೀಗಿದ್ದಾಗಲೇ, ಮೇಘನಾ ರಾಜ್ 2ನೇ ಮದುವೆ ಬಗ್ಗೆ ಮಾತನಾಡಿದ್ದವರಿಗೆ...
ಮೇಘನಾ ರಾಜ್ ಅಭಿಮಾನಿಗಳಿಂದ...
ಸೋಷಿಯಲ್ ಮೀಡಿಯಾದಲ್ಲಿ ಇದೀಗ ಮೇಘನಾ ರಾಜ್ 2ನೇ ಮದುವೆ ಬಗ್ಗೆ ಕೆಲವು ಪೇಜ್ & ಟ್ರೋಲರ್ಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಮೇಘನಾ ರಾಜ್ 2ನೇ ಮದುವೆ ಬಗ್ಗೆ ಮಾತನಾಡಿದ್ದವರಿಗೆ ಇದೀಗ ಖುದ್ದು ಮೇಘನಾ ರಾಜ್ ಅವರ ಅಭಿಮಾನಿಗಳು ಸರಿಯಾಗಿ ಕ್ಲಾಸ್ ತೆಗೆದುಕೊಂಡು ವಾರ್ನಿಂಗ್ ಕೊಟ್ಟಿದ್ದಾರೆ. ಹಾಗೇ ಒಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂಬ ಬಗ್ಗೆ ಕೂಡ ಸರಿಯಾದ ಸಂದೇಶ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಸುಳ್ಳು, ಸುಳ್ಳು ಸುದ್ದಿ ಹಬ್ಬಿಸಿದರೆ ಸರಿ ಇರಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಒಟ್ನಲ್ಲಿ ಮೇಘನಾ ರಾಜ್ ಅವರು ಇದೀಗ ತಮ್ಮ ಮಗನ ಭವಿಷ್ಯದ ಕಡೆ ಗಮನ ಹರಿಸಿದ್ದಾರೆ. ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ನಂತರ ಮೇಘನಾ ರಾಜ್ ಅವರಿಗೆ ಜಗತ್ತೇ ತಲೆ ಮೇಲೆ ಬಿದ್ದಂತೆ ಆಗಿತ್ತು. ಆಗಲೇ ಇಡೀ ಕನ್ನಡ ಸಿನಿಮಾ ರಂಗ ಮೇಘನಾ ರಾಜ್ ಬೆನ್ನಿಗೆ ನಿಂತು ಸಮಾಧಾನ ಹೇಳಿತ್ತು & ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಹೀಗಿದ್ದಾಗಲೇ ಮೇಘನಾ ರಾಜ್ ಅವರಿಗೆ ಮಗನಾಗಿ ಜನಿಸಿದ ರಾಯನ್ ರಾಜ್ ಸರ್ಜಾ ಹೊಸ ಸಂಭ್ರಮ ತಂದಿದ್ದಾನೆ. ಮಗನ ಆರೈಕೆಯ ಮಾಡುತ್ತಾ, ಮೇಘನಾ ರಾಜ್ ಅವರು ನಟನೆಯಲ್ಲಿಯೂ ಇದೀಗ ಮತ್ತೆ ಬ್ಯುಸಿಯಾಗಿದ್ದಾರೆ.












Click it and Unblock the Notifications