Vicky Kaushal: ಕತ್ರಿನಾ ಕೈಫ್ ಬಗ್ಗೆ ಪತಿ ವಿಕ್ಕಿ ಕೌಶಲ್ ಹೀಗೆ ಹೇಳೋದಾ? ಬಿದ್ದು ಬಿದ್ದು ನಕ್ಕ ಫ್ಯಾನ್ಸ್

ಬಾಲಿವುಡ್ ನಟ ವಿಕ್ಕಿ ಕೌಶಲ್ ನಟನೆಯ 'ಛಾಮ' ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗಲಿದೆ. ಇವರಿಗೆ ಜೋಡಿಯಾಗಿ ಸ್ಯಾಂಡಲ್‌ವುಡ್ ನಟಿ ರಶ್ಮಿಕಾ ಮಂದಣ್ಣ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಹಾಗೂ ವಿಶಾಲ್ ಮೊದಲ ಬಾರಿಗೆ ಒಟ್ಟಿಗೆ ಮಾಡುತ್ತಿರುವ ಸಿನಿಮಾ ಇದಾಗಿದ್ದು ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಅಲ್ಲದೆ ಇತ್ತೀಚೆಗೆ ವಿಕ್ಕಿ ಕೌಶಲ್ ಅವರು ಹಂಚಿಕೊಂಡ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿಕ್ಕಿ ತಮ್ಮ ಪತ್ನಿ ಕತ್ರಿನಾ ಕೈಫ್ ಬಗ್ಗೆ ಹೇಳಿದ್ದಾರೆ. ಹಾಗಾದರೆ ಕತ್ರಿನಾ ಕೈಫ್ ಬಗ್ಗೆ ಪತಿ ವಿಕ್ಕಿ ಕೌಶಲ್ ಹೇಳಿದ್ದೇನು? ಅವರ ಫ್ಯಾನ್ಸ್ ನಕ್ಕಿದ್ದು ಯಾಕೆ?

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಆಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೆ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಯಾಕೆಂದರೆ ಇವರಿಬ್ಬರ ನಡುವೆ ತುಂಬಾ ವಯಸ್ಸಿನ ಅಂತರವಿದೆ. ಆದರೂ ಕೂಡ ವಿಕ್ಕಿ ಹಾಗೂ ಕತ್ರಿನಾ ಸಪ್ತಪದಿ ತುಳಿದು ಸಾಕಷ್ಟು ಸುದ್ದಿ ಮಾಡಿದ್ದಾರೆ. ಇದೀಗ ಪತಿ ವಿಕ್ಕಿ ಕತ್ರಿನಾ ಬಗ್ಗೆ ಹೇಳಿದ ಆ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

vicky kaushal talking about katrina kaif goes viral

ಹೌದು... ಪತ್ನಿ ಕತ್ರಿನಾ ಅವರನ್ನು ವಿಕ್ಕಿ ಕೌಶಲ್ ಪ್ರಾಣಿಗೆ ಹೋಲಿಸಿದ್ದಾರೆ. ಈ ವಿಡಿಯೋವನ್ನು ಕತ್ರಿನಾ ಕೈಫ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ನಕ್ಕಿದ್ದಾರೆ. ಈ ವಿಡಿಯೋಕ್ಕೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಪ್ರೀತಿಸಿ ಮದುವೆಯಾದವರು. ಮದುವೆ ಆಗುವವರೆಗೂ ಅವರು ತಮ್ಮ ರಿಲೇಷನ್‌ಶಿಪ್‌ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿತ್ತು. ಆಗಷ್ಟೇ ಇವರಿಬ್ಬರ ಪ್ರೀತಿಯ ರಹಸ್ಯ ಬಯಲಾಗಿದ್ದು. ನಿಜ ಹೇಳಬೇಕು ಅಂದರೆ ಕತ್ರಿನಾ ಕೈಫ್ ವಿಕ್ಕಿಗಿಂತ ಐದು ವರ್ಷ ದೊಡ್ಡವರು. ಹಾಗಿದ್ದರೂ ಕೂಡ ಇವರು ಪ್ರೀತಿಸಿ ಮದುವೆಯಾಗಿದ್ದಾರೆ.

ಇವರಿಬ್ಬರ ಪ್ರೀತಿಯ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಇದ್ದವು. ಆದರೂ ಕೂಡ ಇವರಿಬ್ಬರ ನಡುವಿನ ವಯಸ್ಸಿನ ಅಂತರದಿಂದಾಗಿ ಮದುವೆ ಆಗುವುದಿಲ್ಲ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಅವರಿಬ್ಬರು ಮದುವೆ ವಿಚಾರ ತಿಳಿದು ಅಭಿಮಾನಿಗಳು ಶಾಕ್ ಆಗಿರುವುದು ಇದೆ.

2021ರಲ್ಲಿ ವಿವಾಹವಾದ ವಿಕ್ಕಿ ಇದೀಗ ಕತ್ರಿನಾ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ 'ವಿಚಿತ್ರ ಪ್ರಾಣಿ ನೀವು' ಎಂದು ವಿಕ್ಕಿ ಕತ್ರಿನಾಗೆ ಹೇಳಿದ್ದಾರೆ. ಈ ವಿಡಿಯೋವನ್ನು ಸ್ವತ: ಕತ್ರಿನಾ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಫ್ಯಾನ್ಸ್ ಸಿಕ್ಕಾಪಟ್ಟೆ ನಕ್ಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+