Chandra Mohan: ಹೃದಯಾಘಾತದಿಂದ ಮೃತಪಟ್ಟ ತೆಲುಗಿನ ಪ್ರಸಿದ್ಧ ನಟ

ಹೈದರಾಬಾದ್‌ ನವೆಂಬರ್ 11: ತೆಲುಗಿನ ಪ್ರಸಿದ್ಧ ನಟ ಚಂದ್ರ ಮೋಹನ್ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೆಳಗ್ಗೆ 9.45ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಚಂದ್ರಮೋಹನ್ ಅವರಿಗೆ 82 ವರ್ಷ. ಅವರು ಪತ್ನಿ ಜಲಂಧರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಚಂದ್ರಮೋಹನ್ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲಕಾಲ ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.

Veteran Telugu actor Chandra Mohan passed away

ಚಂದ್ರಮೋಹನ್ ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

1966 ರಲ್ಲಿ ಚಂದ್ರಮೋಹನ್ ಅವರ ಚಲನಚಿತ್ರ ವೃತ್ತಿಜೀವನ ಆರಂಭವಾಯಿತು. ಆರಂಭದಲ್ಲಿ ಅವರು ಕರಲುರತ್ನಂ ಚಲನಚಿತ್ರದಿಂದ ಸಿನಿ ಜರ್ನಿ ಆರಂಭಿಸಿದರು. ಅಂದಿನಿಂದ ಅವರು ಸಹ-ನಾಯಕ, ನಾಯಕ, ಹಾಸ್ಯನಟ ಮತ್ತು ಪಾತ್ರ ನಟನಾಗಿ ಅನೇಕ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಚಂದ್ರಮೋಹನ್ ಅವರು ತಮ್ಮ ಹಾಸ್ಯ ಪಾತ್ರಗಳಿಗಾಗಿ ಅಭಿಮಾನಿಗಳ ಮನ ಗೆದ್ದವರು. ಅಭಿನಯದ ಮೂಲಕ ದೀರ್ಘಕಾಲ ನೆನಪಿನಲ್ಲಿ ಉಳಿಯುವ ನಟರಲ್ಲಿ ಚಂದ್ರಮೋಹನ್ ಪ್ರಮುಖರು. ಚಂದ್ರಮೋಹನ್ ಹೊಸ ಹೀರೋಗಳಿಗೆ ಲಕ್ಕಿ ಹೀರೋ ಎನ್ನುತ್ತಾರೆ. ಯಾಕೆಂದರೆ ಜಯಪ್ರದಾ ಮತ್ತು ಶ್ರೀದೇವಿ ತಮ್ಮ ಹದಿನಾರನೇ ವಯಸ್ಸಿನಲ್ಲಿ ಚಂದ್ರಮೋಹನ್ ಅವರೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಉನ್ನತ ಸ್ಥಾನಕ್ಕೆ ಏರಿದರು.

ಚಂದ್ರಮೋಹನ್ ಅವರ ನಿಜವಾದ ಹೆಸರು ಮಲ್ಲಂಪಲ್ಲಿ ಚಂದ್ರಶೇಖರ ರಾವ್. ತೆಲುಗು ಚಿತ್ರರಂಗದಲ್ಲಿ ಹಲವು ವಿಶಿಷ್ಟ ಪಾತ್ರಗಳನ್ನು ನಿರ್ವಹಿಸಿರುವ ನಟರಾಗಿ ಗುರುತಿಸಿಕೊಂಡಿದ್ದಾರೆ. ಅವರು 175 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮತ್ತು ಒಟ್ಟು 932 ಚಿತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯವಾಗಿ ಹಾಸ್ಯ ಪಾತ್ರಗಳ ಮೂಲಕ ಚಂದ್ರಮೋಹನ್ ಬಹುಕಾಲ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಚಂದ್ರಮೋಹನ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಮನೆಗೆ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+