Varthur Santosh: ಕೊನೆಗೂ ಗುಡ್ ನ್ಯೂಸ್ ಕೊಟ್ಟ ವರ್ತೂರು ಸಂತೋಷ್: ತಾಯಿ ಫುಲ್ ಖುಷ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ರ ವಿನ್ನರ್ ಪಟ್ಟವನ್ನು ಹಳ್ಳಿ ಹೈದ ಹನುಮಂತ ಸ್ವೀಕರಿಸಿದ್ದಾರೆ. ರನ್ನರ್ ಅಪ್ ಪಟ್ಟವನ್ನು ತ್ರಿವಿಕ್ರಮ್ ಪಡೆದುಕೊಂಡಿದ್ದಾರೆ. ಇದರ ಮಧ್ಯೆ ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಿದ್ದಾರೆ. ಹಳ್ಳಿ ಪ್ರತಿಭೆಯಾಗಿರುವ ವರ್ತೂರು ಸಂತೋಷ್ ಮತ್ತೆ ಸುದ್ದಿಯಲ್ಲಿದ್ದಾರೆ.
ಕಳೆದ ಬಿಗ್ ಬಾಸ್ ಸೀಸನ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ದೊಡ್ಮನೆಗೆ ಕಾಲಿಟ್ಟಾಗಿನಿಂದಲೂ ವಿವಾದಗಳಿಂದಲೇ ಸದ್ದು ಮಾಡಿದ್ರು. ಹುಲಿ ಉಗುರಿನ ವಿವಾದ ವರ್ತೂರು ಸಂತೋಷ್ನನ್ನು ಪೊಲೀಸರು ಬಂಧಿಸುವಂತೆ ಮಾಡಿತ್ತು. ಇಡೀ ಬಿಗ್ ಬಾಸ್ ಇತಿಹಾಸದಲ್ಲೇ ನಡೆಯದ ಘಟನೆಯೊಂದು ನಡೆದು ಹೋಗಿತ್ತು. ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯ ಬಂಧನವಾಯ್ತು. ಅಲ್ಲದೇ ವರ್ತೂರ್ ಸಂತೋಷ್ ಅವರು ರಾತ್ರೋ ರಾತ್ರಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ರು.

ಎಲ್ಲಾ ವಿವಾದದ ಬಳಿಕ ಮತ್ತೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ದೊಡ್ಮನೆ ಸೇರಿದ್ರು. ಇದಾದ ಬಳಿಕ ವರ್ತೂರು ಸಂತೋಷ್ ಮದುವೆ ಹಾಗೂ ವಿಚ್ಛೇದನ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಇದೀಗ ವರ್ತೂರು ಸಂತೋಷ್ ಎರಡನೇ ಮದುವೆಗೆ ರೆಡಿಯಾಗಿದ್ದಾರೆ. ಶೀಘ್ರವೇ ಹಸೆಮಣೆ ಏರೋದಾಗಿ ವರ್ತೂರು ಸಂತೋಷ್ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಇಬ್ಬರು ತುಂಬಾ ಕ್ಲೋಸ್ ಆಗಿದ್ರು. ಅಲ್ಲದೇ ಬಿಗ್ ಬಾಸ್ ಬಳಿಕ ಇಬ್ಬರು ಸಾಕಷ್ಟು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ರು.
ಇನ್ನೂ ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಅವರನ್ನ ನೋಡಿದ ಜನ ಹೊರಗೆ ಬಂದ್ಮೇಲೆ ಇಬ್ಬರೂ ಮದುವೆ ಆಗ್ತಾರೆ ಅಂತಿದ್ರು. ದೊಡ್ಮನೆಯಿಂದ ಹೊರಗೆ ಬಂದ್ಮೇಲೆ ಇಬ್ಬರ ಸ್ನೇಹ ಮುಂದುವರೆದಿತ್ತು. ಆಗಾಗ ಭೇಟಿಯಾಗೋದನ್ನ ಕಂಡು ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ನಾನು ಪ್ರೀತಿ ಮಾಡ್ತೀರೋ ಹುಡುಗಿ ತನಿಷಾ ಅಲ್ಲ ಎಂದು ವರ್ತೂರು ಸಂತೋಷ್ ಹೇಳಿವ ಮೂಲಕ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ರು. ಇದೀಗ ವರ್ತೂರ್ ಸಂತೋಷ್ ಕೊಟ್ಟ ಗುಡ್ ನ್ಯೂಸ್ ನಿಂದಾಗಿ ಸಂತೋಷ್ ತಾಯಿ ಫುಲ್ ಖುಷಿಯಾಗಿದ್ದಾರೆ.
ಬಿಗ್ಬಾಸ್ ಮೂಲಕವೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಈಗ ಸಖತ್ ಸುದ್ದಿಯಲ್ಲಿದ್ದಾರೆ. ವರ್ತೂರು ಸಂತೋಷ್ ಸಖತ್ ಬ್ಯೂಸಿಯಾಗಿದ್ದಾರೆ. ಆ ಬ್ಯುಸಿಯ ನಡುವೆಯೂ ತಮ್ಮ ತಾಯಿಯ ಬಹುದೊಡ್ಡ ಆಸೆಯನ್ನು ಸಂತೋಷ್ ಅವರು ಈಡೇರಿಸಿದ್ದಾರೆ. ಅಮ್ಮನ ಆಸೆಯಂತೆ, ಅವರಿಗೆ ಬೇಕಾದ ಹಾಗೇ ಬರೋಬ್ಬರಿ ಎಂಟು ಕೋಟಿ ರೂಪಾಯಿಯನ್ನು ಖರ್ಚು ಮಾಡಿ ಮನೆಯನ್ನು ಕಟ್ಟಿಸಿದ್ದಾರೆ.
ಇದೀಗ ವರ್ತುರು ಸಂತೋಷ್ ಅವರ ಹೊಚ್ಚ ಹೊಸ ಮನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾವು ಅಮ್ಮನಿಗಾಗಿ ಕಟ್ಟಿಸಿದ ಐಷಾರಾಮಿ ಮನೆಯನ್ನು ವೀಕ್ಷಕರಿಗೆ ತೋರಿಸಿದ್ದಾರೆ. ಆ ಮನೆಗೆ 7 ರಿಂದ 8 ಕೋಟಿಯ ಖರ್ಚಾಗಿದೆ. ಇದನ್ನು ನನ್ನ ಅಮ್ಮನ ಆಸೆಯಂತೆ ಕಟ್ಟಿದ್ದೇನೆ. ಇಂಟೀರಿಯರ್ ಸೇರಿದಂತೆ ಡಿಸೈನ್ ಎಲ್ಲವೂ ಅಮ್ಮನ ಆಸೆಯಂತೆಯೇ ಇದೆ. ಯಾವುದರಲ್ಲಿಯೂ ಕಾಂಪ್ರಮೈಸ್ ಆಗಿಲ್ಲ. ಗುಣಮಟ್ಟದ ವಸ್ತುಗಳನ್ನೇ ಬಳಸಲಾಗಿದೆ. ಸಂಪೂರ್ಣ ಟೀಕ್ವುಡ್ನಿಂದ ಮಾಡಲಾಗಿದೆ. ಅದರಲ್ಲಿಯೂ ದೇವರ ಮನೆಯನ್ನು ವಿಶೇಷ ರೀತಿಯಲ್ಲಿ ಕಟ್ಟಲಾಗಿದೆ. ದೇವರ ಕೋಣೆಯನ್ನು ಸಿಂಗಲ್ ಮರದಲ್ಲಿ ಮಾಡಲಾಗಿದೆ. ಇದಕ್ಕೆ ಸುಮಾರು 150-200 ವರ್ಷಗಳ ಹಳೆಯ ಟೀಕ್ವುಡ್ ಬಳಸಲಾಗಿದೆ ಎಂದಿದ್ದಾರೆ.











Click it and Unblock the Notifications