ಕಲ್ಕಿ ಅಲ್ಲ ಸತ್ಯ: ಯುಐ ಸಿನಿಮಾದಲ್ಲಿ ಉಪ್ಪಿ ಹೆಸರಿನ ಸೀಕ್ರೇಟ್‌ ರಿವೀಲ್‌

ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್‌ ಉಪೇಂದ್ರ ನಟನೆಯ ಹಾಗೂ ನಿರ್ದೇಶನದ ಯುಐ ಸಿನಿಮಾ ಇದೇ ತಿಂಗಳು ಅಂದರೆ ಡಿಸೆಂಬರ್‌ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕೆಲವು ವರ್ಷಗಳ ಅಂತರದಲ್ಲಿ ಉಪೇಂದ್ರ ನಿರ್ದೇಶನ ಚಿತ್ರ ತೆರೆ ಕಾಣಲು ಸಿದ್ಧವಾಗಿದ್ದು, ಉಪ್ಪಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಯುಐ ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಬಹಳಷ್ಟು ನಿರೀಕ್ಷೆಯಿದ್ದು, ಸಿನಿಮಾದ ಒಂದು ಭಾಗದ ಝಲಕ್ಅನ್ನು ಈಗಾಗಲೇ ತೋರಿಸಲಾಗಿದೆ. ಟ್ರೈಲರ್‌ ಬದಲಿಗೆ ಯುಐ ವಾರ್ನರ್‌ಅನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಗಿದ್ದು, ವಾರ್ನರೇ ಹೀಗಿದ್ದರೆ, ಇನ್ನು ಸಿನಿಮಾ ಹೇಗಿರಬಹುದು ಎಂದು ಪ್ರೇಕ್ಷಕರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಯುಐ ವಾರ್ನರ್‌ನಲ್ಲಿ 2040ರ ದೃಶ್ಯಗಳನ್ನು ತೋರಿಸಲಾಗಿದೆ.

Upendra s Upcoming Film UI Reveals Character Name Satya Ahead Of Release

ನಮ್ಮ ಇಡೀ ಜಗತ್ತು 2040 ರಲ್ಲಿ ಯಾವ ರೀತಿಗೆ ತಿರುತ್ತದೆ ಹಾಗೂ ಜನರ ಪರಿಸ್ಥಿತಿ ಹಾಗೂ ಮನಸ್ಥಿತಿ ಹೇಗಿರುತ್ತದೆ ಎನ್ನುವುದರ ಬಗ್ಗೆ ಯುಐ ವಾರ್ನರ್‌ನಲ್ಲಿ ಉಪೇಂದ್ರ ಚಿತ್ರಿಸಿದ್ದಾರೆ. ಹೀಗಾಗಿ ಯುಐ ಸಿನಿಮಾ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲಿದ್ದು, ವಾರ್ನರ್‌ನಲ್ಲಿ ತೋರಿಸಿರುವ ಪ್ರತಿ ದೃಶ್ಯಗಳನ್ನು ಉಪ್ಪಿ ಅಭಿಮಾನಿಗಳು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಿನಿಮಾದ ಬಗ್ಗೆ ಸಿಗಬಹುದಾದ ಹಿಂಟ್‌ಗಳನ್ನು ಹುಡುಕುತ್ತಿದ್ದಾರೆ.

ಇನ್ನು ಈ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಯುಐ ಸಿನಿಮಾದಲ್ಲಿ ಉಪೇಂದ್ರ ಪಾತ್ರವೇನು..? ಪಾತ್ರದ ಹೆಸರೇನು ಎನ್ನುವುದರ ಬಗ್ಗೆ ಹಲವರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಈಗಾಗಲೇ ವಾರ್ನರ್‌ನಲ್ಲಿ 2040ರ ಚಿತ್ರಣ ತೋರಿಸಿರುವ ಕಾರಣ ಸಿನಿಮಾದಲ್ಲಿ ಉಪೇಂದ್ರ ಹೆಸರು ಕಲ್ಕಿ ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಗೆಸ್‌ ತಪ್ಪಾಗಿದ್ದು, ಯುಐ ಸಿನಿಮಾದಲ್ಲಿ ಉಪೇಂದ್ರ ಹೆಸರು ಸತ್ಯ ಎನ್ನುವುದು ಬಹಿರಂಗವಾಗಿದೆ.

Upendra s Upcoming Film UI Reveals Character Name Satya Ahead Of Release

ಈ ಬಗ್ಗೆ ಸ್ವತಃ ನಟ ಉಪೇಂದ್ರ ಸಮಯ ನ್ಯೂಸ್‌ ಮಾತನಾಡಿದ್ದು, 'ಈ ಹೆಸರಿನ ಚರ್ಚೆ ಬಗ್ಗೆ ಥಿಯೇಟರ್‌ನಲ್ಲಿ ಉತ್ತರ ಸಿಗುತ್ತದೆ. ಇಲ್ಲಿ ಈಗ ಬಾಯಲ್ಲಿ ಹೇಳಿದೆ ಚೆನ್ನಾಗಿರಲ್ಲ' ಎಂದು ಹೇಳುವ ಮೂಲಕ ಪರೋಕ್ಷವಾಗಿ ಸತ್ಯ ಎನ್ನುವ ಹೆಸರನ್ನು ಉಪೇಂದ್ರ ಒಪ್ಪಿಕೊಂಡಿದ್ದಾರೆ. ಇನ್ನು ಯುಐ ಸಿನಿಮಾದಲ್ಲಿ ಉಪೇಂದ್ರ ಸತ್ಯ, ಕಲ್ಕಿ ಹಾಗೂ ಸರ್ವಾಧಿಕಾರಿ ಎನ್ನುವ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ ಎನ್ನುವುದು ಯುಐ ವಾರ್ನರ್‌ ವೀಕ್ಷಿಸಿರುವ ಸಿನಿಪ್ರಿಯರ ಲೆಕ್ಕಾಚಾರವಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಯುಐ ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲು ಸಜ್ಜಾಗಿದ್ದರೂ ಸಹ ಇತರ ಸಿನಿಮಾಗಳಂತೆ ಈ ಸಿನಿಮಾಗೆ ಚಿತ್ರತಂಡ ಹೆಚ್ಚಿನ ಮಟ್ಟಿನ ಪ್ರಚಾರ ನೀಡುತ್ತಿಲ್ಲ. ಒಂದು ವೇಳೆ ಸಿನಿಮಾ ಪ್ರಚಾರದ ಇವೆಂಟ್‌ಗಳನ್ನು ಇಟ್ಟುಕೊಂಡರೆ ಚಿತ್ರತಂಡದ ಯಾರಾದರೂ ಸಿನಿಮಾದ ಕೆಲವು ಸೀಕ್ರೇಟ್‌ಗಳನ್ನು ಬಿಟ್ಟುಕೊಡಬಹುದು ಎನ್ನುವ ಆಲೋಚನೆ ಮೇಲೆ ಸಿನಿಮಾ ಪ್ರಚಾರವನ್ನು ಅತಿಯಾಗಿ ಮಾಡುತ್ತಿಲ್ಲ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಅದೇನೇ ಇದ್ದರೂ ಯುಐ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದಂತೂ ಸತ್ಯ ಎನ್ನುವುದು ಉಪೇಂದ್ರ ಅಭಿಮಾನಿಗಳ ಅಭಿಪ್ರಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+