Deepika Das: ನಟಿ ದೀಪಿಕಾ ದಾಸ್‌ ಗಂಡನ ವಿರುದ್ಧ ಗಂಭೀರ ಆರೋಪ

ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರುತೆರೆ ನಟಿ ದೀಪಿಕಾ ದಾಸ್ ತಾಯಿ ಪದ್ಮಲತಾ ಅವರಿಗೆ ಬೆದರಿಕೆ ಕರೆಗಳು ಬಂದ ಆರೋಪದ ಮೇಲೆ ದೂರು ದಾಖಲಾಗಿದೆ. ಕಿಡಿಗೇಡಿಯೊಬ್ಬ ನನ್ನ ಮಗಳು ಮತ್ತು ಅಳಿಯನ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ದೀಪಿಕಾ ದಾಸ್ ತಾಯಿ ಪದ್ಮಲತಾ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ.

ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ದಾಖಲಾಗಿದ್ದು, ಈ ಕೃತ್ಯ ಎಸೆಗಿದ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎಫ್ಐಆರ್‌ನಲ್ಲಿ ದೀಪಿಕಾ ದಾಸ್‌ ತಾಯಿ ತಮ್ಮ ಅಳಿಯನ ವಿರುದ್ಧ ವ್ಯಕ್ತಿಯೊಬ್ಬ ಮಾಡಿದ ಆರೋಪದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಪ್ರಕರಣದ ಆರೋಪಿಯು ಕಿರುತೆರೆ ನಟಿ ದೀಪಿಕಾ ದಾಸ್ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ.

Unknown Person Called Deepika Das s Mother And Allegations Against Deepak Kumar

ರಿಯಲ್​ ಎಸ್ಟೇಟ್​ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಿಕಾ ದಾಸ್ ಪತಿ ದೀಪಕ್ ಕುಮಾರ್‌, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಡಾವಣೆಗಳನ್ನು ಮಾಡಿ, ಜನರಿಗೆ ಮೋಸ ಮಾಡಿ, ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಆರೋಪಿಸಿದ್ದಾನೆ. ಈ ಮೂಲಕ ದೀಪಕ್ ಕುಮಾರ್‌ ಜನರಿಗೆ ಮೋಸ ಮಾಡಿದ್ದಾನೆ ಎಂದು ನೇರವಾಗಿ ದೀಪಿಕಾ ದಾಸ್ ತಾಯಿ ಪದ್ಮಲತಾ ಅವರಿಗೆ ಹೇಳಿದ್ದಾನೆ. ಅಲ್ಲದೇ ನಿಮ್ಮ ಮಗಳನ್ನು ಯಾಕೆ ಮದುವೆ ಮಾಡಿಕೊಟ್ಟಿದ್ದೀರಿ ಎಂದು ಸಹ ಪ್ರಶ್ನಿಸಿದ್ದಾನೆ ಎನ್ನಲಾಗಿದೆ.

ಇನ್ನು ಅದೇ ವ್ಯಕ್ತಿ ದೀಪಿಕಾ ದಾಸ್​ಗೂ ಕರೆ ಮಾಡಿ ದೀಪಕ್ ಕುಮಾರ್‌ ಬಗ್ಗೆ ನಿಮಗೆ ತಿಳಿದಿಲ್ಲವೇ ಪುನೀತ್ ರಾಜ್‌ಕುಮಾರ್‌ ಸಮಾಧಿ ಬಳಿ ಬಂದು ಆಣೆ ಮಾಡಿ ಹೇಳಿ ಎಂದು ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ನೀವು ನನಗೆ ಹಣ ನೀಡಿ, ಇಲ್ಲದೇ ಇದ್ದರೆ ನಾನು ಸಾಲಗಾರರ ಕಾಟಕ್ಕೆ ನಿಮ್ಮ ಹೆಸರು ಬರೆದು ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ತಿಳಿದು ಬಂದಿದೆ. ಸದ್ಯ ಈ ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನ ಹಳ್ಳಿ ಪೊಲೀಸರು ಅಸಲಿ ವಿಚಾರ ಏನು..? ಬೆದರಿಕೆ ಹಾಕಿರುವ ವ್ಯಕ್ತಿಯ ಉದ್ದೇಶ ಏನು ಎಂದು ತಿಳಿಯಲು ತನಿಖೆ ಆರಂಭಿಸಿದ್ದಾರೆ.

Unknown Person Called Deepika Das s Mother And Allegations Against Deepak Kumar

ಇನ್ನು ರಿಯಲ್​ ಎಸ್ಟೇಟ್​ ಮತ್ತು ಐಟಿ ಉದ್ಯಮದಲ್ಲಿ ತೊಡಗಿಕೊಂಡಿರುವ ದೀಪಿಕಾ ದಾಸ್ ಪತಿ ದೀಪಕ್ ಕುಮಾರ್‌ ತಮ್ಮ ಮೇಲಿನ ಆರೋಪಗಳ ಬಗ್ಗೆ ಈಗಾಗಲೇ ತಡೆಯಾಜ್ಞೆ ದಾವೆ ಹಾಕಿದ್ದು, ಇದು ವಿಚಾರಣೆ ಹಂತದಲ್ಲಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+