Meghana Raj: ಬಾಲಿವುಡ್‌ಗೂ ಮಾದರಿಯಾದ ವಿಜಯ್‌ ರಾಘವೇಂದ್ರ & ಮೇಘನಾ ರಾಜ್...

Meghana Raj & Vijay Raghavendra: ಸೆಲೆಬ್ರೆಟಿಗಳನ್ನು ಬಿಡಿ ಇಂದಿನ ಕಾಲದಲ್ಲಿ ಮದುವೆ ಆದರೆ ಮತ್ತೊಬ್ಬರೊಂದಿಗೆ ಸಂಬಂಧ ಹೊಂದುವುದು, ಡಿವೋರ್ಸ್ ನೀಡಿ ಎರಡನೇ ಮದುವೆ ಆಗುವುದು ಹೆಚ್ಚಾಗಿದೆ. ಕೆಲವರು ಮೂರು ಮದುವೆ ಆಗಿದ್ದು ನೋಡಿದ್ದೇವೆ. ಪ್ರೀತಿ, ಮದುವೆಗೆ ಬೆಲೆ ಎಲ್ಲಿದೆ? ಎಂಬಂತಹ ಸನ್ನಿವೇಶದಲ್ಲಿ ನಾವಿದ್ದೇವೆ. ಆದರೆ ಈ ಮಾತಿಗೆ ತದ್ವಿರದ್ಧವಾಗಿ ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಮತ್ತು ನಟಿ ಮೇಘನಾ ರಾಜ್ ಅವರ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮದುವೆ ಬಳಿಕ ಪ್ರೀತಿಸಿದವರಿಂದ ಕ್ಷುಲ್ಲಕ ಕಾರಣಕ್ಕೆ ದೂರವಾಗಿ ಡಿವೋರ್ಸ್ ಪಡೆಯುವುದು. ಬೇರೊಬ್ಬರೊಂದಿಗೆ ಕೂಡಿರುವುದು. ಮತ್ತೊಂದು ವಿವಾಹದ ಪ್ರವೃತ್ತಿ ಸಾಮಾನ್ಯ ಎಂಬಂತಾಗಿದೆ. ಇದು ಕೇವಲ ಸೆಲೆಬ್ರೆಟಿಗಳ ಬಾಳಲ್ಲಿ, ಬಾಲಿವುಡ್‌ನಲ್ಲಿ ಹೆಚ್ಚಾಗಿ ಕೇಳುತ್ತಿದ್ದೆವು. ಇದೀಗ ಇತರ ಚಿತ್ರರಂಗ ಮತ್ತು ಸಾರ್ವಜನಿಕರಲ್ಲೂ ಇಂತಹ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂತಹ ವಾತಾವರಣ ನಡುವೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ 2ನೇ ಮದುವೆ ಬಗ್ಗೆ ವಿಜಯ್ ರಾಘವೇಂದ್ರ ಮತ್ತು ಮೇಘನಾ ರಾಜ್ ಅವರ ಮೇಲೆ ಇಲ್ಲಸಲ್ಲದ ವದಂತಿಗಳು, ಸುಳ್ಳು ಕೇಳಿ ಬಂದರೂ ಸಹಿತ ಅವರು ನಡೆದುಕೊಂಡ ರೀತಿ, ಕೈಗೊಂಡ ನಿರ್ಧಾರಗಳಿಗೆ ಫ್ಯಾನ್ಸ್ ಹ್ಯಾಟ್ಸಾಪ್ ಹೇಳುತ್ತಿದ್ದಾರೆ.

True Love Beyond Loss Meghana Raj amp amp Vijay Raghavendra s Graceful Journey Wins Hearts

ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರು ಪ್ರೀತಿಸಿ ಮದುವೆ ಆದವರು. ಚಿರು ನಿಧನ ಬಳಿಕ ಮನೆಯಲ್ಲಿ ಸಾಕಷ್ಟು ಒತ್ತಾಯಗಳು ಬಂದರೂ ಸಹಿತ ಮೇಘನಾ ಅವರು ಮತ್ತೊಂದು ಮದುವೆ ಒಪ್ಪಿಲ್ಲ. ಈಗಲೂ ಚಿರು ನನ್ನೊಂದಿಗೆ ಇದ್ದಾರೆ ಎನ್ನುತ್ತಾರೆ. ಇತ್ತ ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರು ತೀರಿಕೊಂಡ ನಂತರ ಅವರ ಮೇಲೂ ಎರಡನೇ ಮದುವೆ ಆಗುವಂತೆ ಹೆಚ್ಚಿನ ಒತ್ತಡಗಳು ಕುಟುಂಬಸ್ಥರು, ಆಪ್ತರು ಕೇಳಿ ಬಂದರೂ ಸಹಿತ ಈ ಇಬ್ಬರು ಒತ್ತಡಕ್ಕೆ ಮಣಿಯಲ್ಲಿಲ್ಲ.

ಮೇಘನಾ & ವಿಜಯ್ ರಾಘವೇಂದ್ರ ನಡೆ ಮಾದರಿ

ಈ ಮಧ್ಯೆ ಮೇಘನಾ ರಾಜ್ ಮತ್ತು ವಿಜಯ್ ರಾಘವೇಂದ್ರ ಅವರು ಎರಡನೇ ಮದುವೆ ಆಗುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಇದು ಸುಳ್ಳಾದರೂ ಸಹಿತ ಕೆಲವರು ಸನ್ನಿವೇಶದ ಲಾಭ ಪಡೆದರು. ಆದರೆ ಈ ಬಗ್ಗೆ ಸ್ವತಃ ಈ ಇಬ್ಬರು ಕಲಾವಿದರು ಸ್ಪಷ್ಟನೆ ನೀಡಿದ್ದಾರೆ. ಮೊದಲ ಪ್ರೀತಿ, ಚಿರು ದಾಂಪತ್ಯ ಜೀವನದ ನೆನಪುಗಳಲ್ಲಿ ಮೇಘನಾ ಹಾಗೂ ಇಷ್ಟದ ಮಡದಿ ಸ್ಪಂದನಾ ಅವರೊಂದಿಗೆ ಕಳೆದ ಇಷ್ಟು ವರ್ಷಗಳ ವೈವಾಹಿಕ ಬದುಕಿನ ನೆನಪುಗಳಲ್ಲಿ ವಿಜಯ್ ರಾಘವೇಂದ್ರ ಅವರು ಜೀವಿಸುತ್ತಿದ್ದಾರೆ. ಆ ಸ್ಥಾನಗಳನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ.

True Love Beyond Loss Meghana Raj amp amp Vijay Raghavendra s Graceful Journey Wins Hearts

ಬದಕಿದ್ದಾಗಲೇ ಬೇರೆಯಾಗುವವರು, ವಿಚ್ಛೇದನ ಪಡೆದು ಮುಖ ತಿರುಗಿಸಿಕೊಂಡು ಹೋಗುವವರ ಮಧ್ಯ ಮೇಘನಾ ರಾಜ್ ಮತ್ತು ವಿಜಯ್ ರಾಘವೇಂದ್ರ ಅವರು ಗ್ರೇಟ್ ಅನ್ನಿಸಿಕೊಂಡಿದ್ದಾರೆ. ತಮ್ಮ ಪ್ರೀತಿಗೆ, ಸುಖ-ದುಖಃಗಳಲ್ಲಿ ಭಾಗಿಯಾದವರವನ್ನು ಹೃದಯದಲ್ಲಿ ಇನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಈ ನಡೆ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೆಲೆಬ್ರೆಟಿಗಳಾಗಲು, ಯಾರೇ ಆಗಲಿ ಕ್ಷುಲ್ಲಕ ಕಾರಣಕ್ಕೆ ದಾಂಪತ್ಯ ಜೀವನ ಮುರಿದುಕೊಳ್ಳುತ್ತಾರೋ, ದೂರವಾಗುತ್ತಾರೋ ಅವರಿಗೆಲ್ಲ ಮೇಘನಾ ಮತ್ತು ವಿಜಯ್ ಮಾದರಿಯಾಗಿ ನಿಲ್ಲುತ್ತಾರೆ. ಈ ಕಾರಣಕ್ಕೆ ಇವರನ್ನು ಫ್ಯಾನ್ಸ್ ಹೆಚ್ಚು ಇಷ್ಟಪಡುತ್ತಾರೆ.

2ನೇ ಮದುವೆ ಬಗ್ಗೆ ಮೇಘನಾ ಕೊಟ್ಟ ಸ್ಪಷ್ಟನೆ

ಚಿರಂಜೀವಿ ಸರ್ಜಾ ಅವರು ಬಿಟ್ಟು ನಾನು ಅವರ ಜಾಗಕ್ಕೆ ಬೇರೆಯವರನ್ನು ನೋಡಲು ಸಾಧ್ಯವಿಲ್ಲ. ಒಂದು ವೇಳೆ ಚಿರು ಅವರು ಯಾವುದೋ ಒಂದು ರೂಪದಲ್ಲಿ ಅನುಮತಿ ಕೊಟ್ಟರೆ ಆಗ ಬೇರೊಂದು ಮದುವೆ ಬಗ್ಗೆ ಯೋಚಿಸಬಹುದು ಎಂದಿದ್ದಾರೆ. ಅದಕ್ಕು ಮೊದಲೇ ರೀತಿ ಸುಳ್ಳು ಸುದ್ದಿ ಹಬ್ಬಿಸೋದು ಸರಿಯಲ್ಲ. ಈ ವಿಚಾರ ಬಗ್ಗೆ ಇನ್ನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

2ನೇ ಮದುವೆ ಬಗ್ಗೆ ವಿಜಯ್ ರಾಘವೇಂದ್ರ ಸ್ಪಷ್ಟನೆ

ಈ ಬಗ್ಗೆ ಮಾತನಾಡುವುದರಿಂದ ಹಿಂಸೆ ಅನ್ನಿಸುತ್ತದೆ. ಕೋಪ ಬರುತ್ತದೆ. ಅಭಿಮಾನಿಗಳ ಕಳವಳ ನನಗೆ ಅರ್ಥವಾಗುತ್ತದೆ. ಇಂತಹ ಸುದ್ದಿ ಹರಡುವುದರಲ್ಲಿ ಯಾವುದೇ ಅರ್ಥವಿಲ್ಲ. ಎಲ್ಲರಿಗೂ ಒಂದು ಕುಟುಂಬ ಇರುತ್ತದೆ. ನನಗೂ ಒಬ್ಬ ಮಗನಿದ್ದಾನೆ. ಇಂತಹ ಸುದ್ದಿ, ಗಾಸಿಪ್‌ಗಳು, ವದಂತಿಗಳು ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎರಡನೇ ಮದುವೆ ವಿಚಾರ ತಳ್ಳಿಹಾಕಿದ್ದರು.

ಇವರಿಬ್ಬ ಸ್ಪಷ್ಟನೆ ನಂತರವು ಸಾಮಾಜಿಕ ಮಾಧ್ಯಮದಲ್ಲಿ ಎರಡನೇ ಮದುವೆ ಆಗುತ್ತಾರೆ ಎಂಬ ಸುದ್ದಿ ಓಡಾಡುತ್ತಲೇ ಇದೆ. ಇತ್ತೀಚಿಗೆ ಮಾಧ್ಯಮಗಳ ಮುಂದೆ ಮಾತನಾಡುವಾಗ ನಾನು ಈ ಬಗ್ಗೆ ಕಾಮೆಂಟ್‌ ಮಾಡುವವರಿಗೆ ಉತ್ತೇಜನ ನೀಡುವುದಿಲ್ಲ. ಆ ಬಗ್ಗೆ ಮಾತನಾಡುವುದಿಲ್ಲ. ಅನಗತ್ಯ ಎಂದು ಮೇಘನಾ ರಾಜ್ ತಿಳಿಸಿದ್ದರು. ಈಗಲೂ ಇವರ ಬಗ್ಗೆ ಗಾಳಿ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ತಮ್ಮ ನಿಲುವು, ನಿರ್ಧಾರಗಳ ಬಗ್ಗೆ ಅವರಿಬ್ಬರು ಕಲಾವಿದರು ಸ್ಪಷ್ಟವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+