Bigg Boss: ಚಾಮುಂಡಿ ಬೆಟ್ಟದಲ್ಲಿ ತ್ರಿವಿಕ್ರಮ್-ಭವ್ಯಾ, ಡಿನ್ನರ್ ಪಾರ್ಟಿಯಲ್ಲಿ ಮಂಜು-ಗೌತಮಿ

ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಗಿದಿದೆ. ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಒಟ್ಟಾಗಿ ಇದ್ದ ಸ್ಪರ್ಧಿಗಳು ದೊಡ್ಮನೆಯಿಂದ ಹೊರಬಂದು ಭೇಟಿ ಮಾಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಕಳೆದ ಸಿಹಿ ಅನುಭವಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಹಾಗಾದರೆ ಹೊರಗಡೆ ಯಾರೆಲ್ಲಾ ಭೇಟಿ ಮಾಡಿದರು? ಎಲ್ಲಿಗೆ ಹೋಗಿದ್ದರು? ಎಲ್ಲವನ್ನೂ ಕಂಪ್ಲೀಟ್ ಆಗಿ ತಿಳಿಯೋಣ.

ಬಿಗ್‌ಬಾಸ್‌ ಮನೆಯಲ್ಲಿ ಇರುವಾಗ ಸಿಕ್ಕಾಪಟ್ಟೆ ಸುದ್ದಿ ಮಾಡಿದವರು ಮಂಜು-ಗೌತಮಿ, ಭವ್ಯಾ-ತ್ರಿವಿಕ್ರಮ್, ರಜತ್, ಹನುಮಂತ, ಧನ್‌ರಾಜ್ ಹಾಗೂ ಮೋಕ್ಷಿತಾ. ಇದೀಗ ಇವರು ಪರಸ್ಪರ ಭೇಟಿ ಮಾಡಿದ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಯಾರು ಯಾರನ್ನು ಭೇಟಿ ಮಾಡಿದರು?

trivikram-bhavya and manju gauthami meeting - where did they go

ರಜತ್, ಭವ್ಯಾ, ತ್ರಿವಿಕ್ರಮ್, ಅನು ಭೇಟಿ

ಬಿಬಿಕೆ-11ರ ರನ್ನರ್ ಅಪ್ ತ್ರಿವಿಕ್ರಮ್, ರಜತ್, ಭವ್ಯಾ ಹಾಗೂ ಅನುಷಾ ರೈ ನಾಲ್ಕು ಜನ ಭೇಟಿ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕಾರಿನಲ್ಲಿ ಕುಳಿತ ಈ ನಾಲ್ಕು ಜನರ ವಿಡಿಯೋವನ್ನು ರಜತ್ ಸೆರೆಹಿಡಿದಿದ್ದಾರೆ. ಚಾಮುಂಡಿಬೆಟ್ಟಕ್ಕೆ ಹೋಗುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಇವರು ಅದೇ ಸ್ನೇಹವನ್ನು ಮನೆಯಿಂದ ಹೊರಬಂದ ಮೇಲೂ ಮುಂದುವರೆಸಿದ್ದಾರೆ.

ಆದರೆ ತ್ರಿವಿಕ್ರಮ್ ಭವ್ಯಾ ಅವರಿಗೆ ಪ್ರಪೋಸ್ ಮಾಡಿದ್ದು, ಮನೆಯಿಂದ ಹೊರ ಬಂದ ಮೇಲೆ ಏನೂ ಆಗಿಲ್ಲ ಅನ್ನೋತರ ತೋರಿಸಿಕೊಂಡಿದ್ದು ಇದೆ. ಆದರೆ ಹೊರಗಡೆ ಜನ ಏನೇ ಮಾತನಾಡಲಿ, ಯಾರು ಏನೇ ಹೇಳಲಿ ನಾವೆಲ್ಲಾ ಸ್ನೇಹಿತರು ಎನ್ನುವ ರೀತಿ ಇಲ್ಲಿ ಎಲ್ಲರೂ ಒಟ್ಟಾಗಿ ಇರುವ ವಿಡಿಯೋವನ್ನು ಶೇರ್ ಮಾಡಲಾಗಿದೆ.

trivikram-bhavya and manju gauthami meeting - where did they go

ಗೌತಮಿ ಅಭಿಯೊಂದಿಗೆ ಮಂಜು ಡಿನ್ನರ್

ಮೊತ್ತೊಂದು ಶಾಕಿಂಗ್ ಅಂದರೆ ಹೊರಗಡೆ ಗೌತಮಿ ಹಾಗೂ ಮಂಜು ಅವರ ಬಗ್ಗೆ ಏನೆಲ್ಲಾ ಟ್ರೋಲ್ ಆಗುತ್ತಿದ್ದರೂ ಕೂಡ ಅಭಿ ಒಂದೇ ಒಂದು ಚೂರು ಪತ್ನಿ ಗೌತಮಿ ಮೇಲೆ ಅನುಮಾನ ಪಟ್ಟಿಲ್ಲ. ಇದು ನಿಜವಾಗಲೂ ಅವರಿಬ್ಬರ ಮಧ್ಯ ಇರುವ ಬಲವಾದ ನಂಬಿಕೆ ಪ್ರೀತಿಯನ್ನು ತೋರಿಸುತ್ತದೆ. ಇನ್ನೂ ಹೊರಗಡೆ ಯಾರು ಏನೇ ಹೇಳಲಿ ನಾವಿಬ್ಬರು ಉತ್ತಮ ಫ್ರೆಂಡ್ಸ್ ಅನ್ನೋದನ್ನು ಮಂಜು ಹಾಗೂ ಗೌತಮಿ ತೋರಿಸಿಕೊಟ್ಟಿದ್ದಾರೆ.

ಬಿಗ್‌ಬಾಸ್‌ ಮುಗಿದು ಹೊರ ಬಂದ ಬಳಿಕ ಮಂಜು ಅವರು ಗೌತಮಿ ಹಾಗೂ ಅವರ ಪತಿ ಅಭಿ ಅವರನ್ನು ಭೇಟಿ ಮಾಡಿ ಒಂದೊಳ್ಳೆ ಡಿನ್ನರ್ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಅಷ್ಟೇ ಅಲ್ಲ ಇವರು ಹೊಸದಾಗಿ ಶುರುವಾದ ಮಜಾಟಾಕೀಸ್‌ನಲ್ಲೂ ಕಾಣಿಸಿಕೊಂಡಿದ್ದಾರೆ.

ಮಜಾಟಾಕೀಸ್‌ನಲ್ಲಿ ಬಿಬಿಕೆ ಸ್ಪರ್ಧಿಗಳು ಭಾಗಿ

ಹೌದು.. ಮಜಾಟಾಕೀಸ್ ಹೊಸದಾಗಿ ಆರಂಭವಾಗಿದೆ. ಈ ಭಾನುವಾರ ಅಂದರೆ ಇಂದು ಮಜಾಟಾಕೀಸ್‌ನಲ್ಲಿ ತ್ರಿವಿಕ್ರಮ್, ಭವ್ಯಾ, ಮಂಜು ಹಾಗೂ ಗೌತಮಿ ಭಾಗವಹಿಸಿದ್ದು ಅದರ ಪೋಸ್ಟ್‌ ಕೂಡ ವೈರಲ್ ಆಗಿದೆ. ಈ ಸಂಚಿಕೆ ಇಂದು ಪ್ರಸಾರವಾಗಲಿದ್ದು, ಇನ್ನಷ್ಟು ಸ್ಪರ್ಧಿಗಳು ಇದರಲ್ಲಿ ಭಾಗಿ ಆಗುತ್ತಾರಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+