Trisha - Vijay: ವಿಜಯ್ ಸಿಎಂ ಆದ ಬೆನ್ನಲ್ಲೇ "ಪ್ರೀತಿ"ಯ ಬಗ್ಗೆ ನಟಿ ತ್ರಿಶಾ ಮಹತ್ವದ ಪೋಸ್ಟ್, ವೈರಲ್
Trisha - Vijay: ನಟಿ ತ್ರಿಶಾ ಕೃಷ್ಣನ್ ಅವರು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ನಟ ವಿಜಯ್ ಅವರು ರಾಜಕೀಯ ಪ್ರವೇಶಿಸಿ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷರಾದಾಗಿನಿಂದಲೂ ತ್ರಿಶಾ ಹಾಗೂ ವಿಜಯ್ ಅವರ ಆತ್ಮೀಯತೆಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ.
ಇದರ ನಡುವೆ ಸಂಗೀತಾ ಅವರು ವಿಜಯ್ ಅವರಿಗೆ ವಿಚ್ಛೇದನ ನೀಡಿದ ಮೇಲೆ ಇವರಿಬ್ಬರ ಗೆಳತನವು ಭಾರೀ ಚರ್ಚೆ ಹಾಗೂ ಗಾಸಿಪ್‌ಗೆ ಕಾರಣವಾಗಿದೆ. ಅದರಲ್ಲೂ ಸಂಗೀತಾ ಅವರು ನಟ ವಿಜಯ್ ಅವರಿಗೆ ನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧವಿದೆ ಎಂದು ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನು ವಿಚಾರವು ಭಾರೀ ವೈರಲ್ ಆಗಿತ್ತು. ಇದೀಗ ನಟಿ ತ್ರಿಶಾ ಅವರು ಮಹತ್ವದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ತಮಿಳುನಾಡಿನ ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದಲೂ ನಟಿ ತ್ರಿಶಾ ಹಾಗೂ ವಿಜಯ್ ಅವರ ನಡುವಿನ ಗೆಳತನದ ಬಗ್ಗೆ ಡಿಎಂಕೆಯ ಕೆಲವು ನಾಯಕರು ಸಹ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿರುವುದು ಇದೆ.
ತಮಿಳುನಾಡಿನ ವಿಧಾನಸಭೆ ಚುನಾವಣೆ ಮತದಾನದ ಸಂದರ್ಭದಲ್ಲಿ ನಟಿ ತ್ರಿಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋ ಹಾಗೂ ವಿಜಯ್ ಅವರ ಸಿನಿಮಾದ ಹಾಡು, ಮತ ಎಣಿಕೆಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಹಾಗೂ ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ವಿಜಯ್ ಅವರ ಮನೆಗೆ ನಟಿ ತ್ರಿಶಾ ಅವರು ಭೇಟಿ ನೀಡಿದ್ದು ಈ ಕೂತೂಹಲ ಹಾಗೂ ಗಾಸಿಪ್ ಇನ್ನಷ್ಟು ಜೋರಾಗಲು ಕಾರಣವಾಗಿದೆ.
Trisha - Vijay: ಸೋಶಿಯಲ್ ಮೀಡಿಯಾದಲ್ಲಿ ತ್ರಿಶಾ ಸಂದೇಶ
ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ತ್ರಿಶಾ ಅವರು, The love is always louder.. ಪ್ರೀತಿ ಎಲ್ಲದಕ್ಕಿಂತಲೂ ಶಕ್ತಿಶಾಲಿ ಎಂದು ಪೋಸ್ಟ್ ಮಾಡಿದ್ದಾರೆ. ನಟ - ರಾಜಕಾರಣಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನಟಿ ತ್ರಿಶಾ ಅವರು ಈ ರೀತಿ ಪೋಸ್ಟ್ ಮಾಡಿದ್ದು, ಹಲವು ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟಿದೆ.
ನಟಿ ತ್ರಿಶಾ ಅವರು ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಿಂಚಿದ್ದರು. ಇದೀಗ ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ಭಾನುವಾರ ವಿಜಯ್ ಅವರ ಕಾರ್ಯಕ್ರಮದಲ್ಲಿ ಧರಿಸಿದ್ದ ಸೀರೆಯಲ್ಲಿ ತೆಗೆದಿರುವ ಫೋಟೋಗಳನ್ನು ಹಂಚಿಕೊಂಡು ಈ ರೀತಿ ಬರೆದಿದ್ದಾರೆ.
ತಮಿಳುನಾಡಿನ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ತ್ರಿಶಾ ಅವರು, ತಿಳಿ ನೀಲಿ ಬಣ್ಣದ ಸೀರೆ ಧರಿಸಿ ಸಾಂಪ್ರದಾಯಿಕ ಲುಕ್‌ನಲ್ಲಿ ಗಮನ ಸೆಳೆದಿದ್ದರು. ಇದೇ ಫೋಟೋಗಳನ್ನು ಅವರು ಇಂದು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ನೆಟ್ಟಿಗರು ಹೇಳಿದ್ದೇನು
ತ್ರಿಶಾ ಅವರ ಪೋಸ್ಟ್ 1.5 ಮಿಲಿಯನ್‌ಗೂ ಹೆಚ್ಚು ರೀಚ್ ಆಗಿದೆ. ಈ ಫೋಟೋವನ್ನು 1.5 ಮಿಲಿಯನ್ ಜನ ಲೈಕ್ ಮಾಡಿದ್ದು, 12 ಸಾವಿರಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೀತಿ ಇನ್ನೂ ಗಾಢವಾಗಿದೆ... ಎಲ್ಲೆಲ್ಲೂ ಪ್ರೀತಿಯೇ ತುಂಬಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿಯಲ್ಲಿ ಮುಖ್ಯಮಂತ್ರಿ ವಿಜಯ್ ಹಾಗೂ ತ್ರಿಶಾ ಅವರ ಪೋಸ್ಟ್‌ಗಳು ವೈರಲ್ ಆಗುತ್ತಿವೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಈ ನಡುವೆ ನಟ ವಿಜಯ್ ಅವರ ತಮಿಳುನಾಡಿನ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ನಟಿ ತ್ರಿಶಾ ಅವರು ಸೇರ್ಪಡೆ ಆಗಲಿದ್ದು, ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರವೂ ಸಹ ಚರ್ಚೆ ಆಗುತ್ತಿದೆ.












Click it and Unblock the Notifications