Toxic: ಮುಂಬೈನಲ್ಲಿ ತಲೆ ಎತ್ತಿದ ನಟ ಯಶ್‌ ಬಿಗ್‌ ಕಟೌಟ್‌, 'ಟಾಕ್ಸಿಕ್‌'ನಿಂದ ಇತಿಹಾಸ

ಸಾಮಾನ್ಯವಾಗಿ ಸಿನಿಮಾ ರಿಲೀಸ್‌ ವೇಳೆ ನಟ ಕಟೌಟ್‌ಗಳು ಥಿಯೇಟರ್‌ಗಳ ಮುಂದೆ ನಿಲ್ಲುತ್ತವೆ. ಇನ್ನು ಪ್ಯಾನ್‌ ಇಂಡಿಯಾ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಸಿನಿಮಾಗಳಂತೂ ಸದ್ಯಕ್ಕೆ ರಿಲೀಸ್‌ ಆಗುತ್ತಿಲ್ಲ. ಆದರೂ ಅವರ ದೊಡ್ಡ ಕಟೌಟ್‌ ತಲೆ ಎತ್ತಿ ನಿಂತಿದೆ. ಅದರಲ್ಲೂ ಮುಂಬೈನಲ್ಲಿ ನಟ ಯಶ್ ಅವರ ದೊಡ್ಡ ಕಟೌಟ್‌ ನಿಲ್ಲಿಸಲಾಗಿದ್ದು, ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.‌ ಆದರೆ ಸಿನಿಮಾ ರಿಲೀಸ್‌ ಇಲ್ಲದೆ ಕಟೌಟ್‌ ಯಾಕೆ ನಿಲ್ಲಿಸಲಾಗಿದೆ? ಎಂಬುದು ಕುತೂಹಲ ಮೂಡಿಸಿದ್ದು ಇದಕ್ಕೆ ಉತ್ತರವೂ ಸಿಕ್ಕಿದೆ.

ರಾಕಿಂಗ್‌ ಸ್ಟಾರ್‌ ಯಶ್‌ ಅವರ ಕೆಜಿಎಫ್‌-2 ಸಿನಿಮಾದ ಬಳಿಕ ಯಾವುದೇ ಸಿನಿಮಾ ರಿಲೀಸ್‌ ಆಗಿಲ್ಲ. ಅದ್ಯ ಅವರು ಟಾಕ್ಸಿಕ್‌ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಾಕಿಭಾಯ್‌ ಸಿನಿಮಾಗಳಿಲ್ಲದೆ ಅವರ ಫ್ಯಾನ್ಸ್‌ ಕೂಡ ಬೇಸರದಲ್ಲಿದ್ದಾರೆ. ಆದರೆ, ಮುಂಬೈನಲ್ಲಿ ಬೃಹದಾಕಾರದಲ್ಲಿ ಯಶ್‌ ಅವರ ಕಟೌಟ್‌ ನಿಲ್ಲಿಸಿರುವುದು ಸಂಚಲನ ಸೃಷ್ಟಿಸಿದೆ. ಸಿನಿಮಾ ರಿಲೀಸ್‌ ಇಲ್ಲದೆ ಯಶ್‌ ಅವರ ಕಟೌಟ್‌ ಯಾಕೆ ಬಂತು ಎಂದೂ ತಲೆಕೆಡಿಸಿಕೊಂಡಿದ್ದಾರೆ.

Toxic The Movie Rocking Star Yash Big Cutout In Mumbai Goes Viral

ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿರುವ ಯಶ್‌ ಅಭಿಮಾನಿಗಳು ಕಟೌಟ್‌ ನಿಂತಿದೆ ಅಂದ್ರೆ, ಏನೋ ದೊಡ್ಡ ಅನೌನ್ಸ್‌ಮೆಂಟ್‌ ಇದ್ದಂಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಹಾಗೇನಾದ್ರೂ ಅನೌನ್ಸ್‌ಮೆಂಟ್‌ ಇದ್ರೆ ಯಶ್‌ ಅವರ ಕಟೌಟ್‌ ಬೆಂಗಳೂರಿನಲ್ಲಿ ಇರಬೇಕಿತ್ತಲ್ವಾ? ಮುಂಬೈನಲ್ಲಿ ಯಾಕಿದೆ? ಎಂದೂ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಆದರೆ ಅಸಲಿ ವಿಚಾರ ಇಲ್ಲಿದೆ.

ಈ ಕಟೌಟ್‌ ಯಾವ ಉದ್ದೇಶಕ್ಕೆ ನಿಲ್ಲಿಸಲಾಗಿದೆ ಎಂಬ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ ಕೆಲವರು ಹೇಳುತ್ತಿರುವ ಪ್ರಕಾರ ಯಾವುದೋ ಆಡ್‌ ಶೂಟ್‌ಗಾಗಿ ಯಶ್‌ ಅವರ ಬೃಹತ್‌ ಕಟೌಟ್‌ ನಿಲ್ಲಿಸಲಾಗಿದೆ. ಇದನ್ನು ಯಾರೋ ಫೋಟೋ ಹಿಡಿದು ಲೀಕ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಹೇಳುವ ಪ್ರಕಾರ ಟಾಕ್ಸಿಕ್‌ ಸಿನಿಮಾ ಶೂಟಿಂಗ್ ಮುಂಬೈನಲ್ಲೂ ನಡೆದಿರುವುದರಿಂದ ಟಾಕ್ಸಿಕ್‌ ತಂಡ ಏನೋ ಪ್ಲ್ಯಾನ್‌ ಮಾಡಿಕೊಂಡಿದೆ. ಏನೋ ದೊಡ್ಡ ಘೋಷಣೆ ಮಾಡಲು ಈ ಕಟೌಟ್‌ ನಿಲ್ಲಿಸಿದೆ ಎಂದು ಚರ್ಚೆಗಳು ನಡೆಯುತ್ತಿವೆ.

Toxic The Movie Rocking Star Yash Big Cutout In Mumbai Goes Viral

ಟಾಕ್ಸಿಕ್‌ನಿಂದ ಮತ್ತೊಂದು ಇತಿಹಾಸ!

ನಟ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಇದೀಗ ಮತ್ತೊಂದು ಇತಿಹಾಸ ನಿರ್ಮಿಸಿದೆ. ಇದು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಚಿತ್ರೀಕರಿಸಲಾಗುತ್ತಿರುವ ಭಾರತದ ದೊಡ್ಡ-ಪ್ರಮಾಣದ ದ್ವಿಭಾಷಾ ಸಿನಿಮಾದ ಎಂಬ ದಾಖಲೆ ನಿರ್ಮಿಸಿದೆ. ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಸಿನಿಮಾದ ಮಹತ್ವಾಕಾಂಕ್ಷೆಯ ಜಾಗತಿಕ ತಂತ್ರಜ್ಞಾನವು ಹಲವಾರು ಭಾರತೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಿಗೆ ಡಬ್ಬಿಂಗ್ ಅನ್ನು ಸಹ ಒಳಗೊಂಡಿದೆ.

"ಟಾಕ್ಸಿಕ್" ಸಿನಿಮಾಗಾಗಿ ನಮ್ಮ ದೃಷ್ಟಿಯು ಭಾರತೀಯ ಮತ್ತು ಜಾಗತಿಕ ಪ್ರೇಕ್ಷಕರನ್ನು ಸೆಳೆಯುವ ನಿರೂಪಣೆಯೊಂದಿಗೆ ಚಲನಚಿತ್ರವನ್ನು ರಚಿಸುವುದು ಹಾಗೂ ಮನರಂಜನೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹೃದಯ ಮತ್ತು ಮನಸ್ಸುಗಳನ್ನು ಆಳವಾಗಿ ಸಂಪರ್ಕಿಸುವ ಕಥೆ ರಚಿಸುತ್ತಿದ್ದೇವೆ ಎಂದು ಟಾಕ್ಸಿಕ್‌ ಸಿನಿಮಾದ ಡೈರೆಕ್ಟರ್‌ ಗೀತು ಮೋಹನ್‌ ದಾಸ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+