ಯಶ್ ಹುಟ್ಟುಹಬ್ಬಕ್ಕೆ ದೊಡ್ಡ ಗಿಫ್ಟ್ ಕೊಟ್ಟ ‘ಕೆವಿಎನ್’! ಏನ್ ಗೊತ್ತಾ?

ಯಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಹೀಗಿದ್ದಾಗ ಒಂದು ವಿಡಿಯೋ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಹಾಗೇ ನಟ ಯಶ್ ಅವರ ಅಭಿಮಾನಿಗಳಿಗೂ ಇದು ಸರ್ಪ್ರೈಸ್ ಕೊಟ್ಟಿದೆ. ಇನ್ನೇನು ತಮ್ಮ 19ನೇ ಸಿನಿಮಾಗೆ ಸಿದ್ಧವಾಗುತ್ತಿರುವ ರಾಕಿಭಾಯ್ ಯಶ್ ಅವರಿಗೆ ಇಂದು ಭರ್ಜರಿ ಉಡುಗೊರೆ ನೀಡಿದೆ 'ಕೆವಿಎನ್' ಸಂಸ್ಥೆ. ಹಾಗಾದರೆ ಏನದು ಗಿಫ್ಟ್? ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಕೆಜಿಎಫ್-2 ಬಳಿಕ ಯಶ್ ಅವರ ಯಾವುದೇ ಸಿನಿಮಾಗಳು ಅನೌನ್ಸ್ ಆಗಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಕುತೂಹಲದಿಂದ ಕಾಯ್ತಾ ಯಶ್-19 ಅಪ್‌ಡೇಟ್‌ಗಾಗಿ ನೋಡ್ತಿದ್ರು. ಹೀಗಿದ್ದಾಗಲೇ ಇಂದಿಗೆ ಸರಿಯಾಗಿ ತಿಂಗಳ ಹಿಂದೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಭರ್ಜರಿ ಘೋಷಣೆ ಹೊರಡಿಸಿದ್ದರು ನಟ ಯಶ್. ಯಶ್-19 ಸಿನಿಮಾಗೆ 'ಟಾಕ್ಸಿಕ್' ಎಂಬ ಟೈಟಲ್ ಇಡಲಾಗಿತ್ತು. ಹೀಗೆ ಟೈಟಲ್ ಅನೌನ್ಸ್ ಆದ 1 ತಿಂಗಳ ನಂತರ ರಾಕಿಭಾಯ್ ಯಶ್ ಅವರ ಹುಟ್ಟುಹಬ್ಬ ಕೂಡ ಬಂದಿದೆ. ಇದೇ ಸಮಯದಲ್ಲಿ 'ಕೆವಿಎನ್' ಸಂಸ್ಥೆ ಸ್ಪೆಷಲ್ ವಿಡಿಯೋ ಕೂಡ ರಿಲೀಸ್ ಮಾಡಿದೆ.

Toxic Movie Team Released Special Video For KGF Star Yash Birthday

'ಟಾಕ್ಸಿಕ್' ಅಬ್ಬರ ಬಲು ಜೋರು!

ತನ್ನ ಟೈಟಲ್ ಮೂಲಕವೇ ಗಮನ ಸೆಳೆದಿರುವ ಯಶ್ ಸಿನಿಮಾ 'ಟಾಕ್ಸಿಕ್'. ಹೀಗಿದ್ದಾಗಲೇ ಅಬ್ಬರದಿಂದ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಸುತ್ತಿದ್ದಾರೆ ನಟ ಯಶ್ ಅವರು. ಇದಕ್ಕಾಗಿ ಅಂತಾ ಹುಟ್ಟುಹಬ್ಬದ ಆಚರಣೆ ಸಮಯದಲ್ಲೂ, ಅಭಿಮಾನಿಗಳಿಂದ ದೂರ ಉಳಿದಿದ್ದಾರೆ ನಟ ಯಶ್. ಇಷ್ಟೆಲ್ಲದರ ನಡುವೆ ಬೆಳಗ್ಗೆಯೇ 'ಕೆವಿಎನ್' ಸಂಸ್ಥೆ ಯಶ್ ಬರ್ತ್ ಡೇಗಾಗಿ ವಿಶೇಷ ವಿಡಿಯೋ ರಿಲೀಸ್ ಮಾಡಿತ್ತು. ಈ ವಿಡಿಯೋದಲ್ಲಿ 'ಟಾಕ್ಸಿಕ್' ಅವತಾರದಲ್ಲಿ ನಟ ಯಶ್ ಮಿಂಚಿದ್ದಾರೆ.

ಯಶ್ ಸಿನಿಮಾ ಕಥೆ ಏನು?

ಯಶ್ ಒಂದು ಸಿನಿಮಾಗಿಂತ ಮತ್ತೊಂದು ಸಿನಿಮಾವನ್ನು ಅತ್ಯಂತ ವಿಭಿನ್ನವಾಗಿ & ಕಲರ್ ಫುಲ್ ಆಗಿ ಮಾಡ್ತಾರೆ. ಹೀಗಾಗಿ, ಮುಂದಿನ ಸಿನಿಮಾಗೆ ಸಾಕಷ್ಟು ಸಮಯ ತೆಗೆದುಕೊಂಡು 19ನೇ ಸಿನಿಮಾ ಟೈಟಲ್‌ಗೆ 'ಟಾಕ್ಸಿಕ್' ಎಂದು ಹೆಸರು ಇಟ್ಟಿದ್ದಾರೆ. ಈ ಮೂಲಕವೇ ಗೋವಾ ಡ್ರಗ್ಸ್ ಲೋಕದ 1960-70ರ ಕಥೆ ಹೇಳಲು ಯಶ್ ಹೊರಟಿದ್ದಾರೆ ಅಂತಾ ಹೇಳಲಾಗಿದೆ. ಹೀಗೆ ಕನ್ನಡಕ್ಕೆ ಈ ಸಿನಿಮಾ ಇಂಡಸ್ಟ್ರಿ ಮುಂದೆ, ಹಾಲಿವುಡ್ ಅಂಗಳದಲ್ಲೂ ಮಿಂಚುತ್ತಾ? ಅನ್ನೋ ಕುತೂಹಲ ಕೂಡ ಡಬಲ್ ಆಗಿದೆ.

ಏನೋ ದೊಡ್ಡದಾಗಿದೆ ರಾಕಿ ಐಡಿಯಾ

ಯಶ್-19 'ಟಾಕ್ಸಿಕ್' ಫಸ್ಟ್ ಲುಕ್‌ನ ನೋಡುತ್ತಿದ್ದರೆ, ನಟ ಯಶ್ ಬೇರೆ ಏನೋ ದೊಡ್ಡದಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಭಾರತ ಸಿನಿಮಾ ರಂಗವನ್ನು ಶೇಕ್ ಮಾಡಿರುವ ಈ ನಟ ಹಾಲಿವುಡ್ ರಣ ರಂಗದಲ್ಲಿ ಖದರ್ ತೋರಿಸೋದಕ್ಕೆ ಸಜ್ಜಾಗಿದ್ದಾರೆ. ಹೀಗೆ ಕನ್ನಡ ನೆಲದ ನಟ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿರುವುದು ಕನ್ನಡಿಗರಿಗೂ ಖುಷಿ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಹುಟ್ಟುಹಬ್ಬದ ದಿನವೆ ಟಾಕ್ಸಿಕ್ ಟೈಟಲ್ ಕೂಡ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.

Toxic Movie Team Released Special Video For KGF Star Yash Birthday

ಯಶ್ ಸಿನಿಮಾ ಡೈರೆಕ್ಟರ್ ಯಾರು?

ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆ ಸೇರಿ ಇದೀಗ, ರಾಕಿಂಗ್ ಸ್ಟಾರ್ ಯಶ್ ಕಮಾಲ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಗೀತು ಮೋಹನ್‌ದಾಸ್ ಅವ್ರು ಡೈರೆಕ್ಷನ್ ಮಾಡಿದ್ದ 'ಲೈಯರ್ಸ್​ ಡೈಸ್​' ಸಿನಿಮಾ 87ನೇ ಆಸ್ಕರ್​ ಪ್ರಶಸ್ತಿಯ ಸ್ಪರ್ಧೆಗಾಗಿ, ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿತ್ತು. ಅಲ್ಲದೆ ಈ ಸಿನಿಮಾಗೆ 2 ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿವೆ. ಇದೇ ಹಿನ್ನೆಲೆಯಲ್ಲಿ 'ಟಾಕ್ಸಿಕ್' ಸಿನಿಮಾ ಮೇಲಿನ ಕುತೂಹಲ ಡಬಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+