Toxic Movie: 'ಟಾಕ್ಸಿಕ್' ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್, ಫ್ಯಾನ್ಸ್‌ಗೆ ರೆಡಿಯಾಗಿ ಎಂದ ಯಶ್
ನಟ ರಾಕಿಂಗ್ ಸ್ಟಾರ್ ಯಶ್ ಅವರು ಬಹುನಿರೀಕ್ಷಿತ ಸಿನಿಮಾ ಆಗಿರುವ "ಟಾಕ್ಸಿಕ್" ಬಗ್ಗೆ ಚಿತ್ರತಂಡ ಬಿಗ್ ಅಪ್‌ಡೇಟ್ ನೀಡಿದೆ. 2022ರಲ್ಲಿ ಕೆಜಿಎಫ್-2 ಬಳಿಕ ಯಶ್ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಅಭಿಮಾನಿಗಳು ಕೂಡ ಯಶ್ ಸಿನಿಮಾಗಳಿಲ್ಲದೆ ಬೇಸರದಲ್ಲಿದ್ದರು. ಆದರೆ ಟಾಕ್ಸಿಕ್, ರಾಮಾಯಣ ಸಿನಿಮಾಗಳನ್ನು ಯಶ್ ಘೋಷಿಸಿದ್ದರು. ಸದ್ಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಮುಗಿಸಿ, ರಿಲೀಸ್‌ಗೆ ರೆಡಿಯಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ಯಶ್ ತನ್ನ ಅಭಿಮಾನಿಗಳಿಗೆ ಮಹತ್ವದ ಸಂದೇಶವೊಂದನ್ನು ನೀಡಿದ್ದಾರೆ.
2026ರ ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲಿದ್ದು, ಇನ್ನು 100 ದಿನಗಳಷ್ಟೇ ಬಾಕಿ ಇದೆ. ಈ ಹಿನ್ನೆಲೆ ಚಿತ್ರತಂಡವು ವಿಶೇಷ ಪೋಸ್ಟ್ ಹಂಚಿಕೊಂಡು ಫ್ಯಾನ್ಸ್‌ಗೆ ಅಲರ್ಟ್ ನೀಡಿದೆ. ಯಶ್ ಬಾತ್ ಟಬ್‌ನಲ್ಲಿ ಕುಳಿತು ಪೋಸ್ ನೀಡುತ್ತಿರುವ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಇನ್ನು 100 ದಿನಗಳಲ್ಲಿ ಕಾಲ್ಪನಿಕ ಕಥೆ ನಿಮ್ಮ ಮುಂದೆ ಬರಲಿದೆ ಎಂದು ಯಶ್ ಎಕ್ಸ್‌ನಲ್ಲಿ ಮೆಸೇಜ್ ಕೊಟ್ಟಿದ್ದಾರೆ.

ಕಥೆ ಯಶ್, ರವಿ ಬಸ್ರೂರು ಮ್ಯೂಸಿಕ್ ಫಿಕ್ಸ್
ಚಿತ್ರತಂಡ ಹಂಚಿಕೊಂಡಿರುವ ಹೊಸ ಪೋಸ್ಟರ್‌ನಲ್ಲಿ ಮಹತ್ವದ ಬದಲಾವಣೆಗಳೂ ಇವೆ. ಮಲಯಾಳಂ ಚಿತ್ರರಂಗದ ಗೀತು ಮೋಹನ್ ದಾಸ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಕಥೆ ಕೂಡ ಗೀತು ಮೋಹನ್ ದಾಸ್ ಅವರೇ ಎಂದು ಮೊದಲಿಗೆ ಹೇಳಲಾಗಿತ್ತು. ಆದರೆ ಹೊಸ ಅಪ್ಡೇಟ್ ಏನಂದ್ರೆ ಖುದ್ದು ಯಶ್ ಕೂಡ ಟಾಕ್ಸಿಕ್ ಸಿನಿಮಾಗೆ ಕಥೆ ಬರೆದಿದ್ದಾರೆ.
ಇನ್ನು ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದರ್ ಅವರು ಟಾಕ್ಸಿಕ್‌ಗೆ ಸಂಗೀತ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕನ್ನಡಿಗೆ ರವಿ ಬಸ್ರೂರು ಅವರ ಸಂಗೀತವೇ ಕನ್ಫರ್ಮ್ ಆಗಿದೆ. ಕೆಜಿಎಫ್, ಸಲಾರ್ ಬಳಿಕ ಬಸ್ರೂರು ಸಂಗೀತ ಟಾಕ್ಸಿಕ್‌ಗೆ ಮತ್ತಷ್ಟು ಹೈಪ್ ನೀಡುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
"ಟಾಕ್ಸಿಕ್ ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್" ಸಿನಿಮಾ ಭಾರತೀಯ ಕಾಲದ ಗ್ಯಾಂಗ್‌ಸ್ಟರ್ ಸಿನಿಮಾ ಆಗಿದ್ದು, ಗೀತು ಮೋಹನ್‌ದಾಸ್ ಮತ್ತು ಯಶ್ ಬರೆದಿದ್ದಾರೆ. ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಯಶ್, ನಯನತಾರಾ , ಕಿಯಾರಾ, ಮಲ್ಹೋತ್ರಾ , ತಾರಾ ಸುತಾರಿಯಾ, ಹುಮಾ ಖುರೇಷಿ , ರುಕ್ಮಿಣಿ ವಸಂತ್, ಅಕ್ಷಯ್ ಒಬೆರಾಯ್ ಮತ್ತು ಸುದೇವ್ ನಾಯರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಕಂಪನಿಗಳ ಅಡಿಯಲ್ಲಿ ಜಂಟಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. ಡಿಸೆಂಬರ್ 2023ರಲ್ಲಿ ಈ ಸಿನಿಮಾ ಘೋಷಣೆಯಾಯಿತು. ಇದು ನಾಯಕ ನಟನಾಗಿ ಯಶ್ ಅವರ 19ನೇ ಸಿನಿಮಾ. ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಮಾರ್ಚ್ 19ರಂದು ಆರು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.












Click it and Unblock the Notifications