Year Ender 2024: ಈ ವರ್ಷದ ಟಾಪ್ 10 ನಟಿಯರಲ್ಲಿ ಕನ್ನಡದ ಇಬ್ಬರಿಗೆ ಮಾತ್ರ ಸ್ಥಾನ, ಯಾರವರು?
ವರ್ಷ ಮುಗಿಯುತ್ತಿದ್ದಂತೆ ನಡೆದು ಬಂದ ಹಿಂದಿನ ಹೆಜ್ಜೆಗುರುತುಗಳನ್ನು ನೆನೆಯುವ ಸಮಯವಿದು. ಇನ್ನು ಈ ವರ್ಷ ಏನೆಲ್ಲ ಆಯ್ತು ಎಂಬುದನ್ನು ವಿವಿಧ ಕ್ಷೇತ್ರಗಳಲ್ಲಿ ಮೆಲುಕು ಹಾಕುತ್ತಿದ್ದೇವೆ. ಇನ್ನು ಸಿನಿಮಾರಂಗದಲ್ಲಿ ಈ ವರ್ಷದ ಅತ್ಯುತ್ತಮ ಹಾಗೂ ಹೆಚ್ಚು ಜನಮನ್ನಣೆ ಗಳಿಸಿರುವ ನಟಿಯರ ಪಟ್ಟಿ ಕೂಡ ಹೊರಬಿದ್ದಿದೆ.
ಆರ್‌ಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ ಎನ್ನುವ ಸಂಸ್ಥೆಯು ಪ್ರತಿ ತಿಂಗಳು ಕೂಡ ಭಾರತೀಯ ಚಿತ್ರರಂಗದ ಟಾಪ್ ನಟಿಯರ ಪಟ್ಟಿಯನ್ನು ಅವರ ಪ್ರಖ್ಯಾತಿಯ ಮೇರೆಗೆ ಬಿಡುಗಡೆ ಮಾಡುತ್ತದೆ. ಅದರಂತೆ ಈ ತಿಂಗಳ ಪಟ್ಟಿಯನ್ನು ಸಹ ಸಂಸ್ಥೆ ಬಿಡುಗಡೆ ಮಾಡಿದೆ. ಇನ್ನು ಹತ್ತು ಟಾಪ್ ನಟಿಯರ ಪಟ್ಟಿಯಲ್ಲಿ ಕನ್ನಡ ಇಬ್ಬರು ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಅವರು ಯಾರ್ಯಾರು ಎಂಬುದನ್ನು ಮುಂದೆ ತಿಳಿಯೋಣ...

ಮೊದಲ ಸ್ಥಾನವನ್ನು ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಇದ್ದಾರೆ. ಎರಡನೇ ಸ್ಥಾನದಲ್ಲಿ ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಸೌತ್ ಸೂಪರ್ ಸ್ಟಾರ್ ನಯನತಾರಾ ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಸ್ಥಾನ ಪಡೆದಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿ ಕನ್ನಡತಿಯೂ ಆದ ಬಾಲಿವುಡ್ ನಟ ದೀಪಿಕಾ ಪಡುಕೋಣೆ ಇದ್ದಾರೆ.
ಆರನೇ ಸ್ಥಾನದಲ್ಲಿ ಬಹುಭಾಷಾ ನಟಿ ತ್ರಿಷಾ ಇದ್ದರೆ, ಏಳನೇ ಸ್ಥಾನದಲ್ಲಿ ಕಾಜಲ್ ಅಗರ್ವಾಲ್ ಹೊರಹೊಮ್ಮಿದ್ದಾರೆ. ಇನ್ನು ಕನ್ನಡತಿ ಹಾಗೂ ಸದ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರು ಎಂಟನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಒಂಬತ್ತನೇ ಸ್ಥಾನದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇದ್ದರೆ, ಹತ್ತನೇ ಸ್ಥಾನದಲ್ಲಿ ಕತ್ರೀನಾ ಕೈಫ್ ಇದ್ದಾರೆ.
ಟಾಪ್ ನಟರು ಯಾರು?: ಆರ್‌ಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ ಸಂಸ್ಥೆಯು ಭಾರತದ ಟಾಪ್ 10 ನಟರ ಪಟ್ಟಿಯನ್ನು ಕೂಡ ಪ್ರಕಟಿಸಿದೆ. ಇದರಲ್ಲಿ ಕನ್ನಡದ ಯಾವ ನಟನಿಗೂ ಸ್ಥಾನ ನೀಡಿಲ್ಲ.

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್ ಇದ್ದಾರೆ. ತೆಲುಗು ನಟ ವಿಜಯ್ ದಳಪತಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಇದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಅವರು ನಾಲ್ಕನೇ ಸ್ಥಾನ ಪಡೆದಿದ್ದರೆ, ಐದನೇ ಸ್ಥಾನದಲ್ಲಿ ತೆಲುಗು ನಟ ಜ್ಯೂನಿಯರ್ ಎನ್‌ಟಿಆರ್ ಇದ್ದಾರೆ.
ಆರನೇ ಸ್ಥಾನದಲ್ಲಿ ತಮಿಳು ನಟ ಅಜಿತ್ ಕುಮಾರ್ ಸ್ಥಾನ ಪಡೆದಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಏಳನೇ ಸ್ಥಾನದಲ್ಲಿದ್ದಾರೆ. ತಮಿಳು ನಟ ಸೂರ್ಯ ಅವರು ಎಂಟನೆ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತೆಲುಗು ನಟ ರಾಮ್‌ಚರಣ್ ತೇಜ್ ಅವರು ಒಂಬತ್ತನೇ ಸ್ಥಾನ ಪಡೆದಿದ್ದು, ಕೊನೇ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಇದ್ದಾರೆ. ಈ ಹಿಂದೆ ಈ ಸಂಸ್ಥೆ ಪ್ರಕಟಿಸಿದ್ದ ಪಟ್ಟಿಯಲ್ಲಿ ಕನ್ನಡ ನಟರು ಕೂಡ ಇದ್ದರು.












Click it and Unblock the Notifications