Anchor Anushree: ಅನುಶ್ರೀಗೆ ಲವ್ ಆಗೋಯ್ತಾ? ಆಂಕರ್ ಅನುಶ್ರೀ ಪ್ರೀತಿಸುವ ಹುಡುಗ ಯಾರು?

ಆಂಕರ್ ಅನುಶ್ರೀ ಅವರ ಮದುವೆ ವಿಚಾರ ಭರ್ಜರಿಯಾಗಿ ಚರ್ಚೆ ಆಗುತ್ತಿದೆ. ಅದ್ರಲ್ಲೂ ಈ ನಿರೂಪಕಿ ಕನ್ನಡದಲ್ಲಿ ಆಂಕರಿಂಗ್‌ಗೆ ಹೊಸ ಗತ್ತು ತಂದುಕೊಟ್ಟವರು. ಹೀಗಿದ್ದಾಗಲೇ ನಟಿ ಅನುಶ್ರೀ ಅವರು ಇದೇ ಮೊದಲ ಬಾರಿಗೆ ತಮ್ಮ ಹೃದಯದಲ್ಲಿ ಹರಡಿರುವ ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಹೊಸ ಪ್ರೀತಿಯ ಬಗ್ಗೆ ಚರ್ಚೆ ಮಾಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಆಂಕರ್ ಅನುಶ್ರೀ ನಿಜವಾಗೂ ಲವ್ವಲ್ಲಿ ಬಿದ್ದಿದ್ದಾರಾ? ಅನುಶ್ರೀ ಮದುವೆ ಆಗುವ ಹುಡುಗ ಯಾರು? ತಮ್ಮ ಲವ್ವರ್ ಬಗ್ಗೆ ಅನುಶ್ರೀ ಏನ್ ಹೇಳಿದ್ರು? ಬನ್ನಿ ತಿಳಿಯೋಣ.

ಕನ್ನಡದಲ್ಲಿ ಪಟ ಪಟ ಅಂತಾ ನಿರೂಪಣೆ ಮಾಡುವ ಆಂಕರ್ ಅನುಶ್ರೀ ಅವರಿಗೆ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ವಿವಿಧೆಡೆ ಕೂಡ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಆಂಕರ್ ಅನುಶ್ರೀ ಯಾವುದೇ ಕಾರ್ಯಕ್ರಮ ಆಗಿದ್ದರೂ ನಿಭಾಯಿಸುವ ರೀತಿ & ನಿರೂಪಣೆ ಮಾಡುವ ಶೈಲಿ ಜನರಿಗೆ ಇಷ್ಟ. ಅದ್ರಲ್ಲೂ ಹೆಣ್ಣು ಮಕ್ಕಳು ಅಥವಾ ಗೃಹಿಣಿಯರಿಗೆ ಇವರೇ ಫೇವರಿಟ್ ಎನ್ನಬಹುದು. ಹೀಗಿದ್ದಾಗ ಅನುಶ್ರೀ ಅವರು ಇಷ್ಟು ವಯಸ್ಸಾದರೂ ಮದುವೆಯೇ ಆಗಿಲ್ಲ ಅನ್ನೋದು ಅಭಿಮಾನಿಗಳ ಬೇಸರದ ಮಾತು. ಈ ಸಮಯದಲ್ಲೇ ನಟಿ ಕಂ ಆಂಕರ್ ಅನುಶ್ರೀ ಅವರು ಪ್ರೀತಿ ಮಾಡುತ್ತಿರುವ ಬಗ್ಗೆ ಹಿಂಟ್ ಕೊಡುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ. ಆ ವಿಡಿಯೋ ನೋಡಲು ಮುಂದೆ ಓದಿ.

This Is What The Anchor Anushree Said About Her Marriage

50 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ?

ಕನ್ನಡದಲ್ಲಿ ಹತ್ತಾರು ವರ್ಷಗಳಿಂದಲೂ ಆಂಕರಿಂಗ್ ಮಾಡಿಕೊಂಡು ಬರುತ್ತಿರುವ ಅನುಶ್ರೀ ಅವರು ಇದೀಗ ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ ಅನ್ನೋ ಮಾತು ಇದೆ. ಅದರಲ್ಲೂ ಈ ಸ್ಟಾರ್ ನಿರೂಪಕಿಯ ಒಟ್ಟು ಆಸ್ತಿ ಸುಮಾರು 50 ಕೋಟಿ ರೂಪಾಯಿಗೂ ಹೆಚ್ಚು ಅನ್ನೋ ಮಾತನ್ನ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಾರೆ ಜನ.

ಆದರೆ ಈ ಬಗ್ಗೆ ಅಂದ್ರೆ, ತಮ್ಮ ಆಸ್ತಿ ಬಗ್ಗೆ ಅನುಶ್ರೀ ಅವ್ರು ಯಾವುದೆ ಅಧಿಕೃತ ಹೇಳಿಕೆ ನೀಡಿಲ್ಲ. ಇಷ್ಟೆಲ್ಲದರ ನಡುವೆ ಇದೀಗ ಆಂಕರ್ ಅನುಶ್ರೀ ಅವರು ತಮ್ಮ ಪ್ರೀತಿ & ಶ್ರೀಘ್ರದಲ್ಲಿಯೇ ತಮ್ಮ ಮದುವೆ ಆಗುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ ಎಂಬ ವಿಡಿಯೋ ವೈರಲ್ ಆಗುತ್ತಿದೆ. ಅದೇ ವಿಡಿಯೋ ಇಲ್ಲಿದೆ ನೋಡಿ.

ಅನುಶ್ರೀ ಅವರ ಮದುವೆ ಯಾವಾಗ?

ನೋಡಿದ್ರಲ್ಲ ವಿಡಿಯೋ, ಆಂಕರ್ ಅನುಶ್ರೀ ಅವರು ಏನ್ ಹೇಳಿದ್ದಾರೆ ಅಂತಾ. ಅಂದಹಾಗೆ ಈ ವಿಡಿಯೋದಲ್ಲಿ ಆಂಕರ್ ಅನುಶ್ರೀ, 'ನಿಮಗೆ ನನ್ನ ಪ್ರೀತಿಯ ಬಗ್ಗೆ ತುಂಬಾನೇ ಪ್ರಶ್ನೆಗಳಿವೆ. ಇದೆಲ್ಲದಕ್ಕೂ ಉತ್ತರ ಕೊಡಲು ನಾನೀಗ ಬರ್ತಿದ್ದೇನಿ. ಹೊಸ ಪ್ರೀತಿ & ಹೊಸ ಮದುವೆ ಜೊತೆ, ಬನ್ನಿ ಪ್ರೀತಿಯನ್ನು ಸೆಲೆಬ್ರೇಟ್ ಮಾಡೋಣ' ಅಂದಿದ್ದಾರೆ ಆಂಕರ್ ಅನುಶ್ರೀ.

ಹೀಗೆ ಇದೀಗ ಆಂಕರ್ ಅನುಶ್ರೀ ಅವರು ಪ್ರೀತಿ ಬಗ್ಗೆ ಮಾತನಾಡಿದ್ದರು ಕೂಡ ತಮ್ಮ ಪ್ರೀತಿ ಬಗ್ಗೆ ಅವರು ಹೇಳಿಕೆ ನೀಡಲ್ಲ ಎಂಬ ನೋವು ಅಭಿಮಾನಿಗಳಿಗೆ ಕಾಡುತ್ತಿದೆ. ಅದ್ರಲ್ಲೂ ತಮ್ಮ ನೆಚ್ಚಿನ & ಕನ್ನಡ ನಾಡಿನಲ್ಲಿ ಬಹುಸಂಖ್ಯಾತ ಟಿವಿ ವೀಕ್ಷಕರು ಇಷ್ಟಪಡುವ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಅನ್ನೋ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ. ಹೀಗಿದ್ದಾಗ ಶೀಘ್ರವೇ ಇದರ ಬಗ್ಗೆ ಅನುಶ್ರೀ ಮಾಹಿತಿ ನೀಡುತ್ತಾರೆ ಎಂಬ ನಿರೀಕ್ಷೆ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+