Pushpa 2: ತಲೆನೋವು ಬಂತು! ಪುಷ್ಪಾ 2 ಟ್ವಿಟರ್ ರಿಯಾಕ್ಷನ್ ಹೇಗಿದೆ?
ತೆಲುಗಿನ ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ಬಿಡುಗಡೆಯಾಗಿದೆ. ಪುಷ್ಪ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಭಾರಿ ಬಜೆಟ್‌ನಲ್ಲಿ ಪುಷ್ಪ 2 ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಡಿಸೆಂಬರ್ 5 ರಂದು ಸಿನಿಮಾ ಬಿಡುಗಡೆಯಾಗಿದೆ. ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಹಿಂದಿ ಮಲಯಾಳಂ ಭಾಷೆಗಳಲ್ಲೂ ಸಿನಿಮಾ ತೆರೆಗೆ ಬಂದಿದೆ. ಮೊದಲ ದಿನವೇ ಕಲೆಕ್ಷನ್‌ನಲ್ಲಿ ದಾಖಲೆ ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ಫಹಾದ್ ಫಸಿಲ್ ಕೂಡ ಇದ್ದು ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಆಂಧ್ರ, ತೆಲಂಗಾಣದಲ್ಲಿ ಮುಂಜಾನೆಯಿಂದಲೇ ಶೋಗಳು ಆರಂಭವಾಗಿವೆ. ಮೊದಲ ಸಿನಿಮಾ ನೋಡಿದವರು ಏನಂದ್ರು ಎನ್ನುವ ರಿಪೋರ್ಟ್ ಇಲ್ಲಿದೆ.

ಸಿನಿಮಾಗೆ ಮಿಶ್ರಪ್ರತಿಕ್ರಿಯೆ
ಬಹುನಿರೀಕ್ಷಿತ ಪುಷ್ಪ 2 ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಮಾತ್ರ ಸಿನಿಮಾ ಇಷ್ಟವಾಗುತ್ತಿದ್ದಂತೆ ಸಾಮಾನ್ಯ ಪ್ರೇಕ್ಷಕರು ಸಿನಿಮಾ ನೋಡಿ ಬೇಸರಗೊಂಡಿದ್ದಾರೆ. ಇನ್ನೂ ಕೆಲವರಿಗೆ ಸಿನಿಮಾದ ಅವಧಿ 3 ಗಂಟೆ 22 ನಿಮಿಷ ಇರುವುದು ತಲೆನೋವು ತರಿಸಿದೆ.
ಸಿನಿಮಾದಲ್ಲಿ ಕಥೆಯೇ ಇಲ್ಲ ಕೇವಲ ಅಲ್ಲು ಅರ್ಜುನ್‌ಗೆ ಬಿಲ್ಡಪ್ ಕೊಡುವ ದೃಶ್ಯಗಳನ್ನು ಇಟ್ಟು ಸಿನಿಮಾ ಮಾಡಲಾಗಿದೆ. ಎರಡು ಫೈಟ್ ದೃಶ್ಯಗಳನ್ನು ಬಿಟ್ಟರೆ ಸಿನಿಮಾದಲ್ಲಿ ಮತ್ತೇನೂ ಇಲ್ಲ ಎಂದು ಹಲವು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾದಲ್ಲಿ ವಿಶೇಷ ಕತೆ ಏನೂ ಇಲ್ಲ, ಮಾಸ್ ಡೈಲಾಗ್, ಒಂದೆರಡು ಫೈಟ್ ಮತ್ತು ಹಾಡುಗಳಷ್ಟೇ ಮಿಕ್ಕಿದ್ದೆಲ್ಲಾ ಬೋರ್ ಎನ್ನುತ್ತಿದ್ದಾರೆ. ಅಲ್ಲು ಅರ್ಜುನ್ ಆಕ್ಟಿಂಗ್ ಮೆಚ್ಚಿಕೊಂಡಿದ್ದರೂ, ಸಿನಿಮಾದಲ್ಲಿ ಕಥೆ, ಚಿತ್ರಕಥೆ ಇನ್ನಷ್ಟು ಚನ್ನಾಗಿರಬೇಕಿತ್ತು ಎನ್ನುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ.
ಒಂದಷ್ಟು ಮಂದಿಗೆ ಸಿನಿಮಾ ಸ್ವಲ್ಪವೂ ಇಷ್ಟವಾಗಿಲ್ಲ. ಯಾಕಾದರೂ ಈ ಸಿನಿಮಾಗೆ ಬಂದೆನೋ ಎಂದು ಬರೆದುಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಇದು ದೊಡ್ಡ ತಲೆನೋವು, ಒಂಚೂರು ಚನ್ನಾಗಿಲ್ಲ ಎಂದು ಹೇಳಿರುವ ವಿಡಿಯೋ ಎಕ್ಸ್‌ನಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಜೈ ಎಂದ ಅಲ್ಲು ಅರ್ಜುನ್ ಅಭಿಮಾನಿಗಳು
ಸಾಮಾನ್ಯ ಪ್ರೇಕ್ಷಕರಿಗೆ ಸಿನಿಮಾ ಅಷ್ಟೇನೂ ಇಷ್ಟವಾಗಿಲ್ಲವಾದರೂ, ಅಭಿಮಾನಿಗಳು ಮಾತ್ರ ಪುಷ್ಪ2 ಸಿನಿಮಾವನ್ನು ಅದ್ಬುತ ಎನ್ನುತ್ತಿದ್ದಾರೆ. ಅಲ್ಲು ಅರ್ಜುನ್ ಆಕ್ಷನ್, ಡ್ಯಾನ್ಸ್‌ಗೆ ಅವರ ಅಭಿಮಾನಿಗಳು ಮಾರುಹೋಗಿದ್ದಾರೆ. ಅಲ್ಲು ಅರ್ಜುನ್ ಅಭಿನಯಕ್ಕೆ ಇನ್ನೊಂದು ರಾಷ್ಟ್ರಪ್ರಶಸ್ತಿ ಸಿಗುತ್ತೆ ಎಂದು ಹೇಳುತ್ತಿದ್ದಾರೆ.
ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಸಿನಿಮಾ ಮೊದಲ ದಿನ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಸಿನಿಮಾಗೆ ಹೆಚ್ಚಿನ ನಿರೀಕ್ಷೆ ಇದ್ದ ಕಾರಣ ಅಭಿಮಾನಿಗಳು ಇನ್ನು ಎರಡು ಮೂರು ದಿನ ಸಿನಿಮಾ ನೋಡಲಿದ್ದಾರೆ. ಸೋಮವಾರದ ಬಳಿಕ ಪುಷ್ಪ 2 ಸಿನಿಮಾದ ನಿಜವಾದ ಹಣೆಬರಹ ಗೊತ್ತಾಗಲಿದೆ.












Click it and Unblock the Notifications