ನೆಲದ ಮೇಲೆ ಕೂತು ಸಿನಿಮಾ ನೋಡಿದ ‘ಡಿ-ಬಾಸ್’ ದರ್ಶನ್!

ನಟ ದರ್ಶನ್ ಅವರು ಫ್ಯಾನ್ಸ್ ಕಡೆಯಿಂದ 'ಚಾಲೆಂಜಿಂಗ್ ಸ್ಟಾರ್' ಎಂಬ ಬಿರುದು ಪಡೆದಿದ್ದು ಪ್ರತಿ ಸಿನಿಮಾದಲ್ಲೂ ಹೊಸ ಹೊಸ ಚಾಲೆಂಜ್ ತೆಗೆದುಕೊಳ್ಳುತ್ತಾರೆ. ಇದೀಗ ಅವರ ಹೊಸ ಸಿನಿಮಾ 'ಕಾಟೇರ' ಅದ್ಧೂರಿಯಾಗಿ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿ ಕೋಟಿ ಕೋಟಿ ಬಾಚಿದೆ. ಇದೇ ಸಮಯದಲ್ಲಿ ಕನ್ನಡ ಸಿನಿಮಾ ರಂಗದ ನಟರಿಗೆ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿತ್ತು ಆಗ ದರ್ಶನ್ ಅವರು ಕೆಳಗೆ ಕೂತು ಸಿನಿಮಾ ನೋಡಿದ್ದಾರೆ.

ಹೌದು, ನಟ ದರ್ಶನ್ ಅಂದ್ರೆ ಸಿಂಪ್ಲಿಸಿಟಿ ಅಂತಾರೆ ಅವರ ಫ್ಯಾನ್ಸ್. ಯಾಕಂದ್ರೆ ಸಿನಿಮಾ ಹೊರತು ಹೆಚ್ಚು ಆಡಂಬರ ತೋರದ ಈ ನಟ ಯಾವಾಗಲೂ ಡೌನ್ ಟು ಅರ್ಥ್ ಅನ್ನೋದು, ಅವರ ಅಭಿಮಾನಿಗಳ ಮಾತು. ಈ ಮಾತಿಗೆ ಪುಷ್ಟಿ ನೀಡುವಂತೆ ಈಗ ನಟ ದರ್ಶನ್ ಅವರು, ನೆಲದ ಮೇಲೆ ಕೂತು ಸಿನಿಮಾ ನೋಡಿದ್ದಾರೆ. ಅದ್ರಲ್ಲೂ ಕನ್ನಡ ಸಿನಿಮಾ ರಂಗದ ದಿಗ್ಗಜರು ಆಗಮಿಸಿದ್ದ ಸಮಯದಲ್ಲೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಾವೆಷ್ಟು ಸಿಂಪಲ್, ತಾವು ಹೇಗೆ ಡೌನ್ ಟು ಅರ್ಥ್ ಅನ್ನೋದನ್ನು ತಿಳಿಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದ್ದು, ಮುಂದೆ ಓದಿ.

This Is How The Challenging Star Darshan Watched His Own Movie In Theater

ನೆಲದ ಮೇಲೆ ಕೂತರಾ ನಟ ದರ್ಶನ್?

ಅಂದಹಾಗೆ ಕಾಟೇರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಾಕ್ಸ್ ಆಫಿಸ್ ಧೂಳ್ ಧೂಳ್ ಮಾಡುತ್ತಿದೆ. ಹೀಗಿದ್ದಾಗ, ಕನ್ನಡ ಚಿತ್ರರಂಗದ ನಟ & ನಟಿಯರಿಗೆ ಅಂತಾ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿತ್ತು. ನಿನ್ನೆ ಬೆಂಗಳೂರಿನ ಒರಿಯಾನ್‌ ಮಾಲ್‌ನಲ್ಲಿ ಕಾಟೇರ ಸಿನಿಮಾ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ಚಂದನ ವನದಿಂದ, ಹಿರಿಯ ನಟ & ನಟಿಯರ ದಂಡೇ ಕಾಟೇರ ನೋಡಲು ಬಂದಿತ್ತು. ಈ ವೇಳೆ ನಟ ದರ್ಶನ್ ವಿಶೇಷವಾಗಿ ತಮ್ಮ ಸಿನಿಮಾವನ್ನೇ ನೋಡಿದ್ದಾರೆ! ಅದು ಹೇಗೆ ಗೊತ್ತಾ?

ಮೆಟ್ಟಿಲುಗಳ ಮೇಲೆ ಕೂತ ದರ್ಶನ್

ಹಿರಿಯ ನಟಿ ಬಿ.ಸರೋಜಾ ದೇವಿ, ರಮೇಶ್‌ ಅರವಿಂದ್‌, ಯೋಗರಾಜ್‌ ಭಟ್‌, ಅಮೂಲ್ಯ, ಶ್ರೀಮುರಳಿ, ನಟ ಡಾಲಿ ಧನಂಜಯ್, ನಿನಾಸಂ ಸತೀಶ್, ರಿಯಲ್ ಸ್ಟಾರ್ ಉಪೇಂದ್ರ & ಹಲವು ನಟರು ಆಗಮಿಸಿದ್ದರು. ಆಗ ಸ್ವತಃ ದರ್ಶನ್‌ ಅವರಿಗೆ ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಅವರಿಗೂ ಕುಳಿತುಕೊಳ್ಳಲು ಸೀಟ್‌ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಸಿನಿಮಾವನ್ನ ನೋಡಲು, ಸಿನಿಮಾ ಮಂದಿರದ ಮೆಟ್ಟಿಲು ಮೇಲೆ ಕುಳಿತುಕೊಂಡೇ ಸಿನಿಮಾ ವೀಕ್ಷಿಸಿದ್ದಾರೆ. ಸದ್ಯ ಈ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಇದೇ ವೇಳೆ ನಟ ದರ್ಶನ್ ಅವರ ಸಿಂಪ್ಲಿಸಿಟಿಗೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ ಫ್ಯಾನ್ಸ್.

This Is How The Challenging Star Darshan Watched His Own Movie In Theater

ತುಂಬಿ ತುಳುಕಿದ ಚಿತ್ರಮಂದಿರಗಳು

ಇಷ್ಟೆಲ್ಲದರ ನಡುವೆ ಕನ್ನಡ ಸಿನಿಮಾ ರಂಗದಲ್ಲಿ ಈಗ ಕಾಟೇರ ತಲ್ಲಣ ಸೃಷ್ಟಿ ಮಾಡಿದೆ. ಹಾಗೇ ದಿನದಿಂದ ದಿನಕ್ಕೆ ತನ್ನ ಥಿಯೇಟರ್ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಿದೆ. ಅದರಲ್ಲೂ ಸಿಂಗಲ್ ಸ್ಕ್ರೀನ್ ಕಾಟೇರ ಸಿನಿಮಾಗೆ ಮೀಸಲಾಗಿ ನಿಂತಿವೆ ಎನ್ನುವಷ್ಟರ ಮಟ್ಟಿಗೆ ಕಾಟೇರ ಚಿತ್ರ ಈಗ ಅಬ್ಬರಿಸುತ್ತಿದೆ. ಈಗಾಗಲೇ 100 ಕೋಟಿ ರೂ. ಗಳಿಸುವುದಕ್ಕೂ, ಈ ಸಿನಿಮಾ ತುಂಬಾನೆ ಹತ್ತಿರದಲ್ಲಿದೆ. ಹಾಗೇ ಈಗಲೂ ಸಿನಿಮಾ ಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣ್ತಿವೆ.

ಒಟ್ನಲ್ಲಿ ಕಾಟೇರ ಸಿನಿಮಾ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು, ಬಾಕ್ಸ್ ಆಫಿಸ್ ದಾಖಲೆಗಳನ್ನೆಲ್ಲಾ ಹಿಂದಿಕ್ಕಿದೆ. ಹೀಗಾಗಿ ನಟ ದರ್ಶನ್ ಅವರ ಅಭಿಮಾನಿಗಳು ಕೂಡ ಈಗ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಹಾಗೇ ತಮ್ಮ ನೆಚ್ಚಿನ ನಟ ಸಿನಿಮಾ ನೋಡಿ ಹೊಸ ವರ್ಷವನ್ನೂ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಈ ಮೂಲಕ ಮತ್ತಷ್ಟು ಉತ್ತಮ ಚಿತ್ರಗಳು ಕನ್ನಡ ಸಿನಿಮಾ ರಂಗದಲ್ಲಿ, ಅದ್ಧೂರಿಯಾಗಿ ರಿಲೀಸ್ ಆಗಲಿ ಎಂಬ ಆಶಯ ಕೂಡ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+