Troll ಅನ್ನೋ ಪದಕ್ಕೆ Evaga ಅರ್ಥ ಬಂತು: ಉಪೇಂದ್ರ ಹಾಡಿನ ಬಗ್ಗೆ ಬಂದ ಕಮೆಂಟ್‌ಗಳನ್ನ ನೋಡಿ!
ನಟ ಉಪೇಂದ್ರ ಅಂದರೆ ಟ್ರೆಂಡ್ ಸೆಟ್ಟರ್, ಉಪ್ಪಿ ಏನೇ ಮಾಡಿದ್ರೂ ಅದು ಸಖತ್ ಸೌಂಡ್ ಮಾಡುತ್ತೆ. ಇಂತಿಪ್ಪ ಉಪೇಂದ್ರ ಅವರು ಇದೀಗ ತಮ್ಮ ಮುಂದಿನ ಸಿನಿಮಾ, ಬಹುನಿರೀಕ್ಷಿತ ಯುಐ (UI) ಚಿತ್ರದ 2ನೇ ಹಾಡು ರಿಲೀಸ್ ಮಾಡಿದ್ದು. ಈ ಸಾಂಗ್‌ಗೆ 'ಟ್ರೋಲ್ ಸಾಂಗ್' ಅಂತ ಸ್ಪೆಷಲ್ ನೇಮ್ ಕೂಡ ಕೊಟ್ಟಿದ್ದಾರೆ. ಈ ಹಾಡು ಮಧ್ಯಾಹ್ನ ರಿಲೀಸ್ ಆಗಿ, ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಹಾಗಾದ್ರೆ ಉಪೇಂದ್ರ ಅವರ ಹಾಡಿಗೆ ಬಂದಿರುವ ಕಮೆಂಟ್‌ಗಳು, ಎಷ್ಟು ಡಿಸೈನ್ ಡಿಸೈನ್ ಆಗಿವೆ ಗೊತ್ತಾ?
ರಿಯಲ್ ಸ್ಟಾರ್ ಉಪೇಂದ್ರ ಮತ್ತೊಮ್ಮೆ ಸಂಚಲನ ಸೃಷ್ಟಿ ಮಾಡಿದ್ಧಾರೆ. 'ಯುಐ' ಸಿನಿಮಾದ 2ನೇ ಹಾಡು ಇಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಸೋಷಿಯಲ್ ಮೀಡಿಯಾ ಪೂರ್ತಿ ಈಗ ಇದೇ ಹಾಡು ಸಂಚಲನ ಸೃಷ್ಟಿ ಮಾಡಿದೆ. ಹಾಗೇ ಅಭಿಮಾನಿಗಳು ಕೂಡ ಈ ಹಾಡನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೆ 'ಯುಐ' ಸಿನಿಮಾ ಹಾಡು ಪರಭಾಷೆ ಅಂದ್ರೆ ಅಕ್ಕಪಕ್ಕದ ರಾಜ್ಯಗಳಲ್ಲೂ ಭರ್ಜರಿ ಸದ್ದು ಮಾಡುತ್ತಿದೆ. ವಿವಿಧ ಭಾಷೆಗಳಲ್ಲಿ 'ಟ್ರೋಲ್ ಸಾಂಗ್' ರಿಲೀಸ್ ಮಾಡಿರುವ ನಟ ಉಪೇಂದ್ರ, ಅಲ್ಲಿಯೂ ಹವಾ ಎಬ್ಬಿಸಿದ್ದಾರೆ. ಹಾಗೇ ಕನ್ನಡಿಗರ ಹಾಡಿಗೆ ಅಭಿಮಾನಿಗಳ ಕಮೆಂಟ್ ಹೇಗಿತ್ತು ಗೊತ್ತಾ? ಬನ್ನಿ ತಿಳಿಯೋಣ.

'Troll ಅನ್ನೋ ಪದಕ್ಕೆ Evaga..'
'ಯುಐ' ಸಿನಿಮಾ 'ಟ್ರೋಲ್ ಸಾಂಗ್' ರಿಲೀಸ್ ಆಗಿ ಅಬ್ಬರಿಸುತ್ತಿದೆ. ಉಪ್ಪಿ ಈಗ ಫುಲ್ ಟ್ರೆಂಡ್ ಕ್ರಿಯೇಟ್ ಮಾಡಿ ಧೂಳೆಬ್ಬಿಸಿದ್ದಾರೆ. ಯುಐ ಸಿನಿಮಾ ಮೇಲಿನ ಕುತೂಹಲ ಡಬಲ್ ಆಗುತ್ತಿದೆ. ಇನ್ನು ಈ ಹಿಂದೆ ಕೂಡ ಇದೇ ರೀತಿ ಯುಐ ಸಿನಿಮಾ ಹಲವು ಹಂತದಲ್ಲಿ ಸದ್ದು ಮಾಡಿ, ಗಮನ ಸೆಳೆದಿತ್ತು. ಈ ಬಗ್ಗೆ ಡಿಸೈನ್ ಡಿಸೈನ್ ಕಮೆಂಟ್ ಹಾಕುತ್ತಿರುವ ಅಭಿಮಾನಿಗಳು, ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಅಭಿಮಾನಿ, 'Troll ಅನ್ನೋ ಪದಕ್ಕೆ evaga ಅರ್ಥ ಬಂತು... ಬುದ್ಧಿವಂತ' ಎಂದು ಕಮೆಂಟ್ ಮಾಡಿದ್ದಾರೆ.
ಹಾಗೇ 'ಗುಮ್ಮಸ್ಕೊಂಡು ತಗಡಗೋದಾ.. ಬೆಳ್ಳುಲ್ಲಿ ಕಬಾಬ್.. ಕರಿಮಣಿ ಮಾಲಿ ಕಾ ಎನ್ lyrics..... troll song super..' ಮತ್ತೊಬ್ಬ ಅಭಿಮಾನಿ ಕಮೆಂಟ್ ಹಾಕಿದ್ದಾರೆ. ಇನ್ನೊಬ್ಬ ಉಪೇಂದ್ರ ಅವರ ಅಭಿಮಾನಿ, 'ಪಕ್ಕ ಇದು ಕೆಲ್ಸ ಇಲ್ದೊರ್ಗೆ ಟೈಮ್ ಪಾಸ್ ಆಗುತ್ತೆ ಉಪ್ಪಿ ಸರ್ ನಿಮ್ಮ ಯೋಚನೆಗಳಿಗೆ ನನ್ನದೊಂದು ಸಲಾಮ್' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೂ 'ಹ್ಯಾಟ್ಸಾಫ್ ಟು ಯು ಸಾರ್.. ಹ್ಯಾಟ್ಸಾಫ್ ಟು ಯು ಯಾರೂ ಮಾಡಕ್ ಸಾಧ್ಯ ಆಗಲ್ಲ' ಅಂತಾ ಇನ್ನೊಬ್ಬರು ಉಪೇಂದ್ರ ಅವರ ಅಭಿಮಾನಿ ಕಮೆಂಟ್ ಹಾಕಿ ಖುಷಿಪಟ್ಟಿದ್ದಾರೆ.
'ಟ್ರೋಲ್ ಸಾಂಗ್' ಹಾಡಿನ ಲಿರಿಕ್ಸ್
ಇತ್ತೀಚೆಗೆ ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗಿದ್ದ ಸ್ವತಃ ಉಪೇಂದ್ರ ಅವರೇ, ನಿರ್ದೇಶನ & ನಟನೆ ಮಾಡಿದ್ದ ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್, ಒನ್ ಮೋರ್ ಒನ್ ಮೋರ್ ಅನ್ನಬೇಕು... ಹೆಂಗ್ ಪುಂಗ್ಲಿ... ಆಲ್ ರೈಟ್ ಮುಂದಕ್ಕೋಗೋಣ... ಸೇರಿದಂತೆ ಜೋಡೆತ್ತು... ಇದು ರಾಜ್ಯವೇ ಖುಷಿಪಡುವ ಸುದ್ದಿ... ನಾ ಡ್ರೈವರಾ, ನನ್ನ ಲವರಾ.. ಹೇ ತಗಡು, ಗುಮ್ಮಿಸಿಕೊಳ್ತೀಯಾ... ಕಂಜಾಜುಲೆಷನ್ಸ್ ಬ್ರದರ್.. ನಾನು ನಂದಿನಿ ಪಿಜಿಯಲ್ಲಿ ಇರ್ತಿನಿ... ಡೋಲೋ 650 ಮಾತ್ರೆ ಬಿಸಿ ರಾಗಿಹಿಟ್ಟು... ಈ ಎಲ್ಲಾ ಟ್ರೋಲ್‌ಗಳು ಇದೀಗ ಉಪ್ಪಿ ಅವರ ಬಹು ನಿರೀಕ್ಷಿತ ಯುಐ (UI) ಸಿನಿಮಾ ಹಾಡಿನಲ್ಲಿ ಫುಲ್ ಟ್ರೋಲ್ ಆಗಿವೆ.

ಹಾಡು ಬರೆದವರು ಯಾರಪ್ಪಾ?
ಅಂದಹಾಗೆ ಉಪೇಂದ್ರ ತಮ್ಮ ಯಾವುದೇ ಸಿನಿಮಾದಲ್ಲೂ ಪಕ್ಕಾ ಒಂದೊಂದು ಸರ್ಪ್ರೈಸ್ ಇಟ್ಟೇ ಇಟ್ಟಿರುತ್ತಾರೆ. ಅದರಲ್ಲೂ ಯುಐ (UI) ಸಿನಿಮಾದ ಹಾಡುಗಳು ಈಗ ಕುತೂಹಲದ ಖಜಾನೆ ಆಗಿದೆ. ಯುಐ ಸಿನಿಮಾದ 'ಟ್ರೋಲ್ ಸಾಂಗ್' ಇದೀಗ ಎಲ್ಲೆಲ್ಲೂ ಫುಲ್ ವೈರಲ್ ಆಗುತ್ತಿದೆ. ಈ ಹಾಡನ್ನ ನರೇಶ್ ಕುಮಾರ್ ಬರೆದಿದ್ದು, ಅಜನೀಶ್ ಲೋಕನಾಥ್ ಅವರಿಂದ ಇಂಪಾದ ಸಂಗೀತ ಪಡೆಯಲಾಗಿದೆ.












Click it and Unblock the Notifications