ರಶ್ಮಿಕಾ ಮಂದಣ್ಣ & ಅಲ್ಲು ಅರ್ಜುನ್ ಜೋಡಿಯ ‘ಪುಷ್ಪ-2’ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಈ ನಟಿ ಎಂಟ್ರಿ?
ನಟಿ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಜೋಡಿಯ ಬಹು ನಿರೀಕ್ಷಿತ ಸಿನಿಮಾಗೆ ಅಭಿಮಾನಿಗಳು ಕಾಯುತ್ತಿದ್ದಾರೆ. 'ಪುಷ್ಪ-1' ಮೂಲಕ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದ್ದ, ಹತ್ತಾರು ದಾಖಲೆ ಬರೆದಿದ್ದ ರಶ್ಮಿಕಾ & ಅಲ್ಲು ಅರ್ಜುನ್ ಮತ್ತೆ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. 'ಪುಷ್ಪ-2' ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿ ಅದ್ಧೂರಿಯಾಗಿ ಶೂಟಿಂಗ್ ನಡೆಯುತ್ತಿದೆ. ಹೀಗಿದ್ದಾಗ ಸ್ಟೈಲಿಶ್ ಸ್ಟಾರ್ & ಐಕಾನ್ ಸ್ಟಾರ್ ಬಿರುದಾಂಕಿತ ಅಲ್ಲು ಅವರ ಫ್ಯಾನ್ಸ್‌ಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಂದ್ರೆ ಇಂಡಿಯಾ ಮಾತ್ರವಲ್ಲ ವರ್ಲ್ಡ್ ವೈಡ್ ಕ್ರೇಜ್ ಇದೆ. ಭಾರತದ ಸಿನಿಮಾ ಪ್ರೇಮಿಗಳಿಗೆ ಮಾತ್ರವಲ್ಲದೆ, ಜಗತ್ತಿನಾದ್ಯಂತ ಅಲ್ಲು ಅರ್ಜುನ್ ಅಭಿಮಾನಿ ಸಾಗರವನ್ನೇ ಸಂಪಾದಿಸಿದ್ದಾರೆ. ಇಂತಿಪ್ಪ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ರ ಪುಷ್ಪ-2ಗಾಗಿ, ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲೂ ಭರ್ಜರಿ ಐಟಂ ಸಾಂಗ್‌ಗಾಗಿ ಫ್ಯಾನ್ಸ್ ಕಾಯುತ್ತಿರುವಾಗ ಗುಡ್ ನ್ಯೂಸ್ ಸಿಕ್ಕಿದೆ. 'ಪುಷ್ಪ-1' ಸಿನಿಮಾದಲ್ಲಿ ನಟಿ ಸಮಂತಾ ಅವರು ಮಿಂಚಿದ್ದರು, ಇದೀಗ 'ಪುಷ್ಪ-2' ಐಟಂ ಸಾಂಗ್‌ಗೆ ಬಾಲಿವುಡ್ ನಟಿಯೇ ಬರ್ತಾ ಇದ್ದಾರಂತೆ! ಆ ಬಾಲಿವುಡ್ ಬ್ಯೂಟಿ ಯಾರು ಗೊತ್ತೆ?

ಐಟಂ ಸಾಂಗ್‌ಗೆ ಬಾಲಿವುಡ್ ನಟಿ ಡಾನ್ಸ್?
ಟಾಲಿವುಡ್ ಡೈರೆಕ್ಟರ್ ಸುಕುಮಾರ್, ಅಲ್ಲು ಅರ್ಜುನ್ ಮತ್ತೆ ಬಾಕ್ಸಾಫೀಸ್ ಉಡೀಸ್ ಮಾಡಲು ಸಜ್ಜಾಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪುಷ್ಪ-2 ಶೂಟ್ ಭರ್ಜರಿಯಾಗಿ ನಡೆಯುತ್ತಿದೆ ಪುಷ್ಪ-1 ಮೂಲಕ ಫ್ಯಾನ್ಸ್ ಎದೆಯಲ್ಲಿ ಹಲ್‌ಚಲ್ ಎಬ್ಬಿಸಿದ್ದ ಪುಷ್ಪರಾಜ್‌ಗಾಗಿ ಕೋಟ್ಯಂತರ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಹೊತ್ತಲ್ಲೇ ಅಲ್ಲು ಅರ್ಜುನ್ ಫ್ಯಾನ್ಸ್ ಖುಷಿಪಡುವ ಸುದ್ದಿ ಸಿಕ್ಕಿದ್ದು, ಬಾಲಿವುಡ್ ಸ್ಟಾರ್ ನಟಿಯರಾದ ಕೃತಿ ಸನೋನ್ ಅಥವಾ ದಿಶಾ ಪಟಾನಿ ಅವರು 'ಪುಷ್ಪ-2' ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ.
ಯಾವಾಗ ರಿಲೀಸ್ ಆಗುತ್ತೆ 'ಪುಷ್ಪ-2'?
2024ರ ಆಗಸ್ಟ್ 15ಕ್ಕೆ 'ಪುಷ್ಪ-2' ತೆರೆಗೆ ಅಪ್ಪಳಿಸಲಿದ್ದು ಈ ಬಾರಿಯು ಸಖತ್ ಸದ್ದು ಮಾಡುವ ನಿರೀಕ್ಷೆ ಹುಟ್ಟುಹಾಕಿದೆ. ಸುಮಾರು 200 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ 'ಪುಷ್ಪ-1' 350 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಪುಷ್ಪ 1 ಯಶಸ್ಸಿನ ಬಳಿಕ ಪುಷ್ಪ-2 ಕಣ್ತುಂಬಿಕೊಳ್ಳಲು ಅಲ್ಲು ಅರ್ಜುನ್ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಾಗಿ 'ಪುಷ್ಪ-2' ರಿಲೀಸ್ ಡೇಟ್ ಘೋಷಣೆ ಮಾಡಲಾಗಿತ್ತು. ಇದೀಗ ಐಟಂ ಸಾಂಗ್‌ಗೆ ಬಾಲಿವುಡ್ ನಟಿಯನ್ನ ಕೂಡ ಕರೆಸುವ ಮುನ್ಸೂಚನೆ ಸಿಕ್ಕಿದೆ. ಆದರೆ ಸಿನಿಮಾ ತಂಡ ಈ ವಿಚಾರವನ್ನ ಇನ್ನೂ ಘೋಷಣೆ ಮಾಡಿಲ್ಲ.

ಅಭಿಮಾನಿಗಳ ಕುತೂಹಲ ಡಬಲ್
ಭಾರತದ ಮೂಲೆ ಮೂಲೆಯಲ್ಲೂ ಅಲ್ಲು ಅರ್ಜುನ್‌ಗೆ ಫ್ಯಾನ್ಸ್ ಇದ್ದಾರೆ. ಇವರೆಲ್ಲಾ ಪುಷ್ಪ-2 ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಕೊಂಡಿದ್ದಾರೆ. ಹತ್ತಿರ ಹತ್ತಿರ 2 ವರ್ಷದಿಂದ ಪುಷ್ಪ-2 ಸಿನಿಮಾಗೆ ಕಾಯುತ್ತಿದ್ದಾರೆ. ಹೀಗಾಗಿಯೇ ಅವರಿಗೆ ಸಿಹಿಸುದ್ದಿ ನೀಡಲು ಅಲ್ಲು ಅರ್ಜುನ್ ಹಗಲು-ರಾತ್ರಿ ಲೆಕ್ಕಿಸದೆ ಶೂಟಿಂಗ್ ನಡೆಸುತ್ತಿದ್ದಾರೆ. 'ಪುಷ್ಪ-2' ರಿಲೀಸ್ ಡೇಟ್ ಕೂಡ ಫೈನಲ್ ಆಗಿದ್ದು, ಫ್ಯಾನ್ಸ್ ಬೆಳ್ಳಿತೆರೆ ಮೇಲೆ ಸಿನಿಮಾ ಕಣ್ತುಂಬಿಕೊಳ್ಳಬಹುದು. ಅದಕ್ಕೂ ಮೊದಲಿಗೆ, ಐಟಂ ಸಾಂಗ್‌ಗೆ ಹೆಜ್ಜೆ ಹಾಕೋ ನಟಿ ಬಗ್ಗೆ ಕುತೂಹಲ ಡಬಲ್ ಆಗಿದೆ.

ಒಟ್ನಲ್ಲಿ ನಟ ಅಲ್ಲು ಅರ್ಜುನ್ ಭರ್ಜರಿಯಾಗಿ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ತಮ್ಮ ಖದರ್ ತೋರಿಸಲು ಸಜ್ಜಾಗಿದ್ದಾರೆ. ಹೀಗಿದ್ದಾಗಲೇ ಬಾಲಿವುಡ್ ನಟಿ ಕೂಡ ಈ ಸಿನಿಮಾಗೆ ಸಾಥ್ ನೀಡಲು ರೆಡಿ ಆಗ್ತಿದ್ದಾರೆ ಎಂಬ ಮಾತು ಸಖತ್ ಗಮನ ಸೆಳೆದಿದೆ. ಹೀಗೆ ಕುತೂಹಲ ಕೂಡ ಡಬಲ್ ಆಗಿದ್ದು, ಎಲ್ಲದಕ್ಕೂ ಉತ್ತರ ಸಿಗಲು ಮತ್ತಷ್ಟು ದಿನ ಕಾಯಬೇಕಿದೆ.












Click it and Unblock the Notifications