"ನಿನ್ನ ಫೋಟೋ ಜೊತೆ ರೇಟು ಕೂಡ ಇದೆ ಅಂದ್ರು, ಅಂತವ್ರು ವೃದ್ಧರು, ನಾಯಿಯನ್ನೂ ಬಿಡಲ್ಲ": ನಟಿ ಆಕ್ರೋಶ!
ಬಣ್ಣದ ಲೋಕದಲ್ಲಿ ದಿನಕ್ಕೊಂದು ಸುದ್ದಿ ಬರುತ್ತಿರುತ್ತವೆ. ಅದರಲ್ಲೂ ಕೆಲವು ನಟಿಯರು ಗಂಭೀರವಾದ ಆರೋಪಗಳು ಮತ್ತು ಅವರಿಗೆ ನಡೆದ ಅನ್ಯಾಯಗಳನ್ನು ಹೇಳುತ್ತಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಉದಯೋನ್ಮುಖ ನಟರಿಗೂ ಈ ರೀತಿಯ ಅನುಭವಗಳು ಆಗಿರುವುದು ಇದೆ. ಅಲ್ಲದೇ ಕೆಲವರು ನಟರೂ ಸಹ ತಮಗೆ ಆಗಿರುವ ಕಮಿಟ್‌ಮೆಂಟ್ ಅಥವಾ ಕೆಟ್ಟ ಅನುಭವಗಳ ಬಗ್ಗೆ ಹಂಚಿಕೊಂಡಿರುವುದು ಇದೆ. ಇದೀಗ ನಟಿಯೊಬ್ಬರು ಗಂಭೀರವಾದ ಆರೋಪವನ್ನು ಶೇರ್ ಮಾಡಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಕನ್ನಡವೂ ಸೇರಿದಂತೆ ದೇಶದ ಚಿತ್ರರಂಗದಲ್ಲಿ ಸೆಕ್ಸ್ ಕಿರುಕುಳ ಪ್ರಕರಣಗಳ ಬಗ್ಗೆ ಆಗ್ಗಾಗ್ಗೆ ವರದಿಗಳು ಆಗುತ್ತಲ್ಲೇ ಇರುತ್ತವೆ. ಹಲವು ನಟಿಯರು ಈಗೆಲ್ಲ ಧೈರ್ಯವಾಗಿ ತಮಗೆ ಆದ ಕೆಟ್ಟ ಅನುಭವಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದು ಇದೆ. ಯಾರೂ ಸಹ ಮೊದಲ ರೀತಿ ಇರ್ಲಿ ಬಿಡು ಅಂತ ಮೂವ್ ಆಗುವುದು ಇಲ್ಲ. ಅಥವಾ ಈ ಹಿಂದೆಯೂ ವಿರೋಧಾಭಾಸಗಳು ಇದ್ದರೂ ಸೋಷಿಯಲ್ ಮೀಡಿಯಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರೀಚ್ ಆಗದ ಕಾರಣಕ್ಕೆ ಎಲ್ಲವೂ ತಿಳಿಯುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದ್ದು, ನಟಿಯರು ತಮಗೆ ಆಗಿರುವ ಕೆಟ್ಟ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ.

ಅದರಲ್ಲೂ ಮುಖ್ಯವಾಗಿ ಮೀಟೂ ಅಭಿಯಾನವಾದ ಮೇಲೆ ನಟಿಯರು ಸಿನಿಮಾ ರಂಗದ ಕೆಲವೊಂದು ವಿಚಾರಗಳನ್ನು ಮುಕ್ತವಾಗಿಯೇ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅವಕಾಶಗಳಿಗಾಗಿ ನಿರ್ಮಾಪಕ ಅಥವಾ ನಿರ್ದೇಶಕರು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂದು ನಟಿಯರು ಅವರ ಹೆಸರನ್ನೂ ಹೇಳಿಕೊಂಡು, ಕೆಟ್ಟ ಅನುಭವಗಳನ್ನು ಹಂಚಿಕೊಂಡಿರುವುದು ಇದೆ. ನಿರ್ಮಾಪಕರು, ನಟರೂ ಸಹ ಯಾರ ರೀತಿ ಕಿರುಕುಳ ಕೊಡುವುದಿದೆ ಎನ್ನುವ ವಿಷಯವನ್ನು ಹಂಚಿಕೊಳ್ಳುವುದೂ ಇದೆ. ಇದೀಗ ನಟಿಯೊಬ್ಬರು ಇಂತಹದ್ದೇ ಒಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ನೈನಿಖಾ ಅನಸುರು ಬಿಗ್ ಬಾಸ್ ತೆಲುಗು ಸೀಸನ್ 8 ರ ಸ್ಪರ್ಧಿಯಾಗಿದ್ದಾರೆ. ಈ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ನಟಿಗೆ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಬಿಗ್ ಬಾಸ್ ಸೀಸನ್ 8ರಲ್ಲಿ ತಮ್ಮದೇ ವಿಶಿಷ್ಟ ಶೈಲಿಯಿಂದ ತೆಲುಗು ಜನರನ್ನು ಅವರು ಸೆಳೆದಿದ್ದಾರೆ. ರಿಯಾಲಿಟಿ ಶೋಗೆ ಎಂಟ್ರಿ ಕೊಡುವುದಕ್ಕಿಂತ ಮುಂಚೆ ನಟಿ ನೈನಿಖಾ ಸೋಶಿಯಲ್ ಮೀಡಿಯಾಗಳಲ್ಲಿ ಡ್ಯಾನ್ಸ್‌ನಿಂದ ಫೇಮಸ್ ಆಗಿದ್ದರು. ಅಲ್ಲದೇ 'ಢೀ' ನಂತಹ ಡ್ಯಾನ್ಸಿಂಗ್ ಶೋನಲ್ಲೂ ಮಿಂಚಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನೈನಿಖಾ ಅವರು ಇತ್ತೀಚೆಗೆ ಜಬರ್‌ದಸ್ತ್ ವರ್ಷಾ ನಿರೂಪಣೆ ಮಾಡುತ್ತಿರುವ ಸೆಲೆಬ್ರಿಟಿ ಟಾಕ್ ಶೋ 'ಕಿಸ್ಸಿಕ್ ಟಾಕ್ಸ್' ಎನ್ನುವ ಶೋಗೆ ಅತಿಥಿಯಾಗಿ ಭಾಗವಹಿಸಿದ್ದರು. ಈ ಟಾಕ್ ಶೋಗೆ ಈಗಾಗಲೇ ತೆಲುಗಿನ ಹಲವು ತಾರೆಯರು ಆಗಮಿಸಿ ತಮ್ಮ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿರುವುದು ಇದೆ. ನೈನಿಖಾ ಅವರು ಸಹ ಕೆಲವು ವಿಷಯಗಳನ್ನು ಈ ಶೋನಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಕಾಸ್ಟಿಂಗ್ ಕೌಚ್ ಸಹ ಸೇರಿದೆ.
ಕೆಲವರು ಅವರಿಗೆ ಮಾಡಿರುವ ಮೋಸವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಗಾಗಿ ನನ್ನ ವೃತ್ತಿಜೀವನವನ್ನೂ ಪಕ್ಕಕ್ಕಿಟ್ಟು ಹೋರಾಡಿದೆ. ನನ್ನ ಜೀವನದಲ್ಲಿ ಇಂತಹದ್ದೊಂದು ತಪ್ಪು ಅನ್ನು ಮಾಡಬಾರದಿತ್ತು. ಹೀಗೇಕೆ ಮಾಡಿದೆ ಎಂದು ಹಲವು ಬಾರಿ ನೋವು ಅನುಭವಿಸಿದ್ದೇನೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ನನಗೆ ಹೀಗೆ ಆಗಿತ್ತು. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವವರಿಗೆ ನಾನು ಒಂದೇ ಮಾತು ಹೇಳೋದು. ದೇವರು ನೋಡಿಕೊಳ್ಳುತ್ತಾನೆ ಎಂದಿದ್ದಾರೆ.
ಮುಂದುವರಿದು ಈ ಶೋನಲ್ಲಿ ಕಾಸ್ಟಿಂಗ್ ಕೌಚ್ ಅನುಭವವನ್ನೂ ಹಂಚಿಕೊಂಡಿದ್ದಾರೆ. ನಾನು ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ಒಬ್ಬರು ನನಗೆ ಫೋನ್ ಕರೆ ಮಾಡಿ, ನಿನ್ನ ಫೋಟೋಗಳ ಜೊತೆ ನಿನ್ನ ರೇಟು ಕೂಡ ಹರಿದಾಡುತ್ತಿದೆ ಅಂತ ಹೇಳಿದ್ದ. ಅಂತಹವರು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು, ಅಷ್ಟೇ ಯಾಕೆ ನಾಯಿಯನ್ನು ಬಿಡುವುದಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications