ಬಿಗ್‌ಬಾಸ್ ಹೊಸ ಅಪ್ಡೇಟ್: ಶೀಘ್ರದಲ್ಲೇ ಮುಕ್ತಾಯವಾಗಲಿದೆ ಈ ಟಾಪ್ ಧಾರಾವಾಹಿಗಳು
ಬೆಂಗಳೂರು, ಆಗಸ್ಟ್ 16: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ದಿನದಿಂದ ದಿನಕ್ಕೆ ಹೊಸ ಹೊಸ ಅಪ್ಡೇಟ್ ಸಿಗುತ್ತಲೇ ಇದೆ. ಈಗಾಗಲೇ ಕನ್ನಡದಲ್ಲಿ 10 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋ ತಂಡ ಸದ್ಯ ಸೀಸನ್ 11ರ ಸಿದ್ಧತೆಯಲ್ಲಿದೆ. ಇದೇ ಅಕ್ಟೋಬರ್ ಮೊದಲ ವಾರದಲ್ಲಿ ಅಥವಾ ಸಂಪ್ಟೆಂಬರ್ ಕೊನೆಯ ವಾರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗುವ ಎಲ್ಲಾ ಸಾಧ್ಯತೆಗಳಿದೆ.
ಲಕ್ಷಾಂತರ ಪ್ರೇಕ್ಷಕರ ಮೆಚ್ಚಿನ ಶೋಗೆ ತೆರೆ ಮರೆಯಲ್ಲಿ ಸಿದ್ಧತೆ ಆರಂಭವಾಗಿದೆ. ಬಿಗ್ ಬಾಸ್ ತಂಡ ಸ್ಪರ್ಧಿಗಳ ಪಟ್ಟಿ ಸಿದ್ಧವಾಗುತ್ತಿದ್ದು, ಬೇರೆ ಬೇರೆ ಕ್ಷೇತ್ರಗಳ ವಿಭಿನ್ನ ಮನಸ್ಥಿತಿಯ 16 ಜನರನ್ನು ಒಂದೇ ಮನೆಯಲ್ಲಿ ಇರಿಸಿ ನೂರು ದಿನಗಳನ್ನು ದಾಟಿಸಲು ಭರ್ಜರಿ ಸಿದ್ಧತೆಯೇ ನಡೆಯುತ್ತಿದೆ. ಬಿಗ್ ಬಾಸ್ ಮನೆ, ಟಾಸ್ಕ್‌ಗಳು, ಸ್ಪರ್ಧಿಗಳ ಆಯ್ಕೆ ಸೇರಿದಂತೆ ಈ ಬಾರಿ ಬಿಗ್ಬಾಸ್ನಲ್ಲಿ ಬಹಳಷ್ಟು ಬದಲಾವಣೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಲವು ಧಾರಾವಾಹಿಗಳು ಅಂತ್ಯಗೊಳ್ಳಲಿದೆ. ಪ್ರತಿ ಬಾರಿಯೂ ಧಾರಾವಾಹಿಗಳು ಬಿಗ್ ಬಾಸ್‌ಗೆ ದಾರಿ ಮಾಡಿಕೊಟ್ಟು ಅಂತ್ಯಗೊಳ್ಳುತ್ತದೆ. ಈ ಬಾರಿಯೂ ಸಹ ಮೂರು ಜನಪ್ರಿಯ ಧಾರಾವಾಹಿಗಳು ಬಿಗ್ ಬಾಸ್ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಸದ್ಯ ಕಲರ್ಸ್ ಕನ್ನಡದಲ್ಲಿ ಬರುತ್ತಿರುವ ಎಲ್ಲಾ ಧಾರಾವಾಹಿಗಳು ಉತ್ತಮವಾಗಿದ್ದು, ಖಾಯಂ ಪ್ರೇಕ್ಷಕರನ್ನು ಗಳಿಸಿಕೊಂಡಿದೆ.

ಹೀಗಾಗಿ ಯಾವ ಧಾರಾವಾಹಿಯನ್ನು ಅಂತ್ಯಗೊಳಿಸಬೇಕು ಎನ್ನುವ ಲೆಕ್ಕಾಚಾರದಲ್ಲಿರುವ ವಾಹಿನಿ ಟಿಆರ್‌ಪಿ ಆಧಾರದ ಮೇಲೆ ಬಿಗ್ ಬಾಸ್‌ಗೆ ಸಮಯ ಮಾಡಿಕೊಡಲು ಮೂರು ಧಾರಾವಾಹಿಗಳನ್ನು ಅಂತ್ಯಗೊಳಿಸಲಿದೆ. ಅಲ್ಲದೇ ಕೆಲವು ಧಾರಾವಾಹಿಗಳ ಸಮಯ ಕೂಡ ಬದಲಾವಣೆ ಆಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದ ಕಾರಣ ಕೆಂಡಸಂಪಿಗೆ, ಚುಕ್ಕಿತಾರೆ ಹಾಗೂ ಅಂತರಪಟ ಧಾರಾವಾಹಿಗಳು ಮುಕ್ತಾಯಗೊಳ್ಳುವ ಸಾಧ್ಯತೆ ಹೆಚ್ಚಿದೆ. ಸದ್ಯ ಈ ಧಾರಾವಾಹಿಗಳ ಟಿಆರ್‌ಪಿ ಕುಸಿದಿರುವ ಕಾರಣ ವಾಹಿನಿ ಈ ಧಾರಾವಾಹಿಗಳನ್ನೇ ಅಂತ್ಯಗೊಳಿಸುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಉಳಿದಂತೆ ಎಲ್ಲಾ ಧಾರಾವಾಹಿಗಳ ಪ್ರಸಾರ ಮುಂದುವರಿಯಲಿದ್ದು, ಸಮಯ ಬದಲಾಗುವ ಸಾಧ್ಯತೆ ಇದೆ.












Click it and Unblock the Notifications