ಸ್ವಂತ ಮಕ್ಕಳ ಮುಂದೆ ನಟ ಯಶ್ ಮಾಡಿದ ಆ ಕೆಲಸಕ್ಕೆ ಫ್ಯಾನ್ಸ್ ಫಿದಾ!
ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಸಿನಿಮಾ ಶೂಟಿಂಗ್‌ಗಾಗಿ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಇನ್ನು ಮುಂಬೈನಲ್ಲಿ ತಮ್ಮ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳೊಂದಿಗೆ ಯಶ್ ಸುತ್ತಾಡಿರುವ ವಿಡಿಯೋಗಳು ವೈರಲ್ ಆಗಿವೆ. ಈ ವೇಳೆ ಯಶ್ ಅವರ ನಡೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಯಶ್ ಅವರು ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡುವೆಯೂ ತಮ್ಮ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ. ತಮ್ಮ ಪುತ್ರನನ್ನ ಎತ್ತಿಕೊಂಡೇ ಯಶ್ ನಡೆದಾಡಿದ್ದಾರೆ. ಈ ವೇಳೆ ಮುಂಬೈನ ಮಕ್ಕಳು ಯಶ್ ಅವರ ಬಳಿ ಬಂದಿದ್ದು, ಯಶ್ ಆ ಮಕ್ಕಳ ತಲೆ ಸವರಿ ಮುದ್ದಾಡಿದ್ದಾರೆ. ಕಂಕುಳಲ್ಲಿ ಯಶ್ ತಮ್ಮ ಪುತ್ರನಿದ್ದರೂ ಈ ಮಕ್ಕಳನ್ನು ಮುದ್ದಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಯಶ್ ಅವರ ಸಿಂಪ್ಲಿಸಿಟಿ ಎಂದು ನೆಟ್ಟಿಗರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ಇದೇ ವೇಳೆ ಮುಂಬೈನ ವ್ಯಕ್ತಿಯೊಬ್ಬ ಯಶ್ ಅವರ ಕಾಲಿಗೆ ಬೀಳಲು ಮುಂದಾದಾಗ ಯಶ್ ಅದನ್ನು ನಿರಾಕರಿಸಿದ್ದಾರೆ. ಅಲ್ಲಿದ್ದವರನ್ನು ನಗುತ್ತಲೇ ಮಾತನಾಡಿಸಿ, ಕಾರಿನಲ್ಲಿ ತೆರಳಿರುವ ವಿಡಿಯೋ ವೈರಲ್ ಆಗಿದೆ. ರಾಧಿಕಾ ಪಂಡಿತ್ ಅವರೊಂದಿಗೆ ಯಶ್ ಮುಂಬೈನಲ್ಲಿ ಸುತ್ತಾಡಿದ್ದು, ಈ ವಿಡಿಯೋಗೆ ಫ್ಯಾಮಿಲಿ ಗೋಲ್ ಅಂದ್ರೆ ಹೀಗಿರಬೇಕು ಎಂದು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಧೂಳೆಬ್ಬಿಸುತ್ತಿದ್ದಾರೆ. ಇತ್ತೀಚೆಗೆ ಯಶ್ ಅವರು ತಮ್ಮ ಪ್ರೊಫೈಲ್ ಫೋಟೋ ಅಪ್‌ಡೇಟ್ ಮಾಡಿ ಹುಚ್ಚೆಬ್ಬಿಸಿದ್ದರು. ಈ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು ಟಾಕ್ಸಿಕ್ ಸಿನಿಮಾದ ದೊಡ್ಡ ಅಪ್‌ಡೇಟ್ ಎಂದು ನಂಬಿದ್ದರು. ಇನ್ನು ಸಾಮಾನ್ಯವಾಗಿ ಯಶ್ ಆಗಾಗ ಪ್ರೊಫೈಲ್ ಫೋಟೋ ಅಪ್‌ಡೇಟ್ ಮಾಡೋದಿಲ್ಲ. ಏನಾದ್ರು ವಿಶೇಷ ಇದ್ದರಷ್ಟೇ ಅವರು ಈ ರೀತಿ ಸರ್‌ಪ್ರೈಸ್ ಕೊಡುತ್ತಾರೆ ಯಶ್. ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಯಶ್ ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ.

ಯಶ್ ತಮ್ಮ ಪ್ರೊಫೈಲ್ ಫೋಟೋ ಚೇಂಜ್ ಮಾಡುವ ಮೂಲಕ ಏನೋ ಅಪ್‌ಡೇಟ್ ನೀಡಿದ್ದಾರೆ ಎಂದು ಅಭಿಮಾನಿಗಳು ಕುತೂಹಲದಲ್ಲಿದ್ದು, ಈ ಫೋಟೋ ಮೆಚ್ಚಿಕೊಂಡಿರುವ ಹಲವರು ನಿಮ್ಮ ಲುಕ್ ಬೆಂಕಿ ಎಂದು ಕಾಮೆಂಟ್ ಮಾಡಿದ್ದಾರೆ. ಬಾಸ್ ಏನೋ ಹೇಳೋಕೆ ಹೊರಟಿದ್ದಾರೆ...ಎಲ್ರೂ ರೆಡಿ ಆಗ್ರೋ ಎಂದು ಯಶ್ ಅಭಿಮಾನಿಗಳು ಖುಷ್ ಆಗಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿರೋ ಟಾಕ್ಸಿಕ್ ಚಿತ್ರತಂಡ ಸದ್ಯ ಮುಂಬೈನಲ್ಲಿ ಬೀಡುಬಿಟ್ಟಿದೆ. ಡೈರೆಕ್ಟರ್ ಗೀತು ಮೋಹನ್‌ದಾಸ್ ಟಾಕ್ಸಿಕ್ ಸಿನಿಮಾಗಾಗಿ 200 ದಿನಗಳ ಶೂಟಿಂಗ್ ಶೆಡ್ಯೂಲ್ ಮಾಡಿಕೊಂಡಿದ್ದಾರೆ. ಲಂಡನ್ ಹಾಗೂ ಇತರೆ ಸ್ಥಳಗಳಲ್ಲಿ ಶೂಟಿಂಗ್ ಮುಂದುವರಿಯಲಿದ್ದು, ಶೀಘ್ರವೇ ಚಿತ್ರತಂಡ ಲಂಡನ್‌ಗೆ ಹಾರಲಿದೆಯಂತೆ. ಟಾಕ್ಸಿಕ್ ಸಿನಿಮಾದಲ್ಲಿ ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವು ನಟಿಯರು ಇದ್ದು, ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ.












Click it and Unblock the Notifications